ಪುಟ:ರಾಯಚೂರು ವಿಜಯ ಭಾಗ ೧ .djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ 001 Arv೦೧೧ 1 ಗೋಗಿ// f, • have

  • |

@ ರಾಯರ ವಿಷಯವಾಗಿಯ ಬಹಳ ವಿರೋಧವನ್ನು ವಹಿಸಿ ಮಾತನಾಡಿದ್ದ ವಚನಗಳನ್ನು ವಾಚಕರು ಕೇಳಿಯೇ ಇರುವಿರಲ್ಲವೇ ? ದರ್ಬಾರು ಮುಗಿದಮೇಲೆ ಕೆಲವು ದಿವಸಗಳು ಆದುರ್ಗದಲ್ಲಿ ದ್ದು ಮಲಮಲಖಾನನು ಅಲ್ಲಿಯ ವಿಶೇಷಗಳನ್ನು ನೋಡುತ್ತಿದ್ದನು. ಅವನು ಪರದೇಶಸ್ಥನು. ಸ್ಪಷ್ಟ ಮಹಮ್ಮದೀಯ ವಂಶಸ್ಥನೆಂದು ಆತನಿಗೆ ಬಹಳ ಗರ್ವವಿತ್ತು. ತನ್ನ ಮತದಲ್ಲಿಯ ಈತನಿಗೆ ಅಭಿಮಾನ ಹೆಚ್ಚಾಗಿತ್ತು. ಒಂದು ದಿನ ಈತನು ವಿಹಾರಾರ್ಥವಾಗಿ ಸಂಚರಿಸುತ್ತಿದ್ದಾಗ ಸಭಾಸ್ಥಳಕ್ಕೆ ಬಂದಿದ್ದ ಫಕೀರನು ಇವನ ಇದಿರಿಗೆ ಕಾಣಿಸಿಕೊಂಡನು, ಆಗ ಮಲಮಲಖಾನನು ಆತನಿಗೆ ಸಲಾಮುಮಾಡಿ ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಉಚಿತ ಸನದಲ್ಲಿ ಕುಳ್ಳಿರಿಸಿ ಮಹಮ್ಮದೀಯ ಮತರಹಸ್ಯಗಳನ್ನೂ ಮತಾಭಿವೃದ್ಧಿ ಯನ್ನೂ ಕುರಿತು ಉತ್ಸಾಹದಿಂದ ಮಾತನಾಡುತ್ತಿದ್ದನು. ಫಕೀರನು ಹೆಚ್ಚು ಮಾತನಾಡದೆ ಮಲಮಲಖಾನನ ಮಾತುಗಳನ್ನು ಕೇಳಿ ಸಂತೋಷಿಸಿ ಅಪ ನನ್ನು ಸ್ತುತಿಸಲಾರಂಭಿಸಿದನು. ಫಕೀರನ ಸ್ತುತಿಯು ಹೆಚ್ಚಿದಂತೆಲ್ಲಾ ಬಾನನ ಉತ್ಸಾಹವು ಬಳೆಯುತ್ತಿತ್ತು, ಹೀಗೆ ಸ್ವಲ್ಪ ಹೊತ್ತು ಕಳೆದ ಬಳಿಕ ಫಕೀರನು ಕುಲವ ಲಖಾನನೊಡನೆ ಈ ಮೇರೆಗೆ ಪ್ರಸಂಗಿಸಿದನು :- ಫಕೀರನು- “ ಓ ಮಹಮ್ಮದೀಯ ಶ್ರೇಷ್ಠರೇ ! ನನ್ನ ಮತದಲ್ಲಿ ತಮಗೆ ಇಷ್ಟು ಆಸಕ್ತಿಯಿರುವುದೆಂದು ತಿಳಿದಿರಲಿಲ್ಲ, ತಮ್ಮಂತಹವರು ಪ್ರಭುಗಳಾದರೆ ನಮ್ಮ ಮತವು ತಡೆಯಿಲ್ಲದೆ ಹರಡುವುದಲ್ಲವೇ ? " ಖಾನನು-“ ಮಹನೀಯರೇ ! ತಾವು ಅಪ್ಪಣೆ ಕೊಡಿಸಿದಂತೆ ನನಗೆ ಪ್ರಭುತ್ವವು ದೊರಕಿದರೆ ಹಿಂದುಗಳೆಲ್ಲರನ್ನೂ ಮಹಮ್ಮದೀಯರನ್ನಾಗಿ ಮಾಡದೆ ಇರುವೆನೇ ? ಆದರೆ ನನಗೆ ಅಂತಹ ಅದೃಷ್ಟ ಎಲ್ಲಿಂದ ಬರ ಬೇಕು ?!