ಪುಟ:ರೂಲ್ಸ್ ಮೇಸ್ಟ್ರು.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೂಲ್ಸ್ ಮೇಷ್ಟ್ರು

೨೩

(ಹುಡುಗರೆಲ್ಲರೂ ಹೊರಟುಹೋಗುವರು. ಅಮಲ್ದಾರ್ರು ಮೊದಲಾದವರ ಪ್ರವೇಶ)

ಅಮಲ್ದಾರ್ರು

ಏನು ಮೇಷ್ಟ್ರ ತಕರಾರು ? ನೀನೇನೋ ಮೇಷ್ಟ್ರು ?

ಉಪಾಧ್ಯಾಯ

ಹೌದು ಸ್ವಾಮಿ.

ಅಮಲ್ದಾರ್ರು

ಏನ್ ನಿನ್ನ ಹೆಸರು ?

ಉಪಾಧ್ಯಾಯ

ರಾಮಚಂದ್ರಯ್ಯ ಸ್ವಾಮಿ.

ಅಮಲ್ದಾರ್ರು

ನಿನ್ನ ಸಂಬಳ ?

ಉಪಾಧ್ಯಾಯ

ಹದಿನೈದು ರೂಪಾಯಿ ಸ್ವಾಮಿ.

ಅಮಲ್ದಾರ್ರು

ಎಷ್ಟು ವರ್ಷ ಸರ್ವಿಸ್ಸು ?

ಉಪಾಧ್ಯಾಯ

ಇಪ್ಪತ್ತಾಯ್ತು ಸ್ವಾಮಿ.