ಪುಟ:ರಾಯಚೂರು ವಿಜಯ ಭಾಗ ೧ .djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಯದಿ ರುವಿಜಯ ಆಳ AMA//MA

  1. ಒr /*/Y + A # # # # # # # #

N #\\WhPVANY ಶಂ-( ಅಯ್ಯಾ ! ರಾಮರಾಜ ! ನಾವು ತಂದಕಾಗದವನ್ನು ಅನಂ ಗಸೆನೆಗೆ ಹೇಗೆ ತಲುಪಿಸಬಹುದೆಂದು ಯೋಚಿಸುತ್ತಾ ಆ ಸೌಧದ ಏಕಾ ರದ ದ್ವಾರದ ಹತ್ತಿರದಲ್ಲಿ ಸಂಚರಿಸುತ್ತಿದ್ದೆನು. ಅಷ್ಟರಲ್ಲಿ ಮಾಲತಿಯು ಆ ದ್ವಾರದ ಬಳಿಗೆ ಬಂದು, “ ನಮ್ಮ ಯಜಮಾನಿಗೆ ರೋಗವುಂಟಾಗಿದೆ. ಆಕೆಗೆ ಔಷಧವನ್ನು ತಂದುಕೊಡಬೇಕಾಗಿದೆ. ನನ್ನನ್ನು ಊರಿನೊಳಕ್ಕೆ ಹೋಗಗೊಡಿಸಿ.” ಎಂದು ದ್ವಾರಪಾಲಕರನ್ನು ಬೇಡಿಕೊಳ್ಳುತಿದ್ದಳು. ಆದರೆ ನಿಷ್ಕರುಣಿಗಳಾದ ಅವರು ಆಕೆಯನ್ನು ಹೋಗಗೊಡಲಿಲ್ಲ, ಅದನ್ನು ಕಂಡು ನಾನು ಒಬ್ಬ ವೈದ್ಯನನೇಪವನ್ನು ಹಾಕಿಕೊಂಡು ಔಷಧಗಳ ಹೆಸ ರನ್ನೂ ರೋಗಗಳ ಹೆಸರನ್ನೂ ಹೇಳುತ್ತಾ ಅತ್ತಿತ್ತ ತಿರುಗಾಡುತ್ತಿದ್ದನು. ಆಗ ಮಾಲತಿಯು ಬಂದು, ಹಾಗೆ ಸುತ್ತುತ್ತಿದ್ದ ವೈದ್ಯನಬಳಿಯಲ್ಲಾದರೂ ಕ್ಲಾಷಧವನ್ನು ತೆಗೆದುಕೊಳ್ಳಲು ಅಪ್ಪಣೆಯನ್ನು ಪಡೆದುಕೊಂಡಳು. ಔಷಧ ವನ್ನು ಕಟ್ಟಿಕೊಡುವ ನೆವದಿಂದ ಆ ಕಾಗದವನ್ನು ಆಕೆಗೆ ತಲುಪಿಸಿದೆನು. ದ್ವಾರಪಾಲಕರಿಗೆ ಅನುಮಾನವೇನೂ ಆಗಲಿಲ್ಲ. ಮರುದಿನವೂ ಮಾಲತಿಯು ದ್ವಾರದ ಬಳ ಏರು ಕಾದಿದ್ದು ನನ್ನನ್ನು ಕಂಡು, “ ಅಯ್ಯಾ ವೈದ್ಯರೇ ! ನೀವು ಕೊಟ್ಟ ಔಷಧವು ಒಳ್ಳೆಯದಲ್ಲ. ರೋಗವು ಗುಣವಾಗಲಿಲ್ಲ. ಒಳ್ಳೆಯ ಔಷಧವನ್ನು ಕೊಡಿ ಇಗೋ ನೆನ್ನೆ ನೀವು ಕೊಟ್ಟ ಔಷಧ. ಇದನ್ನು ನೀವೇ ತೆಗೆದುಕೊಳ್ಳಿ” ಎಂದು ಹೇಳಿ ಎರಡು ಕಾಗದಗಳಿದ್ದ ಒಂದು ಪೊಟ್ಟಣವನ್ನು ನನಗೆ ಕೊಟ್ಟಳು. ನಾವು ಪ್ರತಿದಿನವೂ ಹೀಗೆ ಆ ದ್ವಾರದ ಬಳಿಯಲ್ಲಿ ಒಬ್ಬರನ್ನೊಬ್ಬರು ನೋಡುತ್ತಿದ್ದೆವು. ರಾಮರಾಜ- ಮಿತ್ರ ನೇ ! ಬಹಳ ಒಳ್ಳೆಯ ಯುಕ್ತಿ ಮಾಡಿದೆ. ಮಾಲತಿಯು ಮಹಾಬುದ್ದಿವಂತಳು. ಅನಂಗಸೇನೆಗೆ ಯಾವ ಅಪಾಯವೂ ಬಾರದಂತೆ ಕಾಪಾಡುವಳು. ಆಕೆ ಕೊಟ್ಟ ಕಾಗದಗಳಲ್ಲಿ ಏನು ಬರೆ ದಿತು ? !! L