ಪುಟ:ರೂಲ್ಸ್ ಮೇಸ್ಟ್ರು.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ರೂಲ್ಸ್ ಮೇಷ್ಟ್ರು

೧ನೇಯವ

ಮೇಷ್ಟ್ರೇ ! ಮೇಷ್ಟ್ರೇ ! ಅಮಲ್ದಾರ್ ಸಾಹೇಬ್ರು ಬರ್ತವ್ರೆ. ಇಸ್ಕೋಲ್ ಬಿಟ್ಟುಬಿಡಿ ಮೇಷ್ಟ್ರೇ.

ಉಪಾಧ್ಯಾಯ

ಆಗೋದಿಲ್ಲಪ್ಪ, ಹಾಗೆಲ್ಲ ರೂಲ್ಸಿಲ್ಲ.

೨ನೇಯನ

ಇದು ಪಂಚಾಯ್ತಿ ಕಟ್ಟಡ ಮೇಷ್ಟ್ರೇ, ಇಸ್ಕೋಲಿಗಿನ್ನೂ ಕಟ್ಟಡ ಕಟ್ಸಿಲ್ಲ. ನಿಮ್ಮ ಇಲಾಖೇರ ಕೇಳಿದರೆ ನೀವೇ ಕಟ್ಟಿ ಅಂತ ತಾಕೀತ್‌ ಮಾಡ್ತಾರೆ. ಎಲ್ಲಾ ಹಳ್ಳಿಗೂ ಕಟ್ಸತವ್ರೆ ನಮ್ಮ ಹಳ್ಳಿಗಿಲ್ಲ. ಏ ಅಪ್ಪಣ್ಣೀ ಮನೇಗೆ ಹೋಗ್ರಲಾ

( ಹುಡುಗರು ಸ್ಲೇಟು ಪುಸ್ತಕ ಎತ್ತಿಕೊಳ್ಳುವರು. ಉಪಾಧ್ಯಾಯರು ತಡೆದು )

ಉಪಾಧ್ಯಾಯ

ಬೇಡಪ್ಪೋ, ಹಾಗೆಲ್ಲ ಬಿಡೋದಿಲ್ಲ. ನಾನು ಮೇಲಕ್ಕೆ ರಿಪೋರ್ಟು ಮಾಡ್ತೀನಿ. ದೊಡ್ಡ ಸಾಹೇಬರಿಗೆ ತಿಳಿದರೆ ದೊಡ್ಡ ಪ್ರಮಾದ ಆಗುತ್ತೆ. ಅವರು ಸುಮ್ಮನೇ ಇರೋದಿಲ್ಲ, ಫರಂಗಿ ಜನ ! ಅವರು ಮಿಲ್ಟೇರಿ !

೧ನೇಯನ

ಮಿಲ್ಟೇರಿ ಗಿಲ್ಟೇರಿ ನಮ್ತಾವ ಏನ್ ನಡೀತೈತೆ ! ಎಲಾ ಹೋಗ್ರಲಾ ಮನೆಗೆ. ಅಮಲ್ದಾರ್ರ ಸ್ವಾರಿ ಬಂದೇ ಬಂತು!