ಪುಟ:ರಾಯಚೂರು ವಿಜಯ ಭಾಗ ೧ .djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯ್ಕರುವಿಜಯ ೧೧೯ ಎಲ್ಲೆಲ್ಲಿಯ ಕತ್ತಲೆಯು ಕವಿದುಕೊಂಡಿದ್ದು ದರಿಂದ ಆಕೆಗೆ, ಬಹಳ ಭಯವಾಯಿತು. ಆಕೆಯು ಹೋಗುತ್ತಿದ್ದ ಮಾರ್ಗದಲ್ಲಿ ಗಿಡಗಳು ದಟ್ಟವಾಗಿ ಬೆಳೆದುಕೊಂಡಿದ್ದು ದರಿಂದ ಆಕೆಯ ಭಯವು ಮತ್ತೂ ಹೆಚ್ಚಿತು. ಆದರೂ ಧೈಯ್ಯ ತಂದುಕೊಂಡು ಮುಂದುಮುಂದಕ್ಕೆ ಹಜ್ಜೆಯಿಡುತ್ತಿದ್ದಳು. ಆಗ ಗಿಡಗಳ ಮಧ್ಯದಿಂದ ಒಬ್ಬ ಪುರುಷನು ಬಂದು ಮಾಲತಿಯ ಭುಜದಮೇಲೆ ಕೈಯಿಟ್ಟನು. ಈ ಕಾಲದಲ್ಲಿ ಮಾಲತಿಗೆ ಆದ ಭಯ ವನ್ನು ವರ್ಣಿಸುವುದು ಸಾಧ್ಯವಲ್ಲ, ಆಗ ಆ ಪುರುಷನು ೮ ಸುಂದರಿ 1 ಭಯಪಡಬೇಡ : ನಾನು, ನಿನ್ನ ಪ್ರಿಯನಾದ ಶಂಕರರೆಡ್ಡಿ ಎಂದನು. ಆ ಧ್ವನಿಯನ್ನು ಗುರುತುಕಂಡು ಹಿಡಿದಕೂಡಲೇ ಮಾಲತಿಗೆ ಭಡುಕು ಹೋಗಿ ಬಹಳ ಸಂತೋಷವುಂಟಾಯಿತು. ಆಗ ಶಂಕರರೆಡ್ಡಿ ಯು ಆಕ ಯನ್ನು ಒಂದು ದೇವಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕುಳಿತು ಕೊಂಡನು. ಆಗ ಮಾಲತಿಯು ತನ್ನ ಹೃದಯವಲ್ಲಭನ ಹಸ್ತವನ್ನು ತನ್ನ ಕೈಯಿಂದ ಹಿಡಿದುಕೊಂಡು, CS ಪ್ರಿಯರೇ ! ನಮ್ಮ ಬಂಧು Tಳಲ್ಲಿ ಒಬ್ಬರೊಡನೆಯಾದರೂ ಹೇಳದೆ ನಾನು ಬಂದು ಬಿಟ್ಟುದು ಅಪರಾಧ ವೆಂದು ಈಚೆಗೆ ತಿಳಿಯಿತು, ನನ್ನ ತಪ್ಪನ್ನು ಕ್ಷಮಿಸಬೇಕು. ನನ್ನನ್ನು ತನ್ನ ಪಣವೆಂದು ಎಣಿಸಿರುವ ಅನಂಗಸೇನೆಯ ದುಃಖವನ್ನು ನೋಡಿ ಸಹಿಸಲು ರದೆ ಹಾಗೆ ಮಾಡಿಬಿಟ್ಟೆನು. ಆಕೆಯ ಅಪಾರ ದುಃಖವನ್ನು ನೋಡಿ ನನ್ನ ಯಕ್ಕಾಯುಕ್ತಜ್ಞಾನವು ನಶಿಸಿಹೋಯಿತು. ಏನುಮಾಡಲಿ ? ಅಂತಹ ಆಪತ್ತಿನಲ್ಲಿ ಆಕೆಗೆ ಸಹಾಯಮಾಡದಿದ್ದರೆ ದುಃಖತಿಕಯದಿಂದ ಆಕೆಯು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಳು. ರಾಯರು ಆಕೆಯ ಮೇಲೆ ದೋಷವನ್ನು ಆರೋಪಣಮಾಡಿದ ರಾತ್ರೆ ಅನಂಗಸೇನೆಯ ಪಣ ವನ್ನು ಉಳಿಸುವುದಕ್ಕಾಗಿ ನಾನು ಪಟ್ಟ ಕಷ್ಟವು ದೇವರಿಗೇ ಗೊತ್ತು. ಆ ರಾತ್ರೆ ನಾನು ಒಂದು ಕ್ಷಣಕಾಲ ಆಕೆಯನ್ನು ಬಿಟ್ಟಿದ್ದರೂ ಪ್ರಾಣವನ್ನು ಭ