ಪುಟ:ರೂಲ್ಸ್ ಮೇಸ್ಟ್ರು.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೂಲ್ಸ್ ಮೇಷ್ಟ್ರು

೨೧


ಉಪಾಧ್ಯಾಯ

ಏನಪ್ಪಾ, ನಿನ್ನದೇನು ಹೇಳು.

ಗೌಡ

ಒಂದು ಹಾಳೆ ಕಾಗದ ಕೊಡಿ ಸೋಮಿ.

ಉಪಾಧ್ಯಾಯ

ಎಲ್ಲೋ ಸ್ವಲ್ಪವೇ ಇದೆಯಲ್ಲ.

ಗೌಡ

ಒಂದು ಹಾಳೆ ಕೊಡ್ರಲಾ ಸಾಕು. ಸೋಮಿ, ಅಂಗೇನೆ ಒಂದರ್ಜಿ ಗೀಚಿ ಕೊಡ್ರಲಾ. ಅಮಲ್ದಾರ್ರು ಬರ್ತಾರಿತ್ತ, ಅರ್ಜಿ ಕೊಡ್ಬೇಕು

ಉಪಾಧ್ಯಾಯ

ಈಗ ಪುರಸೊತ್ತಿಲ್ಲ, ಪಾಠ ಮಾಡಬೇಕು. ಸ್ಕೂಲಾಗಲಿ ಆಮೇಲೆ ಬರೆದುಕೊಡ್ತೇನೆ.

ಗೌಡ

ಆಗಾಕಿಲ್ಲ ಸೋಮಿ, ಈಗ ಬರ್ತವ್ರೆ. ನನ್ನ ಗದ್ದೆಗೆ ನೀರೇ ಬಿಡಲಿಲ್ಲ. ಶಾನುಬಾಗರು ಕಂದಾಯ ಮಾತ್ರ ಏರಿಸಿಬಿಟ್ಟವ್ರೆ. ಓಟು ದಮ್ಮಯ್ಯ ಗುಡ್ಡೆ ಇಟ್ರೂನೂವೆ ಪಲಾ ಆಗಲಿಲ್ಲ. ಶೇಕದಾರ್ರೂನೂ ಅವರ ಕಡೇನೇ ಅವ್ರೆ.

( ಉಪಾಧ್ಯಾಯರು ಬರೆದುಕೊಡುವರು, ಇನ್ನೂ ಕೆಲವರ ಪ್ರವೇಶ )