ಪುಟ:ರಾಯಚೂರು ವಿಜಯ ಭಾಗ ೧ .djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

www naಳ ಕರ್ಣಾಟಿಕಗ್ರಂಥಮಾಲೆ ದನೇ ? ರಾಮಯಮಂತ್ರಿಗೂ ಆತನಿಗೂ ವೈರ ಹುಟ್ಟುವಂತೆ ತಿಮ್ಮರಸನು ಆಗಲೆ ಉಪಾಯಗಳನ್ನು ನಡೆಸಿರುವನು. ಮಹಮ್ಮದೀಯರೆಲ್ಲರೂ ಒಟ್ಟುಗೂಡಿದರೂ ವಿಜಯನಗರವನ್ನು ಜಯಿಸಲಾದೀತೇ ? ಮಹಮ್ಮ ದೀಯರಾಜ್ಯಗಳು ಒಟ್ಟುಗೂಡದಂತೆ ಅವರಲ್ಲಿಯೇ ಒಳಜಗಳಗಳು ಹುಟ್ಟುವುದಕ್ಕೋಸ್ಕರ ಅನೇಕ ಉಪಾಯಗಳು ನಡೆದಿವೆ. ಆದುದರಿಂದ ಈ ಮಾರ್ಗವನ್ನವಲಂಬಿಸಿ ನಿನ್ನ ರಾಜ್ಯವನ್ನು ವಶಪಡಿಸಿಕೊಳ್ಳುವೆನೆಂಬ ಭ್ರಾಂತಿಯನ್ನು ಬಿಟ್ಟುಬಿಡು. ಈ ಮಾತು ಹಾಗಿರಲಿ ; ಈಗ ನೀನು ಮಾಡಿ ರುವ ಸಾಹಸ ಕಾರು ಸಾಂಗವಾಗಿ ನಡೆಯಲಿ; ಕಂಬರಸೇನನನ್ನು ಕರೆ ಯಿಸು ೨” ಎಂದು ರಾಮರಾಜನು ಹೇಳಿದನು. ಈ ಮಾತುಗಳನ್ನು ಕೇಳಿ ಮುಕ್ತಾಂಬೆಯು ಸ್ವಲ್ಪ ಕಾಲ ತನ್ನ ಮನಸ್ಸಿನಲ್ಲಿಯೇ ಆಲೋಚಿಸಿಕೊಂಡು ತನಗೆ ಮೋಸಮಾಡುವುದಕ್ಕಾಗಿ ರಾರುರಾಜನು ಹಾಗೆ ಹೇಳುತ್ತಿರಲಾರನೆಂದು ನಿರ್ಧರಿಸಿದಳು. ಆಕೆಯು ಸುಮ್ಮನಿದ್ದುದನ್ನು ಕಂಡು ರಾಮರಾಜನು ಪುನಃ ಹೇಳಲಾರಂಭಿಸಿದನು. " ಸೋದರಿ ! ಬೇರೆ ಮಾರ್ಗವನ್ನು ಹಿಡಿಯಬೇಡ, ನಾನು ಯಾವಾ ಗಲೂ ನಿನ್ನ ಹಿತವನ್ನೇ ಕೋರುತ್ತಿರುವುದರಿಂದ ನನ್ನ ಬುದ್ಧಿವಾದವನ್ನು ಕೇಳು, ನಿನ್ನ ಕೆಲಸವು ಕೈಗೂಡಬೇಕಾದರೆ ಸಾಮೋಪಾಯವೇ ಮೇಲು. ನಮ್ಮ ಕೆಲಸವನ್ನು ಮುಗಿಸಿಕೊಂಡು ಇನ್ನು ಸ್ವಲ್ಪ ದಿವಸಗಳಲ್ಲೇ ನಾವು ವಿಜಯನಗರಕ್ಕೆ ಹೊರಟುಹೋಗುವೆವು. ಈಗಲಾದರೂ ಚೆನ್ನಾಗಿ ಯೋಚಿಸಿ, ನಮ್ಮೊಡನೆ ಬಂದುಬಿಡು. ಯಾವುದಾದರೂ ನಿರಪಾಯವಾದ ಸ್ಥಳವನ್ನು ಸೇರಿಸುವೆವು. ೨೨ ಎಂದು ರಾಮರಾಜನು ಹೇಳಿದನು. “ “ ರಾಮರಾಜ ! ರಾಮಯಮಂತ್ರಿಯು ನನಗಾಗಿಯೇ ಇಷ್ಟು ಶ್ರಮ ವನ್ನೂ ಅನುಭವಿಸುತ್ತಾ ಇರುವುದರಿಂದ ಆತನನ್ನು ಬಿಟ್ಟು ನಾನು ಮಾತು ಬಂದುಬಿಡುವುದಕ್ಕೆ ನನಗೆ ಆಶಬರುವುದಿಲ್ಲ , ಇದಕ, ನಿಮ್ಮ ಅಭಿಪ್ರಾಯ