ಪುಟ:ವತ್ಸರಾಜನ ಕಥೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕರ್ಣಾಟಕ ಕಾವ್ಯಕಲಾನಿಧಿ, - ಈ ಮಂತ್ರಿಯಲ್ಲಿ ಸದ್ದು ಣಗಳೇ ಸಂಪೂರ್ಣವಾಗಿರುವುದೆಂದು ತನ್ನ ಮನದಲ್ಲಿ ಆಲೋಚಿಸಿ, ಮಂತ್ರಿಯಂ ಕುರಿತು ಎಲೈ, ರಾಜಪೂಜ್ಯನಾದ ಮಂತ್ರಿ ಶೆ ಈನೇ, ಕೇಳು, ನಾನು ಸಮುದ್ರಮಧ್ಯದಲ್ಲಿ ವಿರಾಜಿಸುವ ಸಿಂಹಳದೇಶಾಧಿಪತಿ ಯಾದ ವಿಕ್ರಮಬಾಹುರಾಯನ ಪುರೋಹಿತನು, ಎನ್ನನ್ನು ದೇವಶರ್ಮನೆಂದು ಜನಗಳು ಕರೆಯುತ್ತಿರುವರು. ನಾನು ಸಕಲದೇಶಗಳಲ್ಲಿರುವ ಪುಣ್ಯಕ್ಷೇತ್ರಗಳ ಯಾತ್ರೆಯಂ ಗೆಯ್ಯುತ್ತ ಬರುವಲ್ಲಿ, ನಿಮ್ಮ ಕಾಯನ ಸದ್ಗುಣಗಳನ್ನೂ, ಸಮಸ್ತ ವಾದ ಸಾಮದಾನಭೇದದಂಡಗಳೆಂಬ ಉಪಾಯ೦ಗಳಲ್ಲಿಯೂ ಮಾಯೆಯ ಉಪೇಕ್ಷೆ ಇಂದ್ರಜಾಲಂಗಳೆ೦ಬ ಕಿರಿದಾದ ಉಪಾಯಂಗಳಲ್ಲಿಯೂ ರಾಜನೀತಿಗಳಲ್ಲಿಯೂ ಬಲ್ಲಿದನಾಗಿ ಸುರಗುರುವಿನಂತೆ ಪರಿಶೋಭಿಸುತ್ತಿರುವ ನಿನ್ನ ಪ್ರಖ್ಯಾತಿಯನ್ನೂ ಸಹ ಕೇಳಿ, ಈ ನಿಮ್ಮ ಇಬ್ಬರ ಸಂದರ್ಶನವಂ ಗೆಯ್ದು ಪೋಗಲಿಚ್ಚೆಯಿಂದ ಈ ಕೌಶಾಂಬೀಪಟ್ಟಣಕ್ಕೆ ಬಂದೆ ನೆಂದು ನುಡಿಯಲು ; ಮಂತ್ರಿಯು ಎಲೈ ದೇವಶರ್ಮನೆ ? ನಿಮ್ಮ ವಿನುಬಾಹುರಾಯನಿಗೆ ಪುತ್ರರುಗಳೂ ಪುತ್ರಿಯರು ಗಳೂ ಎಷ್ಟು ಜನವಿರುವರು ? ೨” ಎಂದು ಬೆಸಗೊಳಲು ; ಆ ಬ್ರಾಹ್ಮಣನು - ಎಲೈ ಮಂತ್ರಿಯೇ ! ಕೇಳು, ವಿಂದನೆಂತಲೂ ಆನುವಿಂದನೆಂತಲೂ ಇಬ್ಬರು ಪುತ ) ರುಗಳು ಬಲಿಷ್ಠರಾಗಿ ರಾಜ್ಯ ತಂತ್ರ ವನ್ನು ವಿಚಾರಿಸುತ್ತ, ತಂದೆಯ ಆಜ್ಞೆಯನ್ನು