ಪುಟ:ರೂಲ್ಸ್ ಮೇಸ್ಟ್ರು.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ರೂಲ್ಸ್ ಮೇಷ್ಟ್ರು

೨ನೇ ಗೌಡ

ಸುಮ್ಕಿರಿ ಮೇಸ್ಟ್ರೆ, ಕಂಡಿವ್ನಿ. ಯಾವಾಕ್ ನೋಡಿದ್ರೂ ರೂಲ್ಸು, ರೂಲರ್ ಮಾತೇ ಆಡ್ತವ್ರೆ.

೧ನೇ ಗೌಡ

ಮೂರೊತ್ತೂ ಬರ್ಕೋತಾನೆ ಹೊತ್ತು ಕಳೀತವ್ರೆ. ಹುಡುಗರೀಗೆ ಪಾಟಾನೇ ಮಾಡೋಕಿಲ್ಲ. ಗೋಡ್ಗೆಲ್ಲ ಪಟ ಅಂಟ್ಸೋದು, ರಿಜಿಸ್ಟರ್ ಬರೆಯೋದು, ಇನ್ನೂ ಏನೋ ಟಿಪ್ಪಣಿಗಿಪ್ಪಣಿ ಅಂತ ಮಸಿ ಚೆಲ್ತಿರೋದು. ಏನ್ ಸೋಮಿ ಮಕ್ಕಳ್ಗೆ ಇದ್ಯೆ ಬರಬ್ಯಾಡ್ವಾ.

೨ನೇ ಗೌಡ

ಮೂರೊರ್ಸ, ನಾಕೊರ್ಸ ಆದರೂನೂವೆ ಅ, ಆ ನೇ ಕಲೀತಾ ಅವ್ರೆ. ಪುಸ್ತಕ ತೆಕ್ಕೊಡು, ಇಸ್ಲೇಟ್ ತೆಕ್ಕೊಡು ಅಂತ ಸುಮ್ಕೆ ತಗಾದೆ ಮಾಡ್ತವ್ರೆ. ಏಟೊಂದು ಸೋಮಿ ತೆಕ್ಕೊಡೋದು. ಇಸ್ಕೋಲ್ ಬಂದು ನಮ್ಮ ಮನೆ ಮಟಾ ಎಲ್ಲಾ ಆಳಾಗೋಯ್ತು.

೧ನೇ ಗೌಡ

ಇನ್ಚ್ ಪೆಟ್ರು ಬರೋದು ಸುಮ್ಕೆ ರಿಜಿಸ್ಟರ್ ತಿರ್ವಾಕೋದು, ಏನೋ ಗೀಚ್ಕೊಂಡೋದು.

ಅಮಲ್ದಾರ್ರು

ಯಾರು ನಿನ್ನ ಇನ್‌ಸ್ಪೆಕ್ಟರ್ ?