ಪುಟ:ರೂಲ್ಸ್ ಮೇಸ್ಟ್ರು.pdf/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೂಲ್ಸ್ ಮೇಷ್ಟ್ರು

೪೫

ಈರಣ್ಣಗೌಡ

ನಿನ್ನಿಸ್ಕೋಲ್ ನೀನೆ ಮಡಕ್ಕೋ.

( ಹೊರಡುವುದರಲ್ಲಿರುವನು)

೧ನೇ ಗೌಡ

ಈರಣ್ಣ, ಅಂಗೆಲ್ಲ ಹೋಗ್ಬೇಡ ಬಾ. ಸ್ವಾಮೇರತಾವ ಇಸ್ಕೋಲ್ ಕಟ್ಟಡ ಇತ್ತರ್ಥ ಮಾಡೋಣ.

ಈರಣ್ಣಗೌಡ

ನಿಮ್ಮ ಪಾಳೇಗಾರ ಬಂದವ್ನಲ್ಲ. ನಂಗ್ಯಾಕ ಇನ್ ಮಾತು, ಗದ್ದೆ ಕಡೆಗೆ ಹೋತಿವ್ನಿ.

( ಹೊರಟುಹೋಗುವನು )

ರಾಮಣ್ಣ ಗೌಡ

ಸ್ವಾಮಿ, ಕಟ್ಟಡ ಕೆಲಸಕ್ಕೆ ಸಾಮಾನೆಲ್ಲ ಜಮಾಯಿಸಿದ್ದೇವೆ. ಈಗ ಕಣಗಾಲ. ರೈತರು ಕೆಲಸಕ್ಕೆ ಬರೋದಿಲ್ಲ. ಈ ವರ್ಷ ಎಂಗಾದರೂ ಕಟ್ಸಿಕೊಡ್ತೇನೆ, ಸ್ವಲ್ಪ ಸುಧಾರಿಸಿ. ಖಂಡಿತ ಈ ವರ್ಷ ನಿಲ್ಲಿಸೋದಿಲ್ಲ. ಮೇಸ್ಟ್ರೆ ! ಇನ್ಚ್‌ಪೆಟ್ರನ್ನ ಅಂಗೇ ಕಳಿಸಬೇಡ್ರಿ. ನಮ್ಮ ಹಳ್ಳಿಗೆ ಬಂದು ಅಂಗೇ ಹೋಗೋದು ಚೆನ್ನಾಗಿಲ್ಲ.

( ಉಪಾಧ್ಯಾಯರು ಹೋಗುವರು)