ಪುಟ:ರಾಯಚೂರು ವಿಜಯ ಭಾಗ ೧ .djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಪ್ರಕರಣ ಜೈನ ಆ ಮಂತ್ರಿವರನು ರಾಯರ ಆಕಾರಲಕ್ಷಗಳು ವಿಪರೀತ ವಾಗಿದ್ದುದರಿಂದ ಅದಕ್ಕೆ ಪ್ರಬಲವಾದ ಕಾರಣವೇನೋ ಇರಬಹುದೆಂದು ಊಹಿಸಿಕೊಂಡು ಈ ಮುಂದೆ ಹೇಳುವಂತೆ ಸಂಭಾಷಿಸತೊಡಗಿದನು:- ಮು೦ತ್ರಿ-“ ಮಹಾಸ್ವಾಮಿಯವರು ಏನೋ ವಿಚಾರಕ್ಕೊಳಗಾಗಿರು ವಂತೆ ತೋರುವುದು ; ನಾನು ತಿಳಿಯಟಹುದಾಗಿದ್ದರೆ, ಅದನ್ನು ಕೇಳಿ ತಿಳಿದುಕೊಳ್ಳುವ ಭಾಗ್ಯವನ್ನು ನನಗೆ ಉಂಟುಮಾಡಬೇಕು. !! ಕೃ, ದೇ-“ ಅಪ್ರಜೆ ! ವಿಷ ಯವೇನೂ ಬಹಳ ವಿಷಾದಕರವಾ ದುದು, ಮೊದಲು, ವಿಜಯಸಿಂಹನ ನಡತೆಯ ವಿಷಯದಲ್ಲಿ ನಿಮಗೇನಾದರೂ ವರ್ತಮಾನ ತಿಳಿದಿದ್ದರೆ ಅದನ್ನು ತಿಳಿಸಿ ಬಳಿಕ ನನ್ನ ಸಂಗತಿಯನ್ನು ತಿಳಿಸುವೆನು, ” ಮಂತ್ರಿ-“ವಿಜಯಸಿಂಹನ ಚಾರಿತ್ರವು ಅನಿಂದ್ಯವಾದುದು, ಕಲವರು ರಾಜದ್ರೋಹಿಗಳು ಬಂದು ಅವನನ್ನು ಎಷ್ಟು ಪ್ರೋತ್ಸಾಹಿಸಿದರೂ, ನಮ್ಮ ವಿಷಯದಲ್ಲಿ ಎಳ್ಳಷ್ಟಾದರೂ ದ್ರೋಹವನ್ನು ಅವನು ಬಗೆಯಲಿಲ್ಲವಂತೆ. ಇದಲ್ಲದೆ ರಾಜರೋಹಿಗಳನ್ನು ಹಿಡಿದುಬಿಡುವ ಪ್ರಯತ್ನವನ್ನು ನಡೆ ಯಿಸಿದರೂ ದೈವೇಚ್ಛೆಯು ಬೇರೆಯಾಗಿದ್ದುದರಿಂದ ವಿಜಯಸಿಂಚನ ಪ್ರಯತ್ನವು ಸಫಲವಾದ ವಿಪರಿತನವುಂಟಾಯಿತಂ ತೆ ೨, - ಕೃ; ದೇ-“ದೈವವು ಉಂಟುಮಾಡಿದ ವಿಪರೀ ತಫಲವೇನು ? !” ಮಂತ್ರಿಯು ಆನೆಗೊಂದಿಯಲ್ಲಿ ನಡೆದ ವೃತ್ತಾಂತವಲ್ಲವನ ನಿವೇ ದಿಸಿದನು. ಕೃ, ದೇ-“ವಿಜಯಸಿಂಹನನ್ನು ಮೃತ್ಯುಮುಖದಿಂದ ತಪ್ಪಿಸಲು, ಮುಕ್ತಾಂಬೆಗೇನು ಅಷ್ಟು ಆವಶ್ಯಕ ? ,, ಮಂತ್ರಿ-“ವಿಜಯಸಿಂಹನು ಮುಕ್ತಾಂಬೆಯನ್ನು ಪ್ರೀತಿಸಿರುವನಂತ. ಮುಕ್ಕಾಂಬೆಗೂ ಅವನಲ್ಲಿ ಪ್ರೀತಿಯಿರುವುದರಿಂದ ಅವರಿಬ್ಬರೂ ದಂಪತಿಗೆ ೪ಾಗಬೇಕೆಂದಿರುವರಂತೆ ೨೪ ಕೃ, ದೇ-“ವಿಜಯಸಿಂಹನು ಇತರ ಸ್ತ್ರೀಯರಲ್ಲೂ ಅನುರಕ್ತನಾ ಗಿರುವಂತೆ ತೋರುತ್ತದೆ' ಮಂತ್ರಿ-“ವಿಜಯಸಿಂಹನು ಮತ್ತೆ ಯಾವ�ಯರಲ್ಲಿ ಅನುರಕ್ತ ನಾಗಿರುವನು ??