ಪುಟ:ವತ್ಸರಾಜನ ಕಥೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕರ್ಣಾಟಕ ಕಾವ್ಯಕಲಾನಿಧಿ - ಗಿಂಡಿ ಕುಚಾಯಿಗಳ ಸಾಲುಗಳಿ೦ ಮೇಲಾಗಿ ನೇತ್ರಗಳಿಗೆ ಸೊಗಸನುಂಟುಮಾ ಡುತ್ತ, ಅಲ್ಲಲ್ಲಿ ಒಪ್ಪುತ್ತಿರುವ ಅರ್ಗಣಿತ೦ಗಳಾದ ಅರವಟ್ಟಿಗೆಗಳಿಂದಲೂ;... ಅಲ್ಲಲ್ಲಿ ನಿರ್ಮಿಸಿರುವ ಜಲದುರ್ಗಸ್ಥಲ ಭೂದುರ್ಗಸ್ಥಲಗಳೆ೦ಬ ದುರ್ಗಭೇದಗಳಿ೦ದಲೂ ; ಮತ್ತು ಕೋಮಲಗಳಾಗಿ ಬೆಳೆದಿರುವ ಕಮಲ ಕಲ್ಲಾರ ಮುಂತಾದ ಪುಷ್ಪಗಳ ಕಾಲುಗಳಲ್ಲಿ ಲೀಲೆಯಿಂದೊಪ್ಪುವ ಹಂಸಕಾರಂಡವ ಮೊದಲಾದ ಜಲಪಕ್ಷಿಗಳ ಕಲ ಕಲಧ್ವನಿಗಳಿಗೆ ನೆಲೆವನೆಯಾಗಿ, ಸುಧೆಯ೦ ಸೋಲಿಸುವ ರುಚಿಯಿಂದೊಪ್ಪು, ನಿರ್ಮಲಂಗಳಾದ ಜಲಗಳಿಂದ ಮೆರೆಯುವ ನದೀನದ ತಟಾಕಸರೋವರ ಮುಂತಾಗ ಜಲಾಶಯಗಳಿಂದಲೂ ; ಶಿವ ವಿಷ್ಣು ದುರ್ಗಾ ಗಣಪತಿ ಮುಂತಾದ ದೇವಾಲಯ ಗಳಿ೦ದಲೂ ; ದರ್ಶನಮಾತ್ರ ದಲ್ಲಿಯ ನಂತಮಹಾಪಾತಕಂಗಳಂ ಸಂಹರಿಸುತ್ತ ಶೋಭಿಸುವ ಅನೇಕವಾದ ತೀರಗಳಿ೦ದಲೂ ; ಖನಿಗಳಿಂದ ಪರಿವೃತವಾದ ಪುಣ್ಯಾರಣ್ಯ೦ಗಳಿ೦ದಲೂ ; ನವರತ್ನಗಳ ಉತ್ಪತ್ತಿಗೆ ಕಾರಣವಾದ ಾನಗಳಿ೦ದ ಮನೋಹರವಾಗಿ, ಅ೦ಬರವನು ಅವಲಂಬಿಸಿರುವ ಶೃಂಗಗಳಿ೦ದ ಸ೦ಗತವಾದ ಅನೇಕ ಪರ ತಗಳಿ೦ದಲೂ ರಮಣೀಯವಾಗಿರುವ ದಶಾರ್ಣ ದೇಶವೆಂಬ ಕಮ ಲಕ್ಕೆ ರ್ಕಣಿ್ರಕೆಯಂತೊಪ್ಪುತ, ಭೂ ದೇವಿಯ ಕಡೆಯ ಮಾಣಿಕದ ಬೋನಂತೆ ಪೊಳೆಯುತ್ತ, ಸ್ವರ್ಗದ ಸೊಗಸನ್ನು ಸೂರೆಗೊಳ್ಳುತ್ತ, ಭೋಗಾವತಿಯ ಭಾಗ್ಯವಂ ಬಯಲುಗೆಯು, ಸಕಲವಾದ ಸಂಪತ್ತುಗಳಿಗೂ ವಾಸಭೂಮಿಯಾಗಿ ಮೆರೆಯು ತಿರುವ, ಕೌಶಾಂಬಿಯೆಂಬ ಪಟ್ಟಣವ್ರ ಲೋಕಕ್ಕೆ ಕೌತುಕವ ಬೀರುತ್ತಿರುವದು. ಆ ಪಟ್ಟಣದಲ್ಲಿ ಆಜಾನುದೀರ್ಘ ಬಾಹುವಾಗಿ ವಿಶಾಲವಕ್ಷಸ್ಸಲನಾಗಿ ಅಂಗಂಗಳಿಂದೊಡಗೂಡಿದ ಮನ್ಮಥನೋ ಎಂಬಂತೆ ಮಂಗಳಾಂಗನಾಗಿ, ಭುಜಬಲ ದಿಂದ ವೈರಿಗಳ ಮೊತ್ತವಂ ಕತ್ತರಿಸಿ ಎತ್ತೆತ್ತಲೂ ತನ್ನ ಕೀರ್ತಿಯೆಂಬ ಬೆಳುದಿಂ ಗಳಂ ಬೀರುತ್ಯ, ರಾಜನೀತಿಗನುಸಾರವಾಗಿ ಧನ್ಮದಿಂ ಪ್ರಜೆಗಳ೦ ಸಲಹುತ್ತ, ದಯಾ ದ್ರಾಕ್ಷಿಣಾದಿ ಸದ್ದು ಣಗಳಿಗೆ ಸಮುದ್ರನಾಗಿ, ರೂಪಿನಲ್ಲಿ ರತಿಗಿಂತಲೂ ಅತಿಶಯ ಳಾಗಿ ಪತಿವ್ರತಾ ಶಿರೋಮಣಿಯಾಗಿ ಪಟ್ಟಿ ಮಹಿಷಿಯಾದ ವಾಸವದತ್ಯಾದೇವಿ ಯೆಂಬ ಪತ್ನಿಯಿಂದಲೂ, ಸಮಸ್ತ ನೀತಿಗಳಂ ತಿಳಿದು ರಾಯನ ಹೆಚ್ಚುಗೆಯಂ ಬಯ ಸುತ್ತ ಕುಲಕನಾಗತನಾಗಿ ಬಂದ ಯೌಗಂಧರಾಯಣನೆಂಬ ಮಂತ್ರಿಯಿಂದಲೂ ನಡೆಗೊಂಡು, ಕುಲಕ್ರಮಾಗತವಾಗಿ ಒಂದ ರತ್ನ ಸಿಂಹಾಸನವನ್ನೇರಿ, ಅರಸುಗ ೯೦ದ ಕಪ್ಪವನ್ನೊಪ್ಪಿಸಿಕೊಳ್ಳುತ್ತ, ರಾಜಾಧಿರಾಜನೆಂಬ ಪ್ರಸಿದ್ದಿಯಂ ವಹಿಸಿದ ವತ್ವ ರಾಜೇ೦ದ್ರುನು ಸದಾ ಸಂತೋಷಭರಿತನಾಗಿ ರಾಜ್ಯ ಪರಿಪಾಲನಂ ಗೆಯ್ಯುತ್ತ ಲಿದ್ದು, ಮಧ್ಯಾಹ್ನ ಕಾಲವಂ ಸೂಚಿಸುವ ಶಂಖಧ್ವನಿಯಂ ಕೇಳಿ, ರತ್ನ ಸಿಂಹಾಸನ ದಿಂದೆದ್ದು, ಅಂತಃಪುರಕ್ಕೆ ಅಭಿಮುಖನಾಗಿ ಹೋಗುತ್ತ, ಮಂತ್ರಿಯ ಕೈಲಾಗವ೦ ಹಿಡಿದು, “ ಅಯ್ಯಾ, ಮಂತ್ರಿಸ್ಮನೆ : ಕಷ್ಟಗಳ೦ ತಂದ ಗೋಶಾಧೀಶ್ವರರ