ಪುಟ:ರಾಯಚೂರು ವಿಜಯ ಭಾಗ ೧ .djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

පප් MM wwwಯ ೪ 0 ಧಿ ಒಂಬತ್ತನೆಯ ಪ್ರಕರಣ ಆಕೆಯನ್ನು ಕೃಷ್ಣದೇವರಾಯರು ಬಹಳ ಪ್ರೇಮದಿಂದ ಕಾಣುತ್ತಿದ್ದರು. ಕುಲದಲ್ಲಿ ನೀಚಾಗಿದ್ದರೂ ತನ್ನ ಸದ್ಗುಣಗಳಿಂದಲೂ ದೇಹಸೌಂದಯ್ಯ ದಿಂದಲೂ, ಸತ್ಕುಲಪ್ರಸೂತರಾದ ಯುವತಿಯರನ್ನು ಮೀರಿಸುತ್ತಿದ್ದುದರಿಂದ, ಆಕೆಯಲ್ಲಿ ರಸಿಕರಾದ ಕೃಷ್ಣದೇವರಾಯರೂ ಗೌರವಪ್ರೇಮಗಳನ್ನು ಇಟ್ಟಿ ದರು. ಅನಂಗಸೇನೆಯು ತನ್ನ ಅನನ್ಯ ಸುಧಾರಣವಾದ ಪತಿಭಕ್ತಿಯಿಂದಲೂ ಪ್ರೇಮದಿಂದ ಕೃಷ್ಣದೇವರಾಯರಿಗೆ ಸಂತೋಷಪಡಿಸುತ್ತಿದ್ದಳು. ಪಟ್ಟ ದರಾಣಿಯವರ ವಿಷಯದಲ್ಲಿ ಯ ಆಕೆಯು ಹೆಚ್ಚಾದ ಭಕ್ತಿಯಿಂದಲೂ ನವುತಿಯಿಂದ ನಡೆದುಕೊಳ್ಳುತ್ತಿದ್ದುದರಿಂದ ಆ ರಾಶಿಯವರಿಗೂ ಆಕ ಯ ವಿಷಯದಲ್ಲಿ ಸರಭಾವವು ಹೋಗಿ ಸೋದರೀಭಾವವು ನೆಲೆಸಿದ್ದಿತು. ಅನಂಗಸೇನೆಗೆ ಕೋತಿ ಮೊದಲಾದ ಪ್ರಾಣಿಗಳ ಆಟದಲ್ಲಿ ಬಹಳ ಆಸಕ್ತಿಯಿದ್ದಿತು. ಆಕೆಯು ಹುಚ್ಚನನ್ನು ಪ್ರೋತ್ಸಾಹಿಸಿ ಕೂತಿಯಿಂದ ಬಗೆಬಗೆಯ ಆಟಗಳನ್ನು ಆಡಿಸಿದಳು; ಅಷ್ಟು ಮಾತ್ರದಿಂದ ತೃಪ್ತಳಾಗದೆ ತನೆ ಆಡಿಸಬೇಕೆಂದು ಪ್ರಯತ್ನಿಸಿ ಕೋತಿಗೆ ಸಮೀಪವಾಗಿಯ ಹಣ್ಣನ್ನು ತೋರಿಸುತ್ತಾ ಅದನ್ನು ತೆಗೆದುಕೊಳ್ಳುವುದಕ್ಕೆ ಕೈನೀಡಿದಾಗ ತಟ್ಟನೆ ಕೈಯನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾ ವಿನೋದಪಡುತ್ತಿದ್ದಳು. ಆಕೆಯ ಕೈಯಲ್ಲಿದ್ದ ಹಣ್ಣನ್ನು ಕಿತ್ತುಕೊಳ್ಳುವ ಸಾಮರ್ಥ್ಯವು ಕೋತಿಗಿದ್ದರೂ ಆ ಹುಚ್ಚನು ಅದಕ್ಕೆ ಹಣ್ಣನ್ನು ಕಿತ್ತುಕೊಳ್ಳಲು ಅವಕಾಕ ಕಂಡುತ್ತಿರ ಲಿಲ್ಲ. ಹೀಗೆ ಅನೇಕವೇಳೆ ತನ್ನ ಪ್ರಯತ್ನಗಳು ನಿಪ್ಪಲವಾದುದರಿಂದ ಕೋತಿಗೆ ಕೋಪವು ಬಂದಿದ್ದಿತು. ಇನ್ನೋಂದುಸಾರಿ ಅನಂಗಸೇನೆಯು ಪೂರ್ವದಂತೆ ಹಣ್ಣನ್ನು ತೋರಿಸಿದಾಗ ಅದು ಸುಮ್ಮನೆ ಇದ್ದಿತು. ಇದನ್ನು ಕಂಡು ಅನಂಗಸೇನೆಯು ಕೈಯನ್ನು ಇನ್ನೂ ಮುಂದಕ್ಕೆ ನೀಡಲು ಕೋತಿ ಯು ಆಕೆಯ ಕೈಯನ್ನೇ ಹಿಡಿದುಕೊಂಡಿತು, ಈ ಸಮಯಕ್ಕೆ ಸರಿಯಾಗಿ ಕೂತಿಗೆ ಕಟ್ಟಿದ್ದ ದಾರವು ಹುಚ್ಚನ ಕೈಯಿಂದ ಜಾರಿಹೋಯಿತು. ಈಗ ಕೋತಿಗೆ ಅಡ್ಡಿಯೇನೂ ಇಲ್ಲದೆ ಆಕೆಯ ಕೈಯನ್ನು ಹಿಡಿದು ತೂಗಾಡುತ್ತ ಹಣ್ಣನ್ನು ತನ್ನ ಬಾಯಿಂದ ಕಿತ್ತುಕೊಳ್ಳಲು ಯತ್ನಿಸುತ್ತಿದ್ದಿತು. ಆನಂಗ ಸೇನೆಗೆ ಹೆದರಿಕೆಯುಂಟಾಗಿ ತನ್ನ ಕೈಯನ್ನು ಒದರಿದಳು ; ಆದರೂ ಕಪಿಯು