ಪುಟ:ರಾಯಚೂರು ವಿಜಯ ಭಾಗ ೧ .djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ? A *yoy" wwwmmwwwmuww. ಆಯಟ್ಟಿ ಕುಂಯ ತನ್ನ ಹಿಡಿತವನ್ನು ಸಡಿಲಿಸಲಿಲ್ಲ, ಆಕೆಯು ಹನ್ನು ಕೆಳಗೆ ಎಸೆದುಬಿಟ್ಟ ದ್ದರೆ ಕೋತಿಯು ತನ್ನ ಹಿಡಿತವನ್ನು ಬಿಡುತ್ತಿದ್ದಿತಾದರೂ ಅಕಗೆ ಅಪ್ಪು ಮಟ್ಟಿಗೆ ಸಮಯಸ್ಫೂರ್ತಿ ಇರಲಿಲ್ಲವಾದುದರಿಂದ, ದಿಕ್ಕು ತೋರದೆ ಓದ ತೊಡಗಿದಳು. ಆಗ ಕೋತಿಯು ತನ್ನ ಹಿಡಿತವನ್ನು ಮತ್ತೂ ಹೆಣ್ಣಿಸಿತು. ಹುಚ್ಚ ನು ಪಕಪಕನೆ ನಗುತ್ತ ಸುಮ್ಮನೆ ಒಂದು ಕಡೆ ನಿಂತುಕೊಂಡಿದ್ದನು. ಕೋತಿಯ ಹಾವಳಿಯಿಂದ ಆಕೆಯನ್ನು ತಪ್ಪಿಸುವುದಕ್ಕೆ ಅಲ್ಲಿದ್ದ ಸೇವಕಿ ಯರಿಗೂ ಧೈರ್ಯವಿರಲಿಲ್ಲ. ಸ್ವಲ್ಪ ದೂರ ಓಡಿದಕೂಡಲೇ, ಅನಂಗಸೇನೆಯು ಧರಿಸಿದ್ದ ಆಭರಣಗಳಲ್ಲಿ ಕೆಲವು ನೆಲದಮೇಲೆ ಉದಿರಿಬೀಳ ತೊಡಗಿದುವು ಅಷ್ಟರಲ್ಲಿ ಅನಂಗಸೇನೆಯು ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ತನ್ನ ಕೈ ಯನ್ನು ಕೂಡಹಲು ಕೋತಿಯು ದೊಪ್ಪನೆ ಕೆಳಕ್ಕೆ ಬಿದ್ದಿತು. ಕೂಡಲೇ ಹುಚ್ಚನು ಮುಂದಕ್ಕೆ ನುಗ್ಗಿ ಅದನ್ನು ಹಿಡಿದುಕೊಂಡು ತನ್ನ ಪಾಡಿಗೆ ತಾನು ಹೊರಟುಹೋದನು. ತಮ್ಮ ಒಡತಿಯನ್ನು ಕೋತಿಯು ಬಿಟ್ಟ ಕೂಡಲೇ ಸೇವಕಿಯರಿಗೆ ಕರ್ತವ್ಯಜ್ಞಾನವು ಅಂಕ.ರಿಸಿ, ನೆಲದಮೇಲೆ ಬಿದ್ದಿದ್ದ ಆಭರಣಗಳನ್ನು ಅವರು ಹುಡುಕತೊಡಗಿದರು, ಕಡೆಗೆ, ಒಂದು ವಜ್ರದ ಉಂಗುರಹೊರ ತುಗಿ ಮಿಕ್ಕ ಒಡವೆಗಳಲ್ಲಾ ಸಿಕ್ಕಿದುವು. ಈ ವಜ್ರದ ಉಂಗುರವನ್ನೂ ಇದೇ ತರಹದ ಮತ್ತೊಂದನ್ನೂ ಕೃಷ್ಣದೇವರಾಯರು ವಿದೇಶವರ್ತಕರಿಂದ ಬಹಳ ಹಣಕೊಟ್ಟು ಕೊಂಡುಕೊಂಡು, ಒಂದಾನೊಂದು ಸಮಯದಲ್ಲಿ ಅವುಗಳಲ್ಲಿ ಒಂದನ್ನು ಅನಂಗಸೇನೆಗೆ ಕೊಟ್ಟಿದ್ದರು. ಆಕೆಯು ತನ್ನ ಉಳಿದ ಎಲ್ಲಾ ಆಭರಣಗಳಿಗಿಂತಲೂ ಇದನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದಳು. ಆದುದರಿಂದ ಈ ಉಂಗುರವು ಸಿಕ್ಕದೆಹೋಗಲು ಹುಚ್ಚನು ಕದ್ದು ಕೊಂಡು ಹೋಗುತ್ತಿರಬಹುದೆಂದು ನೆನೆಸಿ ಅವನನ್ನ ಹಿಂದಕ್ಕೆ ಕರೆಯಿಸಿದಳು. ಅವನು ಹುಚ್ಚು ಹುಚ್ಚಾಗಿ ಹಾಡುಗಳನ್ನು ಹೇಳಿ ಕಳ್ಳುತ್ತಾ ಕೂಡಲೇ ಹಿಂದಿರುಗಿ ಬಂದನ, ಉಂಗುರವನ್ನು ಆ ಕೋತಿ ಯು ತನ್ನ ಕೈಯಲ್ಲೇ ಹಿಡಿದುಕೊಂಡು ತಿರುಗಿಸಿ ತಿರುಗಿಸಿ ನೋಡುತ್ತಾ, ಒಂದೊಂದುಬಾರಿ ವಜ್ರವನ್ನು ಹಲ್ಲಿನಿಂದ ಕಡಿಯುತ್ತಿದ್ದಿತು. ಅನಂಗಸೇನೆ ಯು ಅದನ್ನು ಬಿಡಿಸಿಕೊಳ್ಳುವುದಕ್ಕಾಗಿ ಕೂತಿಯಕಡೆಗೆ ಒಂದು ಹನ್ನ