ಪುಟ:ರಾಯಚೂರು ವಿಜಯ ಭಾಗ ೧ .djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯುವಿಜಯ ೮೫ ܘ ܩ ನಾವು ಮಾಡುವ ಸೇವೆಯನ್ನು ಅಂಗೀಕರಿಸುತ್ತಿರಬೇಕು.” ಎಂದು ಹೇಳಿ ಆತನನ್ನು ಒಬ್ಬ ಸೇವಕನೊಡನೆ ಕಳುಹಿಸಿಕೊಟ್ಟು ಬಂದು ಸುಂದರಮಂದಿರದಲ್ಲಿ ಇಳಿದುಕೊಳ್ಳುವಂತೆ ಏರ್ಪಡಿಸಿದನು. ಈ ಮಾತು ಗಳನ್ನು ಕೇಳಿ ಸಭಾಸದರಿಗೆ ಅತ್ಯಾಶ್ಚರವಾಗಿ ತಮ್ಮ ಮನಸ್ಸಿ ನಲ್ಲೇ ಆ ಅದಿಲ್‌ರ್ಪನನ್ನು ನಿಂದಿಸುತ್ತಿದ್ದರು. ಶತುರಾಜನು ತನ್ನ ನ್ನು ನಿಂದಿಸುತ್ತಿದ್ದರೂ ಅದೆಲ್ಲವನ್ನೂ ಕೇಳಿ ಸುಮ್ಮನಿದ್ದುದು ಬಾದ್ ಪಹನ ಸ್ವಾಭಿಮಾನಶೂನ್ಯತೆಯನ್ನು ವ್ಯಕ್ತಪಡಿಸುವುದೆಂದು ತಿಳಿದು ಕೂಂಡರು. ಬುದ್ದಿವಂತನಾದ ರಾಮಯಮಂತ್ರಿಯ ಸಹಿತ ಅದಿಲ್ ಪಹನ ಕಾವ್ಯವನ್ನು ಮೆಚ್ಚದೆ ಹೋದನು. ರುದ್ರದೇವ ಪ್ರಹರೇಶ್ವರ ರಾದರೋ ತಮ್ಮ ಶತ್ರುವಿಗೆ ಶಿಕ್ಷೆಯಾಗದೆ ಬಹುಮಾನಸಿಕ್ಕಿದುದಕ್ಕಾಗಿ ಬಹಳವಾಗಿ ಪರಿತಪಿಸುತ್ತಿದ್ದರು. ಆಗ ಆದಿಲ್ ಷಹನು ಸಭೆಯ ಕಲ ಕಲವನ್ನು ನಿಲ್ಲಿಸಿ, ಸಭಾಸದರೇ! ನಿಮ್ಮ ಅಭಿಪ್ರಾಯವು ನಮಗೆ ತಿಳದಿದೆ. ಬೇಟೆಗಾರನು ದುಷ್ಟಮೃಗವನ್ನು ಬೇಟೆಯಾಡುವುದಕ್ಕಾಗಿ ಅದಕ್ಕೆ ಮುಂಚೆ ಮಾಂಸಾಹಾರವನ್ನು ಇಡುವುದು ಯುಕ್ತವೇತಾನೆ. ಹಾಗೆಯೇ ನನ್ನ ಬಹುಮಾನವೂ ಎಂದು ಭಾವಿಸಿರಿ. ವಿಜಯಸಿಂಹನು ಈಗಲೇ ವಿಜಯನಗರಕ್ಕೆ ಹೊರಟರೆ ರಾಯರಿಗೆ ನನ್ನ ಅಭಿಪ್ರಾಯವು ತಿಳಿದು ಹೋಗುವುದು; ಈಗ ನಾವುಮಾಡಬೇಕಾದ ಕೆಲಸವೇನು ರಾಯ ಭಾರಿಯೊಡನೆ ಏನು ಕೇಳಿಕಳುಹಿಸೋಣ ?” ಎಂದು ಕೇಳಿದನು. ಇದನ್ನು ಕೇಳಿ ತೋಫಖಾನನು ಎದ್ದು ಸಲಾಮುನಾಡಿ, ೯೯ ಮಹಾಪ್ರಭುಗಳ« ! ಈ ವಿಷಯದಲ್ಲಿ ಯೋಚಿಸುವುದೇನಿದೆ? ಯುದ್ಧಕ್ಕೆ ಬರಬಹುದೆಂದು ಹೇಳಕಳುಹಿಸುವುದೇ ಯುಕ್ತ. ಹೃದಯಶಲ್ಯದಂತಿ ರುವ ಶತ್ರುವನ್ನು ಉಳಿಸುವುದು ಯುಕ್ತವೇ !” ಎಂದು ಗರ್ವ ದಿಂದ ಹೇಳಿದನು.