ಪುಟ:ರಾಯಚೂರು ವಿಜಯ ಭಾಗ ೧ .djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

H> ಕರ್ಣಾಟಕ ಗ್ರಂಥಮಾಲೆ wwwy ಟ ದ. ರುದ್ರ- ಸುಂದರಿ, ನಿನಂತೆಯೇ ನಾವೂ ದಯಾದ್ರ್ರಹೃದಯರಾ ದರೆ ಶತ್ರುಹಸ್ತಗತವಾದ ರಾಜ್ಯವನ್ನು ಸಂಪಾದಿಸುವುದು ಹೇಗೆ ? ಶತ್ರು ಗಳಿಗೆ ಆಪತ್ತನ್ನು ಉಂಟುಮಾಡದೆ ನಾವು ಅಭಿವೃದ್ಧಿ ಯಾಗುವುದು ಹೇಗೆ ? ಯುದ್ಧವು ಕೊರವೆಂದು ಹಿಂತೆಗೆದರೆ ಯಾವ ದೊರೆಯ ರಾಜ್ಯ ವುತಾನೆ ಉಳಿದೀತು ? ರಾಜನು ಎಷ್ಟೇ ದಯಾಳುವಾದರೂ, ರಾಜ್ಯಾಭಿವರ್ಧನಕ್ಕಾಗಿ ಎಂತಹ ಕೂರಕೃತ್ಯವನ್ನಾದರೂ ಮಾಡಲೇಬೇಕು, ರಾಜ್ಯ ತಂತ್ರ ವಿಶಾರದ ನಾದ ರಾಮಯಮಂತ್ರಿಯ: ಆದ.ರ್ದ ಇದಲೇ ಇಂತಹ ಕಾರ್ಯದಲ್ಲಿ ಪ್ರಪ್ಪ ತನಾಗಿರುವನು. ಅನಂಗಸೇನೆ Jನ್ನು ಮಹಮದೀ ಬುನಿಗೆ ವಶಪಡಿಸಿದಂ ತೆಯೆ ನಿನಗೂ ಏನಾದರೂ ಅಂತಹ ದುರವಸ್ಥೆಯು ಬರಬಹುದೆಂದು ಸಂಶ ಯವಿದ್ದೀತು. ದುಷ್ಟ ಸ್ವಭಾವದವರಾದ ಮೇಟ್ಟರಿಂದ ನಿನಗೆ ಯಾವ ಬಗೆಯ ಅವಮಾನವಾದರೂ ಸಂಭವಿಸಿದಂತೆ ನನ್ನನ್ನು ನಿನ್ನ ಕಾವಲಿಗೆ ನೇಮಿಸಿರು ವನು. ನನ್ನ ಜೀವವಿರುವರೆಗೂ ನಿನಗೆ ಯಾವ ಅಪಾಯವೂ ಬರಲಾರ ದೆಂದು ಸಂಪೂರ್ಣವಾಗಿ ತಿ೪.” ಎಂದನು. ಮುಕ್ಕಾಂಬೆ-“ ರುದ್ರದೇವ! ಬಹಳ ಸಂತೋಷವಾಯಿತು. ನಿನ್ನ ಅನುರಾಗದ ಆಳವನ್ನು ಕಂಡು ಹಿಡಿಯಬೇಕೆಂದೇ ನಿನ್ನನ್ನು ಹೀಗೆ ಮಾತ ನಾಡಿಸಿದೆನು. ಆದುದರಿಂದ ಬೇರೆ ತಿಳಿದುಕೊಳ್ಳಬೇಡ, ನನಗೆ ಅಪಾಯ ತಟ್ಟದಂತೆ ಕಾಪಾಡುತ್ತಿರು. ” ರುದ್ರದೇವನು ಆಕೆಯ ಆಶಯವನ್ನು ತಿಳಿದುಕೊಳ್ಳಲಾರದೆ ಮುಕ್ಕಾಂಬೆಯು ತನ್ನ ಮೇಲೆ ನಿಜವಾಗಿಯೂ ಅನುರಾಗದಿಂದಿರುವಳೆಂದು ತಿಳಿದುಕೊಂಡನು. ಇಷ್ಟರಲ್ಲಿಯೇ ಪ್ರಹರೇಶ್ವರನಿಗೂ ಎಚ್ಚರವಾಯಿತು. ಆಗೆ ಉಳಿದವರನ್ನೂ ಎಬ್ಬಿನಿ ಮುಕಾಂಬೆಯನ್ನು ಮೇನದಲ್ಲಿ ಕುಳ್ಳಿರಿಸಿ ಒಂದುಕಡೆ ಪ್ರಹರೇಶ್ವರನ ಮತ್ತೊಂದು ಕಡೆ ತಾನೂ ಖಡ್ಡ ಪಾಣಿಗಳಾಗಿ ರಕ್ಷಿಸುತ್ತಾ ಪ್ರಯಾಣಮಾಡಿ ಅವರೆಲ್ಲರೂ ರಾಯರಿಗೆ ಬಂದು ಸೇರಿದರು -wws ಟ