ಪುಟ:ರಾಯಚೂರು ವಿಜಯ ಭಾಗ ೧ .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ vv #rvy Murrrrr 11, • Awh, - ಭ ಕೋಮಲವಾದ ಪಾಏಶರೀರವು ಇಂತಹ ಆಸತ್ತನ್ನೂ ತಡೆದುಕೊಂಡು ಬದುಕಿರುವುದಲ್ಲಾ? ಅಯ್ಯೋ ! ಮೃತ್ಯುದೇವತೆಗೂ ನನ್ನ ಮೇಲೆ ದಯೆ ಯಿಲ್ಲವಲ್ಲಾ? " ಮಾಲತಿಅಮ್ಮಾ ! ಸುಖವನ್ನನುಭವಿಸಿ ದುಃಖಕ್ಕೆ ಈಡಾಗುವುದು ಅತ್ಯಂತ ದುಶ್ಚರವಾಗುವುದು. ಆದರೆ ಕಷ್ಟಗಳನ್ನೂ ಅವಮಾನಗಳನ್ನೂ ಅನುಭವಿಸುತ್ತಿರುವವರು ಪ್ರಪಂಚದಲ್ಲಿ ಎಷ್ಟು ಮಂದಿ ಇಲ್ಲ? ಅವರೆಲ್ಲರೂ ಪ್ರಾಣಬಿಡಬೇಕೆಂತಲೇ ಪ್ರಾರ್ಥಿಸುತ್ತಿರುವರೇ ? ಕಷ್ಟ ಸುಖಗಳ ಬದಲಾ ಯಿಸುತ್ತಿರುತ್ತವೆ. ನಿನಗೆ ಬಂದಿರುವ ಈ ಕಷ್ಟವು ತಾನೇ ಎಷ್ಟು ದಿನವಿ ದೀತು ? ನಿರಪರಾಧಿಯಾದ ನಿನ್ನನ್ನು ಅವಮಾನ ಪಡಿಸಿದುದರಿಂದ ರಾಜೇಂ ದ್ರರಿಗೂ ಪಶ್ಚಾತ್ತಾಪ ಹುಟ್ಟಲೇಹುಟ್ಟುವುದು, ನಿನ್ನನ್ನು ಶೀಘ್ರದಲ್ಲೇ ಪುನಃ ತಮ್ಮ ಬಳಿಗೆ ಕರೆಯಿಸಿಕೊಳ್ಳುವರು. ಆದುದರಿಂದ ನಿನ್ನ ಯೋಚ ನೆಯನ್ನು ಬಿಟ್ಟು ಧೈಯ್ಯ ತಂದುಕೊ. " ಅನಂಗ-* ಸಖಿ ! ನಿನ್ನ ಸಮಾಧಾನೋಕ್ತಿಗಳು ನನಗೆ ಶಾಂತಿಯ ನ್ನುಂಟುಮೂಡಲಾರನೆ, ಇನ್ನು ನನ್ನ ಸ್ವಾಮಿಯ ಪಾದದರ್ಶನವು ನನಗೆಲ್ಲಿ ದೊರೆಯುವುದು ? ದೊರೆತರೂ ನನ್ನ ಹಿಂದಿನ ಗೌರವವು ಉಂಟಾಗುವುದು ಹೇಗೆ ? ನನಗೆ ಅಂತಹ ಅದೃಷ್ಟವು ಇರುವುದೇ ? ನಿನ್ನ ಸಮಾಧಾನೋಕ್ತಿ ಗಳಿಂದ ನನಗೆ ಇದುವರೆಗೂ ಜೀವವು ಅಂಟಿಕೊಂಡಿದೆ. ಇಲ್ಲದಿದ್ದರೆ ಈ ವೇಳೆಗೆ ಎಲ್ಲಿರುತ್ತಿತೆ ? ಎಲ್ಲಿ, ನೆನ್ನೆ ಸಂಜೆಗೇ ಬರುವೆನೆಂದು ಹೇಳಿದ್ದ ಬ್ರಾಹ್ಮಣನು ಇನ್ನೂ ಬರಲಿಲ್ಲವಲ್ಲಾ?” ಮಾಲತಿ-“ ಆತನಿಗೆ ಕೆಲಸವಿದ್ದುದರಿಂದ ಇನ್ನೂ ಬರಲಿಲ್ಲ. ಹೇಗಿ ದ್ದರೂ ಜಾಗ್ರತೆಯಾಗಿಯೇ ಬರುವನು. ಬೆಳಗಿನವರೆಗೂ ನೋಡೋಣ. ಗಲೂ ಆತನು ಬಾರದಿದ್ದರೆ, ಈ ಸ್ಥಳವನ್ನು ಬಿಟ್ಟು ಹೋಗೋಣ. ನಿನ್ನ » |