ಪುಟ:ರಾಯಚೂರು ವಿಜಯ ಭಾಗ ೧ .djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರಿಯೂರುಏಜಯ ೬೪ ಮುಕ್ಕಾಂಬೆಯು ಆಲೋಚನಾಮಂದಿರವನ್ನು ಬಿಟ್ಟ ಕೂಡಲೆ ಅತ್ಯಂ ತವಿಚಾರಪರೀತಳಾಗಿ, ಸಂಕೇತಸ್ಥಳದಲ್ಲಿ ರಾಮರಾಜನನ್ನು ಕಂಡು < ಅಣ್ಣು ! ಈ ಹೊತ್ತಿನ ಆಪತ್ತಿನಲ್ಲಿ ವಿಜಯಸಿಂಹರು ಉಳಿಯುವಂತ ತೋರುವುದಿಲ್ಲ, ಈ ವಿಪತ್ತನ್ನು ತಪ್ಪಿಸಬೇಕೆಂದು ಮಾಡಿದ ಪ್ರಯತ್ನಗಳ ಆ ವೂ ವ್ಯರ್ಥವಾದುವು. ಆದುದರಿಂದ ನನಗೆ ಬಹಳ ಕೋಕವುಂಟಾಗಿದೆ. ನೀನು ಮನಸ್ಸಿಟ್ಟ ಹೊರತು ವಿಜಯಸಿಂಹರನ್ನು ಉಳಿಸಿಕೊಳ್ಳುವುದು ಅಸಾ ಧ್ಯವೆಂದೇ ತೋರುತ್ತಿದೆ. ಇದಕ್ಕೆ ನೀನೇನು ಹೇಳುವೆ ?" ರಾಮರಾಜ- “ ಸೋದರಿ ! ನಾನು ಪಣಸಹಿತನಾಗಿರುವವರೆಗೂ ನೀನು ಹೆದರಬೇಕಾಗಿಲ್ಲ, ಯಾರಾದರೂ ವಿಜಯಸಿಂಹನನ್ನು ಬಾಧಿಸಬೇ ಕಂದು ಪ್ರಯತ್ನಿಸಿದರೆ ಅಂತಹವರನ್ನು ಈ ಕತ್ತಿಗೆ ಬಲಿಕೊಡುವನು.” ಎಂದು ಧೈಯ್ಯ ಹೇಳಿದನು. ಮುಕ್ಕಾಂಬ್‌ ಸೋದರು ! ಹೌದು, ನೀನೇನೋ ಬಲಶಾಲಿಯೇ; ಆದರೂ ಒಬ್ಬನು ಅನೇಕ ಬಲಶಾಲಿಗಳೊಡನೆ ಹೆಣಗಾಡುವುದು ಎಲ್ಲಿಯ ವರೆಗೆ ಸಾಧ್ಯ? ಈಗ ವಿಜಯಸಿಂಹರನ್ನು ಅಪಾಯದಿಂದ ತಪ್ಪಿಸುವುದು ಕರ್ತವ್ಯವಾಗಿರುವುದೇ ಹೊರತು ಶತ್ರುವರ್ದನವಲ್ಲ. ಈ ರಾಜದ್ರೋ ಹಿಗಳೊಡನೆ ಯುದ್ಧ ಮಾಡುತ್ತ ನಿಂತರೆ ವಿಜಯಸಿಂಹರ ಪರಿಣಾಮವೇನಾಗು ವುದು? ನಾನೇ ಈ ಕೆಲಸಕ್ಕೆ ಪ್ರತ್ಯಕ್ಷವಾಗಿ ಯತ್ನಿಸಿದರೆ ಮುಂದೆ ಅನೇಕ ಕಷ್ಟಗಳಾಗುವುವು, ನೀನು ಕೆಲವುಮಂದಿ ಸುಭಟರ ಸಹಾಯವನ್ನು ದೊರಕಿ ಸಿಕೊಂಡು ರಾಜದ್ರೋಹಿಗಳನ್ನು ಶಿಕ್ಷಿಸಲು ಯತ್ನಿಸಿದುದೇ ಆದರೆ, ಈಗಾ ಗಳೇ ಪಹರೇಶರನ ವಿಷಯದಲ್ಲಿ ರಾಯರಿಗೆ ಕಾಣಿಸಿಕೊಂಡಿರುವ ಸಂತ ಯವು ಮತ್ತೂ ದೃಢವಾಗಿ ಬೇರೂರುವಂತಾಗುವುದು, ವಿಜಯಸಿಂಹರು ಶತ್ರುಗಳ ಕೈಗೆ ಸಿಕ್ಕುವುದಕ್ಕೆ ಮುಂಚೆ ಅವರನ್ನು ತಪ್ಪಿಸಿದರೆ ಪ್ರಹರೇಶ ಕನಿಗೆ ಆಪದವು ಬರುವುದು, ಶತ್ರುಗಳ ಕೈಗೆ ಸಿಕ್ಕಿದಮೇಳ, ಪತ್ರುಗಳನ್ನು ಒಂದುವೇಳೆ ಶಿಕ್ಷಿಸಿದರೂ, ವಿಜಯಸಿಂಹರು ಅರೆಯುವಿಲ್ಲದೆ ಇರುವರೆಂಬ ನಂಬಿಕೆ ಅಷ್ಟೊಂದು ಇರಲಾರದು, ಶೈವಮಠಕ್ಕೆ ವಿಜಯಸಿಂಹರನ್ನು ಎತ್ತಿಕೊಂಡು ಹೋದಮೇಲೆ ನಿನ್ನ ಸಾಹಸದಿಂದ ಪ್ರಯೋಜನವಿಲ್ಲ, ಅದು