ಪುಟ:ರೂಲ್ಸ್ ಮೇಸ್ಟ್ರು.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೂಲ್ಸ್ ಮೇಷ್ಟ್ರು

೪೩

ಬೇಕೂಂತ ಅರ್ಜಿಹಾಕಿದ. ಕಟ್ಟಡ ಕೊಡ್ತೇವೆ' ಎಂತ ಏನೇನೊ ಬರಕೊಟ್ಟ.

೨ನೇ ಗೌಡ

ಆ ಅರ್ಜಿಗೆ ನೀನೂ ರುಜು ಹಾಕಿಲ್ವಾ ?

ಈರಣ್ಣ ಗೌಡ

ಏನೋ ರುಜು ಹಾಕು ಅಂದ ಹಾಕಿವ್ನಿ. ರುಜು ಹಾಕಿದ್ರೆ ಸ್ಕೂಲು ಕಟ್ಟಡ ಕಟ್ಟಿಕೊಡಬೇಕಾ ?

ಇನ್ಸ್ಪೆಕ್ಟರ್

ಗ್ರಾಮಸ್ಥರು ಮನಸ್ಸು ಮಾಡಿದರೆ ಕಟ್ಟಡ ಆಗಿಹೋಗುತ್ತೆ.

ಈರಣ್ಣಗೌಡ

ನಿಮ್ಮ ಇಸ್ಕೋಲೂ ಬ್ಯಾಡ ಎಂತದೂ ಬ್ಯಾಡ.

೨ನೇ ಗೌಡ

ಇಸ್ಕೋಲ್ಯಾಕೆ ಬ್ಯಾಡಲಾ ? ನಾವೆಲ್ಲ ಅಷ್ಟು ಕಸ್ಟಪಟ್ಟು ಮಕ್ಕಳ್ಗೆ ಇದ್ಯೆ ಬರಲಿ ಅಂತ ಇಸ್ಕೋಲು ಮಾಡ್ಸಿಕೊಂಡ್ರೆ ಇಸ್ಕೋಲೇ ಬ್ಯಾಡ ಅಂತೀಯ.

ಈರಣ್ಣಗೌಡ

ಆಳಿಸ್ಕೋಲು ಬಂದೊ ಗ್ರಾಮದಾಗೆ ಪಾರ್ಟಿ ಆಗೋಯ್ತು. ಆ ರಾಮಣ್ಣಗೌಡ ನಾ ಇಸ್ಕೂಲು ಮಾಡ್ಸಿದೆ, ನಂಕೇ ಓಟು ಕೊಡ್ರಲಾ ಅಂತ ವರ್ಸವರ್ಸನೂ ತಾನೇ ಚೇರ್ಮನ್, ತಾನೇ