ಶಿರಸ್ಸಿನಲ್ಲಿ ವಹಿಸುತ್ತ, ಪ್ರಜಾಸಮ್ಮತರಾಗಿ ಇರುವರು. ಜನಕರಾಯನಿಗೆ ಸೀತಾದೇವಿ ಯಂತೆ, ವೃಷಪವ್ವ ರಾಯನಿಗೆ ಶರ್ಮಿಷ್ಟೆಯ೦ತೆ, ಶುಕ್ರಾಚಾತ್ಯರಿಗೆ ದೇವಯಾನೆ ಯ೦ತೆ, ದ್ರುಪದರಾಯನಿಗೆ ದೌಪದಿಯಂತೆ, ಹಿಮವಂತನಿಗೆ ಪಾಶ್ವತಿಯಂತೆ, ಕ್ಷೀರಸಮುದ್ರಕ್ಕೆ ಲಕ್ಷ್ಮಿಯಂತೆ, ಇಂದ್ರನಿಗೆ ದೇವಸೇನೆಯಂತೆ, ನಮ್ಮ ರಾಯನಿಗೆ ರತ್ನಾ ವಳಿಯೆಂಬ ಒಬ್ಬ ಕನ್ಯ ಜನಿಸಿರುವಳು, ಮತ್ತಂ ಆ ರತಾ ವಳಿಯ ರೂಪಿನಿಂದಲೂ ಸದ್ದು ಣಗಳಿಂದಲೂ ಸೃಷ್ಟಿ ಕರ್ತನಾದ ಬ್ರಹ್ಮನ ಬುದ್ದಿ ಕೌಶಲವಂ ಲೋಕಕ್ಕೆ ತೋರಿಸುತ್ತ, ಸಮಸ್ತ ವಿದ್ಯೆಗಳಲ್ಲಿಯೂ ಶಾರದೆಯಂ ಮೀರುತ್ತ, ಪುಷ್ಪ ದಲ್ಲಿ ಪಟ್ಟದ ಮಕರಂದದಂತೆ, ಮುತ್ತಿನಲ್ಲಿ ಪುಟ್ಟಗ ಕೆನ್ನೀರಿನಂತೆ, ದಿನಕೊಂದು ಬಗೆಯಾಗಿ ಏರೇರಿ ಬರುವ ಯವನದಿಂದ ಭೂಷಿತಳಾಗಿರುವಳು ಎಲ್ವೆ ಮಂತ್ರಿ ಶೆ ೨ಷನೆ, ಕೇಳು, ಗಾಲವನೆಂಬ ಮಹಾಮುನಿಯು ಈ ರತ್ತಾ ವಳಿಯಂ ನೋಡಿ- ಈ ಪುತಿ ಯನ್ನು ಯಾವ ರಾಜಪುತ್ರನು ಪಾಣಿಗ್ರಹಣವಂ ಗೆಯ್ಯುತ್ತಲಿ ರುವನೋ ಅವನು ಶಾಶ್ವತವಾಗಿ ಭೂಮಂಡಲಾಧಿಪತ್ಯವಂ ಗೆಯ್ಯುವನೆಂದು ಅಪ್ಪಣೆಯನಿತ್ತಿರುವನು. ಮುಖ್ಯವಾದ ವಾಕ್ಯವನ್ನು ಪೇಳುವೆನು, ಕೇಳು, ಆ ರತ್ನಾ ವಳಿಯ ರೂಪವನ್ನು, ಸದ್ದು ಣಂಗಳನ್ನು, ವಿದ್ಯಾ ಕೌಶಲವನ್ನು, ಹಾವಭಾವ ಮೊದ ಲಾದ ವಿಲಾಸಗಳನ್ನು ಸಹ ವಿಸ್ತಾರವಾಗಿ ವಿವರಿಸುವುದಕ್ಕೆ ಎನ್ನ ಮುಖದಲ್ಲಿ ಎರಡು ಸಾಸಿರ ನಾಲಗೆಯಿಲ್ಲದೆ ಒಂದೇ ನಾಲಗೆ ಇರುವುದರಿಂದ ಸಮಗ್ನನಾಗ