ಪುಟ:ರಾಯಚೂರು ವಿಜಯ ಭಾಗ ೧ .djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯರು ವಿಜಯ ೧೦೭ ದೆ ಲ ತಾನಾಗಿಯೇ ಒಪ್ಪುವಳು. ತಾವೂ ರಾಮಯಮಂತ್ರಿಯ.೧ ಕಲೆತು ಈ ವಿಷಯದಲ್ಲಿ ಮಾತನಾಡಿ ಪರಸ್ಪರವಾಗ್ದಾನಮಾಡಿಕೊಳ್ಳುವುದು ಒಳ್ಳ ಯದು, ಮೊದಲು ಹೀಗೆ ಮಾತು ನಡೆದಿದ್ದುದರಿಂದಲೇ ಅಲ್ಲವೇ ? ರಾಮು ಯಮಂತ್ರಿಯು ಕೃಷ್ಣದೇವರಾಯರ ಪ್ರಿಯೆಯಾದ ಅನಂಗಸೇನೆಯನ್ನು ತೋಫಲವಾನನಿಗೆ ವಶಪಡಿಸಿರುವನು ? ತಮ್ಮ ಕೆಲಸವೂ ಹೀಗೆಯೇ ಕೈಗೂಡುವುದು.” ಖಾ-“ ಏನು ! ತೋಫಲವಾನರಿಗೆ ಅನಂಗಸೇನೆಯನ್ನು ವಶಪಡಿ ನಿರುವನೆ ? ಇದು ಸತ್ಯವೆ' ? ” ಫ- ತಮ್ಮಲ್ಲಿ ಅಸತ್ಯವನ್ನು ಹೇಳಬೇಕೇ ? ನಾನು ಒಂದುಸಾರಿ ತೋಫಖಾನರೊಡನೆ ಹೋಗಿ ಪ್ರತ್ಯಕ್ಷವಾಗಿ ಆಕೆಯನ್ನು ನೋಡಿದೆನು. ಆಕೆಯು ಆತನನ್ನು ವರಿಸುವದಕ್ಕೆ ಇಷ್ಟಪಟ್ಟಂತೆಯೇ ತೋರುವುದು.” ಖಾ-“ ಮಹಾತ್ಮರೆ ! ತಾವು ಅಪ್ಪಣೆ ಕೊಡಿಸುವ ಮಾತುಗಳು ಸತ್ಯವೇ ಆಗಿದ್ದರೆ, ರಾಮಯಮಂತ್ರಿಯು ನನ್ನ ಮಾತಿಗೆ ಒಪ್ಪಲೇಬೇಕು ಗಿದೆ. ಇಲ್ಲದಿದ್ದರೆ ನಾನು ಅವನಿಗೆ ಏಕೆ ಸಹಾಯಮಾಡಬೇಕು ? ಇಷ್ಟೇ ಅಲ್ಲ ನಮ್ಮ ಪ್ರಭುವಿನ ಮನಸ್ಸನ್ನೂ ಸಹ ತಿರುಗಿಸಿಬಿಡುವೆನು. ನನ್ನ ಮಹಿಮೆಯನ್ನಾದರೂ ನೋಡಿ !” ಫ-" ಯವನಶ್ರೇಷ್ಠರೇ ! ತಾವು ಹೀಗೆ ಕರಾರುಮಾಡಿಕೊಳ್ಳುವು ದಾದರೆ ತಮ್ಮ ಆಸೆ ಕೈಗೂಡಿತೆಂದು ತಿಳಿಯಿರಿ ರಾವಯಮಂತ್ರಿಯನ್ನು ಕರೆಯಿಸಿ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಿರಿ. ಆದರೆ ಈ ವೃತ್ತಾಂತ ವನ್ನು ನಾನು ಹೇಳಿದೆನೆಂದು ಮಾತ್ರ ಹೇಳ ಬೇಡಿ ನಾನು ಮತ್ತೊಂದು ಸಲ ಬಂದು ತಮ್ಮನ್ನು ಕಾಣಿಸಿಕೊಳ್ಳುವೆನು.” ಹೀಗೆ ಹೇಳಿ ಆತನು ಹೊರಟುಹೋದನು.