ಪುಟ:ರೂಲ್ಸ್ ಮೇಸ್ಟ್ರು.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೂಲ್ಸ್ ಮೇಷ್ಟ್ರು

೨೫

೧ನೇ ಗೌಡ

ಮಾಸ್ವಾಮಿ, ಮೇಷ್ಟ್ರು ಸರಿಯಾಗಿ ಇಸ್ಕೋಲೇ ಮಾಡಾಕಿಲ್ಲ. ಎಲ್ಡು ದಿವ್ಸ ಬಾಗ್ಲು ತೆಗೆದ್ರೆ ನಾಕ್ ದಿವ್ಸ ಮುಚ್ಚಿಬಿಡ್ತಾರೆ. ಆ ರಜ, ಈ ರಜ, ಅಂತ ನೆಪ ಹೇಳ್ತಿರೋದೇ. ದಿನಾಗೂ ನಮ್ಮಕ್ಳು ಇಸ್ಕೋಲಿಗೆ ತಿರುಗೋದು ವಾಪಸ್ ಬರೋದು. ಎರಡಚ್ಚರೂನೂವೆ ಬರಲಿಲ್ಲ.

ಉಪಾಧ್ಯಾಯ

ಸ್ವಾಮಿ....

೨ನೇ ಗೌಡ

ಸಾಲದ್ದಾಕೆ, ಬದನೇಕಾಯಿ ತಂದ್ಕೊಡು, ಕುಂಬಳ್ಕಾಯಿ ತಂದ್ಕೊಡು ಅಂತಾ ಬೆದ್ರಿಸ್ತಾರ. ಮಕ್ಳು ಇಸ್ಕೋಗ್ಲೇ ಹೋಗದೆ ಬಯಬಿದ್ದು ಮನ್ಯಾಕೇ ಕುಂತವೆ.

೧ನೇ ಗೌಡ

ಇಸ್ಕೋಲ್ಗೋದ್ರೇ ಮಕ್ಕಳ್ನ ಚಚ್ಚೋಕೆ, ಮುದ್ದೆ ತಿರುವೋ ಗೂಟ, ಗೂಟಾವ ಮಡಕೊಂಡವ್ರೆ, ಎಂಗ್ ಸೋಮಿ ನಮ್ಮಕ್ಳು ಬದ್ಕೋದು.

ಉಪಾಧ್ಯಾಯ

ಸ್ವಾಮಿ, ಇಲ್ಲದ್ದನ್ನೆಲ್ಲ ನನ್ನಮೇಲೆ ಹೇಳುತ್ತಾರೆ. ರೂಲು ಹಾಕುವುದಕ್ಕೆ ರೂಲರ್ ಇಟ್ಟುಕೊಂಡಿದ್ದೇನೆ ಸ್ವಾಮಿ, ಅಷ್ಟೇ.