ಪುಟ:ವತ್ಸರಾಜನ ಕಥೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, -- ೧೧ ತಿರುವ ಎನಗೆ ನೂತನಳಾದ ಆ ಸಾಗರಿಕೆಂುಲ್ಲಿ ಬಲವಾದ ಪಕ್ಷಪಾತವುಂಟಾಗಿರು ವುದು, ಈಗ ಆ ಸಾಗರಿಕೆಯು ಇಲ್ಲಿಗೆ ಬಂದವಳಾದರೂ ಸ್ನೇಹದಿಂ ನೆನೆದಿರುವ ದೃಷ್ಟಿಯನ್ನು ಭಯದಿಂದ ಎನ್ನಲ್ಲಿ ಇರಿಸಳು. ನಾನು ಕ೦ಠಾಲಿಂಗನವಂ ಗೆಯ್ದ ರೂ ಹಿಂದೆಗೆಯದೆ ಇರಳು, ಅತ್ಯಂತ ಪ್ರಯತ್ನ ದಿಂದ ಸಿಡಿಯಲ್ಪಟ್ಟವಳಾದರೂ ಇಲ್ಲಿರ ಲೊಲ್ಲೆನು, ಪೋಗುವೆನು ಎಂಬ ಮಾತುಗಳನ್ನೇ ಹೇಳುತ್ತಿರುವಳು. ಈ ರೀತಿಯಲ್ಲಿ ದ್ದ ರೂ ಬಹು ಯುಕ್ತಿಗಳಂ ಗೆಯ್ದು ಆ ಸ್ತ್ರೀಯಂ ವಶಮಾಡಿಕೊಳ್ಳದೆ ಬಿಡೆನು” ಎಂದು ನಾನಾಪ್ರಕಾರಗಳಿಂದ ಯೋಚನೆಯ೦ ಗೆಯ್ಯುತ್ತ, ಮಂದಮಾರುತದಿಂದ ಸ್ವಲ್ಪವಾಗಿ ತರಗೆಲೆಯು ಸದ್ದು ದೂರಿದರೂ ತಾನಿದ್ದ ಸ್ಥಾನವಂ ಬಿಟ್ಟು ಸಾಗರಿಕೆ ಯು ಬಂದಳೆಂದು ಎದ್ದು ಬರುತ್ಯ, ಉದ್ದವಾಗಿ ಉಸಿರುಗಳಂ ಬಿಡುತ್ತ, ಒಂದು ಕ್ಷಣ ವನ್ನು ಒಂದು ಯುಗವಾಗಿ ಕಳೆಯುತ್ತಿರಲು ; ತಲು, ಕಾಂಚನಮಾಲೆಯು ವಾಸವದತ್ತಾ ದೇವಿಯ ಸವಿಾಪವಂ ಸೇರಿ, ಸುಸಂಗತೆಯ ವಿದೂಷಕನೂ ಮಾಡಿರುವ ಭೇದೋಪಾಯದ ಸಂಗತಿಯನು ದೇವಿಗೆ ವಿಸ್ತಾರವಾಗಿ ವಿಜ್ಞಾಪನೆಯಂ ಗೆಯ್ಯಲು ; ದೇವಿಯು ಕೋಪದಿಂದಲೂ ಆಶ್ಚರದಿಂದಲೂ ಯುಕ್ತಳಾಗಿ-• ಎಲೆ ಕಾಂಚನಮಾಲೆಯೇ, ವಂಚಕರಾದ ಜನ್ನ ರುಗಳ ಹೃದಯವನ್ನು ತಿಳಿಯುವುದು ಅಧಿಕ ಪ್ರಯಾಸವಾಗಿ ತೋರುವುದು. ಆದರೂ ಆ ಸುಸಂಗತೆ ವಿದೂಷಕರು ಮಾಡಿರುವ ಭೇದೋಪಾಯವನ್ನು ಮುರಿಯು ವುದಕ್ಕೆ ಏನು ಯುಕ್ತಿಯಂ ಯೋಚಿಸಿರುವ ಪೇಳು ? ?” ಎನಲು ; ಅವಳು-ಎಲೆ ತಾಯೇ, ಇನ್ನಾವ ಯುಕ್ತಿಯು ತೋರಲಾರದು, ಸಂಧ್ಯಾಕಾಲಕ್ಕೆ ಸರಿಯಾಗಿ ಚಿತ್ರಶಾಲೆಯ ಸವಿಾಪಕ್ಕೆ ನಿಮ್ಮ ವೇಷವ ಧರಿಸಿ ಸಾಗರಿಕೆಯಂ ಕರೆದುಕೊಂಡು ಬರುವೆನೆಂದು ಸುಸಂಗತೆಯು ಹೇಳಿರುವಳಷ್ಟೆ, ನಾವಿಬ್ಬರೂ ಅವಳು ಬರುವುದಕೆ ಮುಂಚಿತವಾಗಿಯೇ ಪೋಗಿದ್ದಲ್ಲಿ ವಿದೂಷಕನು ಕತ್ತಲೆಯಲ್ಲಿ ನಮ್ಮನ್ನು ನಾಗರಿಕೆ ಯೆಂದು ತಿಳಿದು, ರಾಯನ ಸಮಿಾಪಕೆ ಕರೆದುಕೊಂಡು ಪೋಗುವನು ಎಂದು ನುಡಿಯಲು ; ದೇವಿಯು ಅವಳು ಹೇಳಿದ ವಾಕ್ಯಕೆ ಸಂತೋಷವಂ ಪೊಂದಿ, (( ಎಲೆ ಕಾಂತೆಯೇ, ಚೆನ್ನಾಗಿ ಯೋಚಿಸಿರುವೆ ? ೨” ಎಂದು ಅವಳಿಂದೊಡಗೂಡಿ ಬರುತ್ತ, 1 ಎಲೆ ಕಾಂಚನಮಾಲೆಯೇ, ಸಾಗರಿಕೆಯು ಎನ್ನ ವೇಷವಂ ಧರಿಸಿ ಪೂ ಜ್ಯನಾದ ನಮ್ಮ ರಾಜೇಂದ್ರನಂ ಪೊಂದುವಳೆಂದು ನೀನು ಹೇಳಿದ ವಾಕ್ಯವು ಸತ್ಯ ವೆ? ?” ಎಂದು ನುಡಿಯಲು ; ಅವಳು- ಎಲೌ ದೇವಿಯೇ, ಆ ಸತ್ಯವಿಲ್ಲದ ವಾಕ್ಯ ವನ್ನು ಭೀತಿಯಿಲ್ಲದೆ ನಿಮ್ಮ ಸನ್ನಿಧಿಯಲ್ಲಿ ವಿಜ್ಞಾಪಿಸುವುದಕ್ಕೆ ನಾನು ಸಮರ್ಥಳಾಗು ವೆನೆ ? ಹಾಗಲ್ಲದಿದ್ದರೆ ಈಗ ಚಿತ್ರಶಾಲೆಯಲ್ಲಿ ಬಾಗಲಲ್ಲಿ ಎನ್ನ ವಾಕ್ಯವು ಅಪದ್ಧ ಯಥಾಕ್ಖವೆಂಬುದನ್ನು ವಿದೂಷಕನೇ ನಿಮಗೆ ನಿಶ್ಚಯಿಸಿಕೊಡುವನು ?” ಎಂದು ಬಿಸಲು ; ದೇವಿಯು-LI ಎಲೆ ಬಾಲೆಯೇ, ಸುಸಂಗತೆಯು ಬಾಲ್ಯದಿಂದಲೂ