ಪುಟ:ರಾಯಚೂರು ವಿಜಯ ಭಾಗ ೧ .djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾರು ವಿಜಯ ವೃತ್ತಾಂತವನ್ನು ಸಾವಕಾಶವಾಗಿ ಕೇಳಿ ನನ್ನ ಕೈಯಿಂದಾಗುವ ಸೇವೆಯನ್ನು ತಮಗೆ ಸಮರ್ಪಿಸುವೆನು. ಆದುದರಿಂದ ನನಗೆ ಅಪ್ಪಣೆಯನ್ನು ಕೊಡಿ.” ಪ್ರಹರೇ-“ ಅಯ್ಯಾ, ವಿಜಯಸಿಂಹ ! ನೀನು ಇನ್ನೂ ತರುಣವಯ ಸ್ನನು ; ತರುಣಜನಸಾಮಾನ್ಯವಾದ ಅಲಕ್ಷವೂ, ಗರವೂ ನಿನ್ನಲ್ಲಿಯ ಇರುವುದರಲ್ಲಿ ವಿಶೇಷವೇನೂ ಇಲ್ಲ, ಯಾವ ಶತ್ರುಗಳನ್ನಾದರೂ ನಿನ್ನ ಕತ್ತಿಯು ವಿಚಾರಿಸಿಕೊಳ್ಳುವುದೆಂದು ಹೇಳಿದೆ. ಜಯಾಪಜಯಗಳನ್ನು ನಿರ್ಣಯಿಸುವವರು ಯಾರು ? ಹೇಗೆ ಹೋಗಿ ಹೇಗೆ ಆಗುವುದೋ ಕಂಡ ವರು ಯಾರು ? ಆಮೇಲೆ ಪಶ್ಚಾತ್ತಾಪಪಟ್ಟರ ಫಲವಿಲ್ಲ, ನೀನು ಇಲ್ಲಿ ನಿಂತುದೇ ಆದರೆ ನಿನಗೆ ಯಾವ ಬಗೆಯ ಬಾಧೆಯೂ ಉಂಟಾಗಲಾರದು. ಮಾರ್ಗಮಧ್ಯದಲ್ಲಿ ನಿನ್ನ ಕ್ಷೇಮವು ಸಂದೇಹಾಸ್ಪದವೇ ಹೊರತು, ನನ್ನ ಮನೆಯಲ್ಲಿರುವಾಗ ನಿನಗೆ ಸ್ವಲ್ಪವೂ ಕೆಡಕುಂಟಾಗದು, ಬುದ್ದಿವಂತರು ಸಂದಿಗ್ಗಫಲವುಳ್ಳ ಕೆಲಸಗಳಿಗೆ ಕೈಹಾಕದೆ ಸಿತಫಲಗಳಾದ ಕಾರಿ: 1ಳಲ್ಲೇ ಪ್ರವರ್ತಿಸುವರು. ಚಕ್ರವರ್ತಿಯವರಿಗೆ ನೃತ್ಯನಾದ ನೀನು ನನ್ನನ್ನು ನೋಡಲುಬಂದಿದ್ದಾಗ ನಿನಗೆ ಏನಾದರೂ ಅಪಾಯವು ಸಂಭವಿಸಿದುದೇ ಆದರೆ ನನಗೆ ಅಪಕೀರ್ತಿಯು ತಪ್ಪುವುದೇ ? ಆಗ ನಾನು ಪಣಸಹಿತವಾಗಿ ಇರ ಲಾಗುವುದೇ ? ನನ್ನ ಆಪ್ತ ಮಿತ್ರನ ಕುಮಾರನಾದ ನೀನೂ ನಾನೂ ಹೀಗೆ ಒಟ್ಟಿಗೆ ಅಪಾಯಕ್ಕೆ ಒಳಗಾಗುವುದು ಸರಿಯಲ್ಲವಯ್ಯ ! ಆದುದರಿಂದ ನನ್ನ ಮಾತನ್ನು ಕೇಳಿ ಈ ದಿನದ ಪ್ರಯಾಣವನ್ನು ನಿಲ್ಲಿಸು, ನಡೆ, ಮನೆಗೆ ಹೋಗೋಣ.” ಈ ಮಾತುಗಳನ್ನು ಕೇಳಿ ವಿಜಯಸಿಂಹನ ಅಂತರಂಗದಲ್ಲಿ ಎರಡು ಬಗೆಯ ಆಲೋಚನಾ ತರಂಗಗಳು ಹುಟ್ಟಿದುವು. ದುರುದ್ದಿ-“ ವಿಜಯಸಿಂಹ' ಪಹರೇಕ್ಷರನು ನಿಮ್ಮ ತಂದೆಗೆ ಪ್ರಣ ಸ್ನೇಹಿತನು. ಆತನ ಆದರವನ್ನು ಅಸಡ್ಡೆಪಾಡುವುದು ಸರಿಯಲ್ಲ, ಆತನ ಮೃದುಮಧುರವಚನಗಳನ್ನೂ, ವಿನಯಾತಿಶಯವನ್ನೂ, ಬಾಂಧವ್ಯ ಪೂರಕ ವಾದ ಪ್ರೇಮವನ್ನೂ ನಿರಾಕರಿಸುವುದು-ಯೋಗ್ಯನೂ, ಉನ್ನತಕುಲ ಸಂಭೂತನೂ, ಯುಕ್ತಾಯುಕ್ಜಾನಿಯ ಆದ ನಿನಗೆ ಉಚಿತವೆ? ಪ್ರಹರೇಕ್ಷರನಂತಹ ಆಪ್ತರು ನಿನಗೆ ಮತ್ತೆಯಾರಿರುವರು ? ಅವನಲ್ಲಿ ಬ ದ. - *