ಪುಟ:ರಾಯಚೂರು ವಿಜಯ ಭಾಗ ೧ .djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪ್ರಕರಣ ಮಂದಿರದಲ್ಲಿ ಕಾಣದಿರಲು, ಅವನ: ದೀವಿಗೆಯನ್ನು ಅದರ ಸ್ಥಾನದಲ್ಲಿ ಟ್ಟು ತನ್ನ ಪೀಠಗಮಲೆ ಕುಳಿತುಕೊಂಡ ಕೂಡಲೆ ಈ ಮುಂದೆ ಹೇಳುವಂತೆ ಸಂಭಾಷಣೆಯು ನಡೆಯಿತು :- “ ಪ್ರಹರೇ ಶತ್ರಾನೀನೂ ಮುಕಾಂಬೆಯ ಸಮ್ಮತಿಸಿದ ಮೇರೆಗೆ ನಾನು ಬಿಜಾಪುರದ ಸುಲ್ತಾನನನ್ನು ಸಂದರ್ಶಿಸಿ ನಮ್ಮ ಪ್ರಕೃತ ಸ್ಥಿತಿಗತಿಗಳನ್ನು ಆತನಿಗೆ ವಿವರಿಸಿ ಸಹಾಯ ಮಾಡಬೇಕೆಂದು ಕೇಳಿಕೊಂಡ ನು, ಇದೂ ಅಲ್ಲದೆ ಆ ಬಿಜಾಪುರದ ರಾಜನಿಗೆ ಪ್ರೀತಿಪಾತ್ರನಾದ ತೋಫಲ ಖಾನನೆಂಬ ಮಹಮ್ಮದೀವಿನಾಧಿಕಾರಿಯ ಸ್ನೇಹವನ್ನು ಸಂಪಾದಿಸಿಕೊಂಡು ಬಂದಿರುವೆನು. ಆತನು ಮಾತ್ರವಲ್ಲದೆ ಇನ್ನೂ ಕೆಲವರು ಮಹಮ್ಮದೀಯ ಪ್ರಭುಗಳ ನಮಗೆ ಸಹಾಯಮಾಡಲು ಒಪ್ಪಿರುವರು, ನೀನೂ ಈ ಮುಕಾಂಬೆಯ ಅಲ್ಲಿಗೆ ಬಂದುದೇ ಆದರೆ ನಮ್ಮ ಕೆಲಸಗಳಲ್ಲವೂ ಕೈಗೂಡುವುವು. ಇದಕ್ಕೆ ನಿನ್ನ ಅಭಿಪ್ರಾಯವೇನು ? " ಎಂದು ರಾಮಯ ಮಂತ್ರಿ)ಯು ಕೇಳಿದನು.

  • ರಾವಂತಾಮಾತ್ಯ ಶೇಖರಾ ! ನಿನಗಿಂತ ಬುದ್ದಿವಂತರು ಯಾರಿ ರುವರು ? ನೀನು ಏನನ್ನು ಮಾಡೆಂದು ಹೇಳಿದರೂ ಅದನ್ನು ಮಾಡಲು ಸಿದ್ದ ನಾಗಿರುವನು. ಏನೇ ಆ ಲಿ ಈ ಕೃಷ್ಣದೇವರಾಯರನ್ನು ಜಯಿಸಿ ಹಗೆ ಯನ್ನು ತೀರಿಸಿಕೊಳ್ಳುವುದು ನನಗೆ ಮುಖ್ಯ ” ಎಂದು ಪ್ರಹರೇಕೃಗನು ಪ್ರತ್ಯುತ್ತರಕೊಟ್ಟನು.
  • “ ಮಂತ್ರಿಪುಗವರೇ ! ನಿಮ್ಮ ಆಲೋಚನೆಯು ಅಷ್ಟು ಯುಕ್ತ ವೆಂದು ನನಗೆ ತೋರುವುದಿಲ್ಲ. ನಾವು ಆ ಬಿಜಾಪುರದ ರಾಜನ ಸಹಾಯ ವನ್ನು ಪಡೆದು ಸಾರ್ವಭೌಮರನ್ನು ಜಯಿಸಿ ನಮ್ಮ ಉದಯಗಿರಿಯನ್ನು ಸ೩ಧೀನಪಡಿಸಿಕೊಂಡರೂ, ನಾವು ಒಬ್ಬ ಮಹಮ್ಮದೀಯಪ್ರಭುವಿಗೆ ಆಧೀನರಾಗಿರಬೇಕಾದರೆ ನಮಗೆ ಲಭಿಸುವ ಸಖ್ಯವಾವುದು ? ಹಿಂದು ಗಳಡನೆ ಈಗ ಬದ್ಧ ವೈರವನ್ನು ವಹಿಸಿರುವ ಮಹಮ್ಮದೀಯರೊಡನೆ ಸ್ನೇಹಮಾಡಿ ಅವರ ಆ ಧಿ॰ನಕ್ಕೆ ಒಳಗಾಗುವುದಕ್ಕಿಂತಲೂ ಧರ್ಮಪುಲನಾ ಸಕ್ಕರಾಗಿರುವ ಹಿಂದೂ ಸಮಾಟರ ಅಧೀನದಲ್ಲೇ ಇರುವುದು ಉಚಿತ ವಲ್ಲವೆ ? ನಾವು ಕೋಪಾವಿಷ್ಟಚಿತ್ತರಾಗಿ ಕೃಷ್ಣ ದೇವರಾಯರೊಡನೆ

4 p