ಪುಟ:ವತ್ಸರಾಜನ ಕಥೆ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov - ಕರ್ಣಾಟಕ ಕಾವ್ಯಕಲಾನಿಧಿ, - ಮನದ ಸಂತಾಪವಂ ಬಿಡು, ಸಾಗರಿಕೆಯು ಸುಸಂಗತೆಯಿಂದೊಡಗೂಡಿ ಬಂದಳು.” ಎಂದು ಬಿನ್ನಿಸಲು ; ರಾಯನು ಭಾಗ್ಯ ಬಂದ ಬಡವನಂತೆ, ಕಣ್ಣುಗಳು ಬಂದ ಕುರು ಡನಂತೆ, ಚ೦ದ್ರನಂ ಕಂಡ ಚಕೋರದಂತೆ, ಅಧಿಕ ಸಂತೋಷದಿಂ ಯುಕ್ತನಾಗಿ, ( ಎಲ್ಲಿ ಎಲ್ಲಿ ? ೨” ಎಂದು ಉಲ್ಲಾಸದಿಂದ ಮಾಧವೀಮಂಟಪವಂ ಬಿಟ್ಟು, ಮುಂದ ಕೈ ಸಾರಲು, ವಿದೂಷಕನು- ಇವಳೇ ಸಾಗರಿಕೆ ” ಯೆಂದು ವಾಸವದತ್ತೆಯಂ ತೋರಲು ; ರಾಯನು ಆ ವಾಸವದತ್ತೆಯ ಹಸ್ತವಂ ಪಿಡಿದು, ಅವಳ ಮುಖವನ್ನು ಎತ್ತಿ, ( ಎಲೆ ಕಾಂತೆಯೇ, ನಿನ್ನ ಮುಖವೇ ಚಂದ್ರಬಿಂಬವು, ನೇತ್ರಗಳೇ ಕನ್ನೈದಿ ಲೆಗಳು, ಹಸ್ತಗಳೇ ಪ್ರಶಸ್ತಗಳಾದ ಕಮಲಗಳು, ತೋಳುಗಳೇ ತಾವರೆಯ ದಂಟು ಗಳು, ನುಣೋಡೆಗಳೇ ಬಾಳೆಯ ಕಂಭಗಳು. ಈರೀತಿಯಿಂದ ಸಮಸ್ತ ತಾಪವಂ ಬರಿಗೆಯ್ಯುತ್ತಿರುವ ಅಂಗಗಳಿಂದ ಯುಕ್ತಳಾದ ಮಂಗಳಾಂಗಿಯಾದ ನೀನು ಎನ್ನ ನ್ನು ಚೆನ್ನಾಗಿ ಆಲಿಂಗನವಂ ಗೆಯ್ದು, ಕ್ರೂರನಾದ ಮಾರನ ಬಾಣಗಳಿಂದ ತಾರಾಗಿ ರುವ ಎನ್ನ ದೇಹಕೆ ಅಧಿಕ ತಂಪನ್ನು ಉಂಟುಮಾಡುವಳಾಗು ” ಎಂದು ನುಡಿ ಯಲು ; ದೇವಿಯು ಹಿಂದಿರುಗಿ- ಎಲೆ ಕಾಂಚನಮಾಲೆಯೇ, ರಾಯನಾಡುವ ಈ ವಾಕ್ಯವನ್ನು ನಾನು ಕೇಳಬಹುದೇ ? ಎನ್ನೊಡನೆ ನಾಗರಿಕೆಯ ಪೆಸರಂ ಪೇಳಿ ಇಂಥ ವಾಕ್ಯವಂ ನುಡಿಯಬಹುದೇ ? ?” ಎಂದು ಕಿವಿಯಲ್ಲಿ ಪೇಳಲು ; ಅವಳು(ಎಲೌ ತಾಯೇ, ಸಾಹಸಕಾರ್ಯವನ್ನು ಮಾಡುವುದಕ್ಕೆ ಯತ್ನ ವಂ ಪೊಂದಿರುವ ರಾಯನು ಏನ ಹೇಳಿದರೂ ಕೇಳಬಹುದು ?” ಎಂದು ನುಡಿಯಲು ; ವಿದೂಷಕನು ಆ ವಾಸವದತ್ತೆಯ ಕುರಿತು ಎಲೆ ಸಾಗರಿಕೆಯೇ, ನಿತ್ಯದಲ್ಲಿ ನಿಷ್ಣು ರಳಾದ ವಾಸವದತ್ತಿಯ ಕ್ರೂರವಾಕ್ಯಗಳೆ೦ಬ ತಸ್ಯನಾರಾಟಗಳಿಂದ ಬೆಂದಿರುವ ಕಿವಿಗ ಳುಳ್ಳ ನಮ್ಮ ರಾಯನಂ ಕುರಿತು ಸವಿಯಾಗಿ ಸೊಗಸಿನ ಸೋನೆಯಂ ಕರೆಯುತ್ತಿರುವ ಸರಸೋಕ್ತಿಗಳನ್ನಾಡಿ ಸಂತೋಷವಂ ಪುಟ್ಟಿಸಿ, ಬಟ್ಟ ಕುಚಗಳ ಸೋಂಕಿನಿಂದ ಮನ ವಂ ಕರಗಿಸದೆ ಮರದಂತೆ ಏತಕ್ಕೆ ಸುಮ್ಮನೆ ನಿಂದಿರುವೆ ? ” ಎಂದು ನುಡಿಯಲು; ದೇವಿಯು ಅಗ್ನಿಗೆ ಆಜ್ಞಾಹುತಿಯಂ ಗೆಯ್ದಂತೆ ಇಮ್ಮಡಿಯಾಗಿ ಕೋಪವಂ ತಾಳಿ, ಹಲ್ಲುಗಳನ್ನು ಕಡಿಯುತ್ತ ಇಂಥ ದುರ್ಭಾಷೆಗಳನ್ನೇ ಆಡುತ್ತಿರುವದರಿಂದಲೇ ನಮ್ಮ ರಾಯನಿಗೆ ಇವನು ಹಿತಕರವಾಗಿರುವನು. ಇನ್ನು ನಾನು ಇವನ ದುಷ್ಟ ವಾಕ್ಯವಂ ಹೇಳಲಾರೆನು ?” ಎಂದು ಏಕಾಂತವಾಗಿ ಹೇಳಲು; ಕಾಂಚನಮಾಲೆ ಯು- ಎಲ್‌ ತಾಯೇ, ಈಗಲೇ ನೀನು ವ್ಯಕ್ತವಾಗಿ ಕೋಪವಂ ಪ್ರಕಾಶಂಗೆ ಯ್ಯ ಬೇಡ. ಇನ್ನು ವಿದೂಷಕನೂ ರಾಯನೂ ಸಹ ಇನ್ನು ಏನೇನು ವಾಕ್ಯಗಳ ನಾಡಿ ಇನ್ನು ಏನೇನು ಕಾರಗಳಂ ಮಾಡುವರೋ 'ತಿಳಿಯುವಳಾಗು, ಕಾರವಂ ಸಾಧಿಸುವವರಿಗೆ ಕೋಪವ ಪ್ರಯೋಜನಕೆ ಬರಲಾರದು ?” ಎಂದು ಏಕಾಂತವಾಗಿ ನುಡಿಯಲು : ವಿದೂಷಕನು ಪೂರ್ವದಿಕ್ಕನ್ನು ನೋಡಿ- ಎಲೈ ರಾಯನೇ, ವಿನ