ಪುಟ:ರಾಯಚೂರು ವಿಜಯ ಭಾಗ ೧ .djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಕರ್ಣಾಟಕಕ್ರಂಥಮಾಲೆ “ ರಾಯೂರು ದುರ್ಗಾಧೀಕ್ಷರರ ಸನ್ನಿಧಾನದಲ್ಲಿ ಕಂಬರ್‌ಸೇನನ ವಿಜ್ಞಪನೆ. ಪಯೋಮುಖವಿಷಕುಂಭದಂತಹ ಆ ಬ್ರಾಹ್ಮಣನ ಮಾತುಗಳನ್ನು ತಾವು ಹೇಗೆ ನಂಬಿರುವಿರೋ ನನಗೆ ತಿಳಿಯದು. ಅವನು ಶತ್ರು ಪಕ್ಷ ದವನು. ಮಹಮ್ಮದೀಯ ರಾಜ್ಯಗಳನ್ನು ಒಟ್ಟಿಗೆ ಧ್ವಂಸಮಾಡಬೇಕೆಂದೇ ನಿರ್ಧರಮಾಡಿಕೊಂಡು ಆ ನಾಟಕವನ್ನು ಅಭಿನಯಿಸುತ್ತಿರುವನು, ಅದೃಷ್ಟ ವಶದಿಂದ ನನಗೆ ಸಕಾಲದಲ್ಲಿ ವರ್ತಮಾನವು ತಿಳಿದು ಅಲ್ಲಿಂದ ತಪ್ಪಿಸಿ ಕೆಂಡುಬಂದೆನು, ನಾನು ಹೇಳುವುದಕ್ಕೆ ನಿದರ್ಶನವಾಗಿ ಇದರೊಡನೆ, ತಿಮ್ಮರಸನು ರಾಮಯಮಂತ್ರಿಗೆ ಬರೆದಿರುವ ಕಾಗದವನ್ನು ಇಟ್ಟರು ವನು. ಇದೇ ವಿಷಯವನ್ನೆ ಅನೇಕ ಮುಖದಿಂದ ಕೇಳಿ ಪರೀಕಿಸಿ ನಾನು ಹೀಗೆ ನಿರ್ಧರಿಸಿಕೊಂಡಿರುವೆನು. ಸಧರ್ಮಿಗಳಾದ ನೀವುಗಳು ಎಚ್ಚತ್ತುಕೊಳ್ಳಬೇಕೆಂದು ಈ ಕಾಗದವನ್ನು ಬರೆದಿರುವನು ತನ್ನ ಮಿತ) ಕಂಬರ್‌ಸೇ್ರ ” ಹೀಗೆಂದು ಬರೆದಿದ್ದ ಕಂಬರ್‌ಸೇನನ ಪತ್ರವನ್ನೂ ತಿಮ್ಮ ರಸನ ಪತ್ರವನ್ನೂ ಓದಿಕೊಂಡನು. ಆ ಪತ್ರಗಳನ್ನು ಗಟ್ಟಿಯಾಗಿ ಓದಿದಾಗ" ಫಕೀರನು “ ದುರ್ಗಾಧೀಶ ರರೇ ಈ ಸಂಗತಿಯು ನಿಶ್ಚಯವೆಂದೇ ತೋರು ವುದು, ಈಚೆಗೆ ಈ ವಿಷಯವನ್ನು ಕುರಿತು ನಾನೂ ಕೇಳಿರುವೆನು, ಆದರೆ ಚೆನ್ನಾಗಿ ಪರೀಕ್ಷಿಸದೆ ರಾಮಯನಲ್ಲಿರುವ ನಿಮ್ಮ ಮೈತ್ರಿಯನ್ನು ಕೆಡಿಸಿದ ಪಕ್ಷದಲ್ಲಿ ಒಂದುವೇಳೆ ಪಶ್ಚಾತ್ತಾಪಪಡಬೇಕಾದೀತೆಂದು ಸದ್ಯಕ್ಕೆ ಸುಮ್ಮನಿ ದೈನು, ರಾಮಯನ ಕೆಲವು ಚಲ್ಯಗಳನ್ನು ಪರೀಕ್ಷಿಸಿದರೆ ವಿಪರೀತವಾಗಿ ಕಾಣುವುದು ” ಎಂದು ಹೇಳಿದನು.

m ಮಹನೀಯರೇ ! ಹಾಗಾದರೆ ರಾಮಯನು ಅಂತಹ ಕಪಟಿಯೇ? ಹಾಗಾದಪಕ್ಷದಲ್ಲಿ ಪರಪುರುಷನು ಬರಕೂಡದ ಅಂತಃಪುರದಲ್ಲಿದ್ದ ಅನಗೆ W M