ಪುಟ:ವತ್ಸರಾಜನ ಕಥೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೩ - ಕರ್ಣಾಟಕ ಕಾವ್ಯಕಲಾನಿಧಿ, - ಇಂತಿರುವಲ್ಲಿ ವಾಸವದತ್ತಾ ದೇವಿಯು ಬರುವಲ್ಲಿ ಆ ಕಾಂತೆಯ ಕರಮಂ ಪಿಡಿದಿರ ಬಹುದೇ ಹೇಳು, ಹಿಂದುಮುಂದಂ ತಿಳಿಯದೆ ಮಂದಮತಿಯಂತೆ ನೀನು ಆಡಿದ ವಾಕ್ಯವು ಭಯವಂ ಪೊಂದಿಸದೆ ಇರದು ?” ಎಂದು ನುಡಿಯುತ್ತಿರಲು; - ಅತ್ತ ಸಾಗರಿಕೆಯು ಮನದಲ್ಲಿ ಕಳವಳವಂ ತಾಳಿ, 1 ಕೆಟ್ಟದೈವವು ಕೈಗೆ ದೊರ ಕಿದ ಕಾಮಿತಾರ್ಥವಂ ಕಾಡುಮಾಡಿ, ಕಾಮನ ಬಾಣಕ್ಕೆನ್ನ೦ ಗುರಿಗೆಯು ದು! ಆ ಮಹಾರಾಜನು ಕೆಯ್ಯಂ ಪಿಡಿದೆಳೆದಲ್ಲಿ ಇಂಬಾಗಿ ಮೆಯ್ಯನ್ನಿಯದೆ ದುಷ್ಟ ಲಜ್ಜೆ ಯಿಂದ ಬಿಗಿಗೆಯು ಮನೋರಥಕ್ಕೆ ಭಂಗವ೦ ಸಂಪಾದಿಸಿದೆನು. ಲೋಕದಲ್ಲಿ ಕುರಿ ಸಿಯರುಗಳಿಗೆ ಲಜ್ಜೆ ಯೇ ಸಕಲವಾದ ಮನದ ಬಯಕೆಯಂ ಕೆಡಿಸುತ್ತಿರುವುದು. ವಾಸವದತ್ತಾ ದೇವಿಯು ಬಂದಳೆಂಬ ಭಯಂಕರವಾಕ್ಯವಂ ಕೇಳಿದ ಮಾತ್ರದಿಂದಲೇ ತೆರಳಿ ಬಂದುದು ಸರೊತ್ತಮಕಾರವಾದುದು. ಇದಲ್ಲದೆ ಅಲ್ಲಿ ನಿಂತಲ್ಲಿ ಪ್ರಾಣಾಂತಕ ನಾದ ಪ್ರಮದಕಾರವೇ ಕೈಸೇರುತ್ತಿದ್ದಿತು, ಕಂದರ್ಸಸುಂದರನಾದ ವಸುಂಧರಾಧಿ ಪತಿಯ ಅಂದನಂ ನೋಡಿ ಮಾತಾಡಿ ಕೈಗೂಡಿ ಜಾರಿ ಬಂದ ಮಂದಭಾಗ್ಯಳಾದ ನಾನು ಮುಂದಕ್ಕೆ ಅಡಿಯಿಟ್ಟ ಪೋಗುವೆನೆ೦ದರೆ, ತೊಡೆಗಳು ನಡುಗುತಿರ್ವವ ಎನಗೆ ಪ್ರಾಣಾಪ್ತಳಾದ ಈ ಸುಸಂಗತೆಯೇ ಮುಂದಾದರೂ ಎನಗೊಂದು ಗತಿಯಂ ಕಲ್ಪಿಸಬೇಕಲ್ಲದೆ ಮತ್ತೊಬ್ಬಳ ಕಾಣೆನು ?” ಎಂದು ತನ್ನ ಮನದಲ್ಲಿ ಆಲೋಚಿಸಿ, ಅವಳ ಕುರಿತು ಎಲೆ ಪ್ರಾಣಪ್ರಿಯಳೇ, ದೈವದೂರಳಾದ ಎನಗೆ ಸಂಪತ್ತು ದೊರ ಕುವುದು ದುರ್ಲಭವಾಗಿರುವುದು ಲೋಕದಲ್ಲಿ ದೈವಸಹಾಯವಿಲ್ಲದ ಮನುಜರಿಗೆ ಹಗ್ಗ ಹಾವಾಗಿ, ಅಮೃತ ವಿಷವಾಗಿ, ಹೊನ್ನು ಮಣ್ಣಾಗಿ, ಎಲ್ಲಿಯೂ ಇಲ್ಲದ ವಿ ಪತ್ತುಗಳು ತಲೆದೋರುವುವೆಂಬುದು ನ್ಯಾಯವಾಗಿರುವುದು, ಇನ್ನು ಹೆಚ್ಚು ಮಾತುಗಳಾಡಿ ಫಲವಿಲ್ಲ ” ಎಂದು ಮುತ್ತುಗಳಂತೆ ಮುದ್ದಾದ ಕಣ್ಣೀರುಗಳಂ ಸುರಿ ಸುತ್ತಿರಲು ; ಸುಸಂಗತೆಯು ವರ್ಷಾಕಾಲದ ನದಿಯಂತೆ ಉಕ್ಕಿಬರುವ ಕಣ್ಣೀರು ಗಳುಳ್ಳಂಥ ಆ ಸಾಗರಿಕೆಯ ದುಃಖವಂ ತಿಳಿದು- ಎಲೆ ಕಂಬುಕಂಠಿಯೇ, ಕಳ ವಳವಂ ಪೊಂದಬೇಡ, ದೇವಿಯ ಭಯ ಮೊದಲಾದ ಒಂದು ಕಾಠ್ಯಕ್ಕೂ ಹಿಂದೆಗೆ ಯದೆ ಏನುಬಂದರೂ ಬರಲೆಂದು ನಿನಗೆ ಆನಂದವಂ ಪೊಂದಿಸುವುದರಲ್ಲಿ ಸಂದೇ ಹವೇ ಇಲ್ಲ ?” ಎಂದು ತನ್ನ ಸೀರೆಯ ಸೆರಗಿನಿಂದ ಕಮಲದಳಗಳಂತೆ ಕಾಂತಿಗೀಡಾ ಗಿರುವ ಅವಳ ಕಂಗಳಿಂ ಪೊರಮಡುವ ಜಲಬಿಂದುಗಳನ್ನು ಒರಸಿ, ಕುರುಳುಗಳನ್ನು ಬೆರಳುಗಳ ಕೊನೆಗಳಿಂದ ತಿದ್ದಿ, ವ್ಯಸನವಂ ಸಮಾಧಾನವಂ ಗೆಯ್ದು , ಶಕುಂತಶಾ ಲೆಗೆ ಕರೆದುಕೊಂಡು ಪೋಗಲು ; ಇತ್ತಲು, ವಾಸದತ್ತಾದೇವಿಯು ರಾಯನು ಅಕಾಲದೋಹಳವಿದ್ಯೆಯನ್ನು ರಾಮಾನಂದನೆಂಬ ಸಿದ್ದಪುರುಷನಿಂದ ಕಲಿತು ಉಪವನವಂ ಪ್ರವೇಶಿಸಿದನೆಂದು ಕಾಂಚನಮಾಲೆಯ ಮುಖವಚನದಿಂ ಕೇಳಿ, ಅವಳಿಂದೊಡಗೂಡಿ ಉಪವನವಂ