ಪುಟ:ರೂಲ್ಸ್ ಮೇಸ್ಟ್ರು.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ರೂಲ್ಸ್ ಮೇಷ್ಟ್ರು

ಅಮಲ್ದಾರ್ರು

ಇದು ಪಂಚಾಯ್ತಿ ಕಟ್ಟಡ. ಇಲ್ಲಿ ಸ್ಕೂಲ್‌ಗೀಲ್ ಮಾಡಕೂಡದು.

ಉಪಾಧ್ಯಾಯ

ಅಪ್ಪಣೆ ಮಹಾಸ್ವಾಮಿ. ಗ್ರಾಮಸ್ಥರು ಹೇಳಿದರು. ನಾನು ಮಾಡ್ತಿದ್ದೇನೆ. ಬೇರೆ ಕಟ್ಟಡ ಕಟ್ಟಿಸಿಕೊಡಿ ಎಂತ ಎಷ್ಟು ತಗಾದೆ ಕೊಟ್ಟರೂ ಕಟ್ಟಿಸಿಲ್ಲ. ' ಇಲ್ಲೇ ಮಾಡಿ ಮೇಷ್ಟ್ರೇ ' ಅಂದರು. ನಾಳೆಯಿಂದ ಸ್ಕೂಲು ಎಲ್ಲಿ ಮಾಡಲಿ ಮಹಾಸ್ವಾಮಿ ?

ಅಮಲ್ದಾರ್ರು

ಎಲ್ಲಾದರೂ ಮಾಡು, ಮರದ ಕೆಳಗೆ ಮಾಡು.

ಉಪಾಧ್ಯಾಯ

ಬೆಂಚು, ಬೋರ್ಡು, ಸಾಮಾನು ಎಲ್ಲಿಟ್ಟು ಕೊಳ್ಳಲಿ ಸ್ವಾಮಿ ?

ಅಮಲ್ದಾರ್ರು

ತಲೇಮೇಲಿಟ್ಟುಕೋ.

ಉಪಾಧ್ಯಾಯ

ಮಹಾಸ್ವಾಮಿ, ನಾನು ಸರ್ಕಾರಿ ನೌಕರ. ರೂಲ್ಸು ಇದ್ದ ಹಾಗೆ ನಾನು ಚಾಕರಿ ಮಾಡ್ತೇನೆ. ನನ್ನಮೇಲೆ ಕೋಪ ಮಾಡ್ತೀರಿ. ನನಗೇನು ಸ್ವಾಮಿ, ಎಲ್ಲಿ ಪಾಠ ಮಾಡು ಅಂದರೆ ಅಲ್ಲಿ ಮಾಡ್ತೇನೆ.