ಪುಟ:ರಾಯಚೂರು ವಿಜಯ ಭಾಗ ೧ .djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ರಾಯರು ವಿಜಯ ಮುಕ್ತಾಂಬೆಯ ದೆಸೆಯಿಂದಲೇ ಮುಖ್ಯವಾಗಿ, ಅವಳು ವಿಜಯಸಿಂಹನಿಗೆ ಮನಸೋತಿರುವಳು ” ಎಂದು ಹೇಳಿ, ೧೪ದ ವೃತ್ತಾಂತವನ್ನೆಲ್ಲಾ ಸಮ ಗ್ರವಾಗಿ ತಿಳಿಸಿದನು. ಈ ಸಮಾಚಾರವನ್ನು ಕೇಳಿ ಸಭೆಯವರೆಲ್ಲರೂ ಆಶ್ಚಯ್ಯಭರಿತರಾದ ರು, ರುದ್ರದೇವನಿಗೆ ಆಕ್ಷ ಗ್ಯಮಾತ್ರವಲ್ಲದೆ ದುರ್ಭರವಾದ ಚಂತೆಯ ಉಂಟಾಯಿತು, ಸಕಾಲದಲ್ಲಿ ಮುಕ್ಕಾಂಬೆಯು ತನ್ನನ್ನು ವರಿಸುವಳೆಂದೂ, ಆಗ ತನ್ನ ಮನೋರಥವು ಕೈಗೂಡುವುದೆಂದೂ ವಿಧವಿಧವಾಗಿ ಮನಸ್ಸಿನ ಲ್ಲಿಯೇ ಆಲೋಚಿಸಿಕೊಳ್ಳುತ್ತಾ ಆಕಾಶಹರಗಳನ್ನು ಕಲ್ಪಿಸಿಕೊಳ್ಳು ತಿದ್ದ ರುದ್ರದೇವನಿಗೆ ಮುಕ್ತಾಂಬೆಯು ವಿಜಯಸಿಂಹನಲ್ಲಿ ಅನುರಕ್ತಳಾಗಿ ರುವಳಂದು ಕೇಳಿದಕೂಡಲೆ ಚಿಂತೆಯುಂಟಾದುದರಲ್ಲಿ ವಿಶೇಷವೇನು ? ಈ ಚಿಂತೆಯು ಬಹುಕಾಲವಿರಲಿಲ್ಲ. “ ಈಗಲಾದರೂ ಆ ದುರಾತ್ಮನು ನಾಕ ವಾಗಲಾಗನೇ ? ಇಷ್ಟು ಹೊತ್ತಿಗೆ ಆಗಲೇ ಅವನು ಯಮಪಟ್ಟಣದ ದಾರಿ ಯನ್ನು ಹಿಡಿದಿರಬೇಕು ಎಂದು ತೋರುವುದು, ಮುಕಾಂಬೆಯು ಅಂತಹ ಕಲಸಮಾಡಿದ್ದರೆ, ಅವಳು ಈ ಸಭೆಗೆ ಬಾರದಿದ್ದುದೇ ಬಹಳ ಕ್ಷೇಮ * ವಂದು ರುದ್ರದೇವನು ಉತ್ತರಹೇಳಿದನು. ರಾಮ ಯು. ಸಭೆಗೆ ಬರಬೇಕೆಂದು ಮುಕ್ತಾಂಬೆಯನ್ನು ನಾನು ಕರೆಯದಿದ್ದ ಮಾತ್ರಕ್ಕೆ ಆಕೆಗೆ ಕೋಪಬರುವಂತಿ, ವಿಜಯಸಿಂಹನು ಇಂದೋ ನಾಳ. ಸಾಯುವನು ; ಬಳಿಕ ನಿನ್ನ ಬಯಕೆಯು ಕೈಗೂಡು ವುದು ” ಎಂದು ರುದ್ರದೇವನಿಗೆ ಸಮಾಧಾನಹೇಳಿದನು. ಪ್ರಹರೇಶ್ವರನಾದರೋ “ ನಿಮ್ಮ ಬಲೆಯಲ್ಲಿ ಸಿಕ್ಕಿಬಿದ್ದ ಮೇಲೆ ಅವನಿಗೆ ಬಿಡುಗಡೆಯಲ್ಲಿ ? ಇದಕ್ಕಾಗಿ ರುದ್ರದೇವನೂ ನೀವೂ ಮಾಡಿದ ಕಾಕ್ಯಗಳನ್ನು ಎಷ್ಟು ಹೊಗಳಿದರೂ ಕಡಿಮೆಯೇ, ಇಷ್ಟು ಬುದ್ಧಿ ಕುಶಲತೆ ಯನ್ನು ಹೊಂದಿರುವ ರುದ್ರದೇವನೇ ಮುಕ್ವಾಂಬೆಗೆ ತಕ್ಕ ಪತಿ ಎಂಬುದು ನನ್ನ ಅಭಿಪ್ರಾಯ : ವೆಂದು ಹೇಳಿದನು. ಇದನ್ನು ಕೇಳಿ ರಾಮಯನು “ ನಿನ್ನ ಮತು ಯುಕ್ತವಾದುದೇ ಸರಿ, ಆದರೂ ಮುಕ್ಕಾಂಬೆಯ ಅನುರಾಗವು ವಿಜಯಸಿಂಹನನ್ನು ಬಿಟ್ಟು, ರುದ್ರದೇವನಲ್ಲಿ ನೆಲೆಗೊಳ್ಳುವುದು ಸುಲಭವಲ್ಲ. ಹಳ್ಳಕ್ಕೆ ಹರಿಯುತ್ತಿರುವ