ಪುಟ:ರೂಲ್ಸ್ ಮೇಸ್ಟ್ರು.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರೂಲ್ಸ್ ಮೇಷ್ಟ್ರು

೪೭

ಸರಿಯಾಗಿ ನೋಡಿಕೊಳ್ಳಬೇಕು. ನಿಮ್ಮ ಚೇರ್ಮನ್ನರಂಥವರು ಬಂದುಬಿಟ್ಟರೆ ನಾವೇನು ಮಾಡುವುದು ?

( ಉಪಾಧ್ಯಾಯರು ಕಾಫಿ ತರುವರು, ಎಳನೀರು ಬರುವುದು )

ಮೇಷ್ಟು

ಸ್ವಾಮಿ, ರಾಮಣ್ಣಗೌಡರಿಂದಾನೇ ಈ ಹಳ್ಳಿ ಇಷ್ಟು ಮಟ್ಟಿಗೆ ಇರೋದು. ನಮಗೆಲ್ಲ ಎಷ್ಟೋ ಸಹಾಯ ಮಾಡಿದ್ದಾರೆ. ಅವರಿಲ್ಲದಿದ್ದರೆ ಎರಡು ದಿವಸ ಇಲ್ಲಿ ಪೂರೈಸೋದು ಕಷ್ಟ ಸ್ವಾಮಿ.

ಇನ್ ಸ್ಪೆಕ್ಟರ್

ಮೇಷ್ಟ್ರೇ, ಮಕ್ಕಳನ್ನೆಲ್ಲ ಕರೆಯಿರಿ. ಹಾಡೇನಾದರೂ ಹೇಳಿ ಕೊಟ್ಟಿದ್ದೀರಾ, ಕೇಳೋಣ.

( ಹುಡುಗರು ಜಮಾಯಿಸುವರು. “ ಕಾಯೋ ಶ್ರೀಗೌರಿ” ಹೇಳುವರು. )