ಪುಟ:ವತ್ಸರಾಜನ ಕಥೆ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, → ph ಹದಿಮೂರನೆಯ ಗುಚ ೦. ) ಅನಂತರದಲ್ಲಿ ವತ್ಸ ರಾಜನು ವಾಸವದತ್ತಾದೇವಿಯು ಬಂದಳೆಂದು ನುಡಿದ ವಿದೂಷಕನ ವಾಕ್ಯವಂ ಕೇಳಿ, ಭಯಭ್ರಾಂತಿಯಿಂದ ಅವರು ಪೊರಮಟ್ಟು ಪೋ ದುದಂ ಕಂಡು, ಉಭಯ ಪಾರ್ಶ್ವವಂ ನೋಡಿ, ವಾಸವದತ್ತಾ ದೇವಿಯಂ ಕಾಣದೆ, ವಿದೂಷಕನಂ ಕುರಿತು,- ಎಲೈ ಮಿತ್ರನೇ, ವಾಸವದತ್ತಾ ದೇವಿಯು ಬಂದಳೆಂದು ನುಡಿದೆಯಷ್ಟೆ. ಎಲ್ಲಿರುವಳು ? ವಾಸವದತ್ತಾ ದೇವಿಯಂ ತೋರಿಸು ?” ಎಂದು ಬೆಸಗೊಳಲು ; ವಿದೂಷಕನು ನಗುತ- ಎಲೈ ಮಹಾರಾಜನೇ, ಪತ್ನಿ ಯ ಪೆಸರಂ ಪೇಳಿದ ಮಾತ್ರದಿಂದಲೇ ಬೆದರುತ್ತಿರುವವನೇ ಕೇಳು; ನೀನು ಕೈವಿಡಿದ ಕಾಂತೆಯು ಎಷ್ಟು ಉಪಚಾರಗಳಂ ಪೇಳಿದಾಗ್ಯೂ ಅಧಿಕವಾದ ರೋಷದಿಂದೊಡಗೂಡಿ ಕೋಪ ದಲ್ಲಿ ವಾಸವದತ್ತಾದೇವಿಗೆ ಸಮಳಾಗಿದ್ದ ಕಾರಣದಿಂದ ವಾಸವದತ್ತಾ ದೇವಿಯೇ ಬಂದಳೆಂದು ನುಡಿದೆನಲ್ಲವೆ, ದೇವಿ ಯು ಬಂದುದಂ ನುಡಿದವನಲ್ಲ. ಈ ವಾಕ್ಯವಂ ಕೇಳಿದ ಮಾತ್ರದಿಂದಲೇ ಕೈಗೆ ಸಿಕ್ಕಿದ್ದ ಮನೋಹರಾ೦ಗಿಯಾದ ಆ ಕಾಂತೆಯc ಕೈ ಬಿಡಬಹುದೇ ಹೇಳು ?” ಎನಲು; ರಾಯನು ಉದ್ದವಾಗಿ ನಿಟ್ಟುಸಿರುಗಳಂ ಬಿಟ್ಟು ಬಳಲಿ ಬಾಯಾರಿ ಬಸವಳಿದು- ಎಲಾ ಮೂರ್ಖನಾದ ವಿದೂಷಕನೇ, ಕಲ್ಯಾಣಿ ಯಾಗಿ ಕಮಲನೇತ್ರೆಯಾಗಿ ಕಲಕಂಟಯಾಗಿ ಕಾಮಿತಾರ್ಥ ಸ್ವರೂಪಳಾದ ಕಾಂತೆ ಯನ್ನು ಕೈ ಬಿಡಿಸಿದುದಲ್ಲದೆ ಎನ್ನನ್ನೇ ನಿಂದಿಸುವದಕ್ಕೆ ಯತ್ನ ಪಟ್ಟಿರುವ ನಿನ್ನ ಸಾಹ ಸವನ್ನು ಏನೆಂದು ಬಣ್ಣಿಸಬಹುದು ? ಮುಂದೆಯಾದರೂ ಮಂದಗಮನೆಯಾಗಿ, ಅರವಿಂದಾಸ್ಯೆಯಾಗಿ, ಕುಂದದಂತೆಯಾಗಿ, ಬಾಲೇಂದುಮಾಲೆಯಾಗಿರುವ ಆ ಸುಂದ ರಿಯ ಸಂದರ್ಶನವು ಎಂದಿಗೆ ಎನಗೆ ಸಂಧಿಸುವದು ಮಂದಮತಿಯೆ ವೇಳು ? ೨) ಎಂದು ನಿಂದಿಸುತ್ತ, ಕ೦ದಿ ಕುಂದಿ ಮುಂದುಗಾಣದೆ, ದಿಕ್ಕುದಿಕ್ಕುಗಳಲ್ಲಿರುವ ವಸ್ತುಗ ಳೆಲ್ಲವನ್ನೂ ಆ ಸಾಗರಿಕೆಯನ್ನಾಗಿಯೇ ಊಹಿಸುತ್ಯ, ತಲ್ಲಣಗೊಳ್ಳುತ್ತಿರಲು ; ವಿದೂಷಕನು ಸಂತಾಪನಂ ಪೊಂದುವ ರಾಯನ ಅಂತರಂಗದಲ್ಲಿ ಪುಟ್ಟದ ಚಿಂತೆ ಯನ್ನು ತಿಳಿದು, ' ಎಲೈ ಮಹಾರಾಜನೇ, ಈಗ ಹೇಗೆ ದೈವಯೋಗದಿಂದ ಆ ಕಾಂತೆಯು ಕರಗತವಾಗಿದ್ದಳೊ ಮುಂದೆಯೂ ಈ ರೀತಿಯಿಂ ದೊರಕುವಳು. ವಾಸವದತ್ತಾದೇವಿಯ ಹೆಸರನ್ನು ಉಸಿರಿದ ಮಾತ್ರದಿಂದಲೇ ಬೆಚಿ ಬೆದರುತ್ತಿರುವ ಅಧೀರನಾದ ನೀನು ಶತ್ರುಗಳನೆಲ್ಲರಂ ರಣಭೂಮಿಯಲ್ಲಿ ಜಯಿಸಿರುವುದು ಅಪದ್ದ ವಾಗಿಯೇ ತೋರುವುದು ” ಎನಲು ; ರಾಯನು-ಎಲೆ, ಹೆಡ್ಡನಾದ ವಿದೂಷ ಕನೇ, ಕೇಳು, ಪ್ರೌಢರಾಗಿ ಕೋಪಶಾಂತೆಯರಾಗಿ ಸುಂದರಿಯರಾದ ಕಾಂತೆಯ ರುಗಳು ಮತ್ತೊಬ್ಬರಾದ ಸ್ತ್ರೀಯರ ಹೆಸರನ್ನು ಹೇಳಿದ ಮಾತ್ರದಿಂದಲೇ ತಾಳಲಾರದ ತಾಪನಂ ಪೊಂದಿ ಪ್ರಾಣವ ಬಿಡುವದರಲ್ಲಿ ಪ್ರಯತ್ಥ ವಂ ಗೆಯ್ಯುತ್ತಿರುವರು. ಒ