ಪುಟ:ರಾಯಚೂರು ವಿಜಯ ಭಾಗ ೧ .djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಯೂರುವಿಷಯ L ಯನ್ನೂ ಪಡೆಯಲು ಪ್ರಹರೇಕ್ಷರನಂತಹ ವೃದ್ಧನೂ ಜ್ಞಾನಿಯ ಇಚ್ಚಿಸು ವನೆ ? ಆದುದರಿಂದ ಸುದ್ದಿಯ ಕುತವಾದ ಬೋಧನೆಯನ್ನು ಕೇಳಿ ಶಾಪಕ್ಕೂ ಆಕಾಭಂಗಕ್ಕೂ ತುತ್ತಾಗಬೇಡ, ನೀನು ಇಲ್ಲಿಯೇ ನಿಂತು ಆದರೆ, ಅನೇಕ ವರ್ಷಗಳಿಂದ ಹಾರೈಸುತ್ತಿರುವ ಕೃತ್ರಿಯಾಸಂದರ್ಶನವು ದೊರೆಯುವುದು, ಅಪಾಯವು ಎಳ್ಳಷ್ಟಾದರೂ ಇರುವುದಿಲ್ಲ ಹೀಗೆಂದು ದುರ್ಬುದ್ದಿಯು ಪುನಃ ಪ್ರೇರೇಪಿಸಿತು. ಹೀಗೆ ಹುಟ್ಟಿದ ಆಲೋಚನಾತರಂಗಗಳಲ್ಲಿ ದುರುದ್ದಿಯ ಪ್ರೇರ ಗಯೇ ಹಿತಕರವೆಂದು ತೋರಿತು, ಅಂತಹ ಸಂಜೆಯ ಹೊತ್ತಿನಲ್ಲಿ ಏಕಾ ಕಿಯಾಗಿ ಪ್ರಯಾಣಮಾಡುವುದರಲ್ಲಿ ಅಪಾಯವಿರುವುದೆಂಬ ಭಾವನೆಯು ಹುಟ್ಟಿ, ಸ್ವಲ್ಪಸ್ವಲ್ಪವಾಗಿ ಬಳಯಲು ಕಟ್ಟಕಡೆಗೆ, ಆ ದಿನ ರಾತ್ರಿ ಅಲ್ಲಿ ನಿಂ ತುಬಿಡುವುದೇ ಕ್ಷೇಮಕರವೆಂದು ವಿಜಯಸಿಂಹನು ನಿರ್ಧರಮಾಡಿಕೊಂಡನು. ಇಂಗಿತಜ್ಞನಾದ ಪ್ರಹರೇಕ್ಷರನು ಸಮಯವನ್ನು ನೋಡಿಕೊಂಡು ಪುನಃ ತನ್ನ ಕೋರಿಕೆಯನ್ನು ನಡೆಯಿಸಿಕೊಡಬೇಕೆಂದು ಕೇಳಿಕೊಂಡನು. ವಿಜಯ ನಿಂಹನು ಅದಕ್ಕೆ ಒಪ್ಪಲಾಗಿ ಇಬ್ಬರೂ ಪಹರೇಶ್ವರನ ಮನೆಗೆ ಹೊರಟರು. ಹಿಂದಿರುಗಿ ಬಂದ ತನ್ನ ಪ್ರಿಯನನ್ನು ಕಂಡು ಮುಕ್ಕಾಂಬೆಗೆ ಉಂಟಾದ ಸಂತಾಪವನ್ನು ಹೇಳತೀರದು. ಪ್ರಹರೇಕ್ಷರನ ವೃತ್ತಾಂತವನ್ನು ಸಾಂಗವಾಗಿ ಮೊದಲೇ ತಿಳಿಸದೇಹೋದುದು ತನ್ನ ದೊಡ್ಡ ತಪ್ಪೆಂದು ಆಕೆಯು ಬಹಳವಾಗಿ ಪಶ್ಚಾತ್ತಾಪಪಟ್ಟುಕೊಂಡಳು, ಮುಂದೆ ಒದಗಬಹು ದಾದ ಅಪಾಯವನ್ನು ಕುರಿತು ವಿಜಯಸಿಂಹನಿಗೆ ಎಚ್ಚರಿಸಬೇಕೆಂದು ಎಷ್ಟು ಪ್ರಯತ್ನ ಮಾಡಿದರೂ, ಪಹರೇಕ್ಷರನು ಎಡೆಬಿಡದೆ ವಿಜಯಸಿಂಹನ -ಜೊತೆಯಲ್ಲಿಯೇ ಇದ್ದುದರಿಂದ, ದುಕ್ಕಾಣಿಯನ್ನು ಭಯದುಃಖಗಳು ದೇದಿಸಲಾರಂಭಿಸಿದುವು. ಪಹರೇಶ್ವರನು ವಿಜಯಸಿಂಹನೊಡನೆ ಮಾತನಾ ಡುತ್ತಿದ್ದು, ಭೋಜನಕ್ಕೆ ಮುಂಚೆ ಕೈಕಾಲು ತೊಳೆದುಕೊಳ್ಳುವುದಕ್ಕಾಗಿ ಅವನ ಸಂಗಡ ಒಳಕ್ಕೆ ಹೊರಟನು. ಸಮಯ ಸಿಕ್ಕಿದರೆ ಸಾಕೆಂದು ಮುಕ್ಕಾಂಬೆಯು ಕತ್ತಲಲ್ಲಿ ಅತ್ತಿತ್ತ ಓಡಾಡುತ್ತಿದ್ದಳು. ಹೀಗೆ ಸುತ್ತಾಡುತ್ತಿದ್ದಾಗ ಒಬ್ಬ ಪುರುಷವ್ಯಕ್ತಿಯು ಅತ್ತ ಕಡೆಯೇ ಬರುತ್ತಿದ್ದಂತೆ ಕಂಡಳು.” ಆ ವ್ಯಕ್ತಿಯು ಸಮೀಪಿಸಿ