ಪುಟ:ವತ್ಸರಾಜನ ಕಥೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ನಕ್ಷರಾಜನ ಕಥೆ.. - ೧೧೧ .ವಾದ ಆಶ್ಚರವು ತೋರುತ್ತಿರುವುದು ” ಎಂದು ನುಡಿದು, ಮನ್ಮಥನಂ ಕುರಿತು, < ಎಲೈ ಪುಷ್ಪಬಾಣನೇ, ಕೇಳು, ನಿನಗೆ ಐದು ಬಾಣಗಳಿರುವುವ, ಆ ಬಾಣಗಳಿಗೆ ಪಾತ್ರರಾಗಿ ಜನರುಗಳು ಅನೇಕವಾಗಿ ಇರುವರು. ಇದರಲ್ಲಿ ನಿನ್ನ ಬಾಣಗಳಿಗೆ ಎನ್ನ೦ಥ ಕಾಮಿಗಳೇ ಗುರಿಯಾಗಿರುವರು. ಹೀಗಿದ್ದರೂ ಲೆಕ್ಕಕೆ ನಿಲ್ಲದೆ ಕಾಮಿನೀ ಜನಗಳಂ ಭೇದಿಸಿ ಪಂಚತ್ವವನ್ನು ಪೊಂದಿಸುತ್ತಿರುವೆಯಾದುದರಿಂದ ನಿನ್ನ ಈ ಕಾರವು ನಿನ್ನಲ್ಲಿ ಅತ್ಯಾಶ್ಚರವಾಗಿ ಕಾಣುವುದು. ಆದರೂ ಈ ರೀತಿಯಾದ ಮನ್ಮಥಾವಸ್ಥೆ ಯನ್ನು ಹೊಂದಿರುವ ಎನ್ನ ದೇಹವನ್ನು ಕುರಿತು ವ್ಯಸನವನ್ನು ಹೊಂದಲಾರೆನು. ಯಾ ರೊಡನೆಯೂ ಹೇಳುವುದಕ್ಕೆ ಆಗದೆ ಇರುವ ಸಂತಾಪವನ್ನು ಅನುಭವಿಸುತ್ತ ದೀನ ಳಾಗಿ ದೇವಿಯ ನಿರ್ಬಂಧಕೆ ಸಿಕ್ಕಿರುವ ಎನ್ನ ಕಾಂತೆಯನ್ನು ಸ್ಮರಿಸಿ ತಲ್ಲಣಿಸುತ್ತಿರು ವೆನು, ಆದರೆ ಆ ಚಂಚಲಾಕ್ಷಿಯು-ಯಾರು ತನ್ನ ಮುಖವನ್ನು ನೋಡಿ ವಿರಹಾ ತುರೆಯಾಗಿರುವಳೆಂದು ತಿಳಿಯುವರೋ, ಎಂದು ಸಖಿಯರ ಎದುರಾಗಿ ಮುಖವನ್ನು ತಗ್ಗಿ ಸುತ್ತಿರುವಳು ; ಇಬ್ಬರು ನಿಂತು ಯಾವುದಾದರೂ ಒಂದು ಮಾತನಾಡುತಿದ್ದಲ್ಲಿ ಎನ್ನ ಪ್ರಸಕ್ತಿಯನ್ನೇ ಹೇಳುತ್ತಿರುವರೆಂದು ಊಹಿಸುತ್ತಿರುವಳು ; ತನಗೆ ಪ್ರಾಣ ಕಾಂತೆಯರುಗಳಾದ ಸಖಿಯರುಗಳಲ್ಲಿ ತನ್ನ ಅಭಿಪ್ರಾಯವನ್ನು ಅಧಿಕವಾಗಿ ಸೂಚಿ ಸದೆ ಹೃದಯದಲ್ಲಿ ಇರಿಸಲ್ಪಟ್ಟ ಆತಂಕಗಳಿ೦ದ ಎಡೆಬಿಡದ ಗುಃಖವುಳ್ಳವಳಾಗಿರುವ ೮೦ದು ಊಹಿಸುತ್ತಿರುವೆನು. ಅವಳ ವೃತ್ತಾಂತವನ್ನು ತಿಳಿದುಕೊಂಡು ಬರುವಂತೆ ಕಳುಹಿಸಿದ ವಿದೂಷಕನು ಏನು ಕಾರಣದಿಂದಲೋ ಇನ್ನೂ ಎನ್ನ೦ ಸೇರದೆ ತಡವಂ ಗೆಯ್ಯುತ್ತಿರುವನು ” ಎಂದು ನುಡಿಯುತ್ತಿರಲು ; ಅಷ್ಟರಲ್ಲೇ ವಿದೂಷಕನು ಆ ಸ್ಥಳಕ್ಕೆ ಬರುತ್ತೆ ಅಧಿಕವಾದ ಸಂತೋಷವಂ ತಾಳಿ, “ ನಮ್ಮ ರಾಯನಿಗೆ ಕೌಶಾಂಬೀ' ಪಟ್ಟಣದ ರಾಜ್ಯ ಲಾಭವು ಕೈ ಸೇರಿದ್ದಾಗಲೂ ಇಂಥ ಸಂತೋಷವು ದೊರೆಯಲಿಲ್ಲ. ಅದಕ್ಕಿಂತಲೂ ಈಗ ನಾನು ಹೇಳುವ ವಚ ನವೇ ನಮ್ಮ ರಾಯನನ್ನು ಆನಂದಸಮುದ್ರದಲ್ಲಿ ಮುಳುಗಿಸುತ್ತಿರುವುದು ” ಎಂದು ನುಡಿದು, ಪುರೋಭಾಗದಲ್ಲಿ ಕೊರಗುತ್ತಲಿರುವ ರಾಯನಂ ಕಂಡು, ( ಈ ನಮ್ಮ ಸ್ವಾಮಿಯು ಆ ಸಾಗರಿಕೆಯನ್ನೇ ಹೃದಯದಲ್ಲಿ ಸ್ಮರಿಸುತ್ತ ಎನ್ನ ಆಗಮನವನ್ನೇ ಅಧಿಕವಾದ ಅಭಿಲಾಷೆಯಿಂದ ಎದುರು ನೋಡುತ್ತಿರುವನು ” ಎಂದು ಜಾಗ್ರತೆ ಯಿಂದ ಸವಿಾಪವಂ ಸೇರಿ, ( ಎಲೈ ರಾಜೋತ್ತಮನೇ, ನೀನು ದೈವಯೋಗದಿಂದ ಪ್ರಾಪ್ತವಾದ ಇಷ್ಟಾರ್ಥವನ್ನು ಕೊಡುತ್ತಲಿರುವ ಕಾಠ್ಯಸಿದ್ಧಿಯಿಂದ ವೃದ್ಧಿಯಂ ಪೊಂದುತ್ತಲಿರುವೆ ” ಎಂದು ನುಡಿಯಲು ; ರಾಯನು-ಎಲೈ ಮಿತ್ರನೇ, ಇದ್ದ ಕಾ ಕ್ಯಗಳು ಹಾಗಿರಲಿ, ಎನಗೆ ಪ್ರಾಣಪ್ರಿಯಳಾದ ಕಾಂತೆಯ ಕೇಮದಲ್ಲಿರುವಳೆ ಪೇಳು ? ” ಎನಲು ; “ ನಿನ್ನ ಪ್ರಾಣಕಾಂತೆಯನ್ನು ಕ್ಷೇಮದಲ್ಲಿರುವುದನ್ನು ಶೀಘ್ರ ವಾಗಿ ನೀನೇ ನೋಡುತ್ತಿರುವಲ್ಲಿ ನಾನು ಪೇಳತಕ್ಕುದೇನಿರುವುದು ? " ಎನಲು ;