ಪುಟ:ರೂಲ್ಸ್ ಮೇಸ್ಟ್ರು.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪

ರೂಲ್ಸ್ ಮೇಷ್ಟ್ರು

ರಪ್ಪರ್‌ಜಂಟಿ ನೊಂಬರು. “ ಇಸ್ಕೋಲು ಕೊಡ್ಸಿತೀನಿ, ರಸ್ತೆ ಮಾಡ್ಸಿತಿವ್ನಿ, ಕೆರೆ ಕಟ್ಸಿತಿವ್ನಿ, ಕಂದಾಯ ರಿಮಿಸನ್ ಮಾಡ್ಸಿತಿವ್ನಿ” ಅಂತ ಹಳ್ಯೋರತ್ರೆಲ್ಲೆಲ್ಲ ಓಟು ವಸೂಲಿಮಾಡೋಕೆ ಎಲ್ಲಾ ಆಟಾನು ಕಟ್ತವ್ನೆ. ನಮ್ಕೆ ಇಸ್ಕೊಲೇ ಬೇಡ ಹೋಗು.

೩ನೇ ಗೌಡ

ಲೇ ಈರಣ್ಣ, ಬಾಯಯ್ತೆ ಅಂತ ಅಂಗೆ ನೀನು ದೂಸಣೆ ಮಾಡ್ತೀಯಾ ? ರಾಮಣ್ಣ ಗೌಡ ಬರಲೇಳು, ಕಾಣ್ತೈತ.

ಈರಣ್ಣಗೌಡ

ನಂಗೇನು ರಾಮಣ್ಣಗೌಡ್ನ ಹೆದರಿಕೆ. ಗಲ್ಲಿಗಾಕ್ತಾನ ?

( ರಾಮಣ್ಣಗೌಡನ ಪ್ರವೇಶ, ಈರಣ್ಣ ಗೌಡ ಸುಮ್ಮನಾಗುವನು )

ರಾಮಣ್ಣ ಗೌಡ

ನಮಸ್ಕಾರ ಸ್ವಾಮಿ, ನಾನು ಊರಲ್ಲಿರಲಿಲ್ಲ. ಈಗತಾನೆ ಬಂದೆ. ಯಾವಾಗ ಬಂತು ತಮ್ಮ ಸ್ವಾರಿ.

ಇನ್ ಸ್ಪೆಕ್ಟರ್

ಬೆಳಗ್ಗೆ ಇನ್‌ಸ್ಪೆಕ್ಷನ್ನಿಗೆ ಬಂದೆ. ನಿಮ್ಮ ಚೇರ್ಮನ್ನರಿಗೆ ಸ್ಕೂಲೇ ಬ್ಯಾಡವಂತೆ. ಇನ್ನು ಈ ಹಳ್ಳಿಗೆ ಬರೋ ಕಷ್ಟಾನೇ ತಪ್ಪಿತು.

ರಾಮಣ್ಣ ಗೌಡ

ಯಾರು ಹೇಳಿದವರು, ಈರಣ್ಣನಾ ? ಈ ವರ್ಸ ಚೇರ್ಮನ್ ಆದ್ದಕ್ಕೆ ಪಿತ್ತ ತಲೆಗೇರ್ತಾ ?