ಪುಟ:ರಾಯಚೂರು ವಿಜಯ ಭಾಗ ೧ .djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩ ಕರ್ಣಾಟಕ ಗ್ರಂಥಮಾಲೆ MMwwwm m ೧ ದ್ವಾರಪಾಲಕನು “ ಯಾರು ಅಲ್ಲಿ ಹೋಗುವವರು ' ಮುಂದಕ್ಕೆ ಹೋಗ ಕೂಡದು, ಅಲ್ಲಿಯೇ ನಿಲ್ಲು” ಎಂದು ಕುರ್ಚಿಸಿದನು. ಸ್ತ್ರೀ-ಆಯಾ! ದ್ವಾರಪಾಲಕನೇ ! ನೀನು ಹೊಸಬನೋ?ಇದೇಕ ಹೀಗೆ ಕೇಳುವೆ ? ೨. ದ್ವಾರಪಾಲಕ-“ ಹೌದು, ಹಿಂದೆ ಇಲ್ಲಿದ್ದ ಭಟರು, ಈಗ ದುರ್ಗ ರಕ್ಷಣಕ್ಕೆ ನೇಮಕವಾಗಿರುವರು.೨೨ - ಸ್ತ್ರೀ- ಆಹಾ! ತಿಳಿಯಿತು, ಅದಕ್ಕೇ ಹೀಗೆ ಕೇಳುತ್ತಿರುವೆ.” ಮಾಲತಿ ಹೊರಕ್ಕೂ ಒಳಕ್ಕೂ ಸುತ್ತಾಡಲು ತೋಫಲ್ ಖಾನರೇ ಅಪ್ಪಣೆಕೊಟ್ಟಿರುವರು. ಇಗೋ ಉಂಗುರವನ್ನು ನೋಡು.” ಎಂದು ತೋರಿಸಿದಳು. ದ್ವಾರ--* (ನೋಡಿ) ನೀನು ಮಾಲತಿಯೋ ? ಹಾಗಾದರೆ ಹೋಗ ಬಹುದು ; ಹೋಗು.” ಎಂದು ಹೇಳಿ ಆಕೆಯನ್ನು ಬಿಟ್ಟನು. ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೊಬ್ಬ ಸ್ತ್ರೀಯು ಕೆಲವು ಪಾತ್ರೆಗ ಇದ್ದ ಗಂಟನ್ನು ಕೈಯಲ್ಲಿ ಹಿಡಿದುಕೊಂಡು ಆ ದ್ವಾರದ ಬಳಿಗೆ ಬಂದಳ3, ಪುನಃ ದ್ವಾರಪಾಲಕನು “ ಯಾರು, ಅಲ್ಲಿ ಹೋಗುವವರು ; ನಿಲ್ಲು ” ಎಂದನು. ಎರಡನೆಯ ಸ್ತ್ರೀ-“ ಇದೇನು ಹೀಗೆ ಕೇಳುತ್ತಿರುವಿರಿ, ನಾನು ಈ ಮುಂದಿರದಲ್ಲಿರುವ ಸ್ತ್ರೀಯರಿಗೆ ಪ್ರತಿದಿನವೂ ಆಹಾರವನ್ನು ತಂದುಕೊಡು ತಿರುವವಳು, ೨ ದಾರ-+ ಓ ಸ್ತ್ರೀಯೆ, ಮಾಲತಿಯು ಈಗತಾನೆ ಈ ಮಾರ್ಗವಾಗಿ ಹೋದಳು. ನಿನ್ನನ್ನು ನೋಡಿ ಅನಂಗಸೇನೆಯೆಂದು ತಿಳಿದು ನಿಲ್ಲಿಸಿದೆನು. ಈಗ ನೀನು ಹೋಗಬಹುದು.”