ಪುಟ:ವತ್ಸರಾಜನ ಕಥೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವರರಾಜನ ಕಥೆ, - ܪܩܘ ಸಿಯರಿಂದ ಸೇವೆಯಂ ತೆಗೆದುಕೊಳ್ಳುತ್ತ ತಾನು ಮಾಡುತ್ತಿದ್ದ ಪುಷ್ಪಾಪಚಯ ಕ್ರೀಡೆ ಮೊದಲಾದ ಲೀಲೆಗಳನ್ನೂ ತನಗೆ ಹಿತಕರವಾದ ತಾಯಿತಂದೆಗಳನ್ನೂ ಈಗ ತನಗೆ ಬಂದಿರುವ ವಿಪತ್ತನ್ನೂ ಸಹ ಸ್ಮರಿಸಿಕೊಂಡು, ಈ ಎಲೈ ತಂದೆಯೇ, ವತ್ಸ ಶಾಜ ನ ರೂಪಿಗೂ ಐಶ್ವರಕ್ಕೂ ಮರುಳಾಗಿ ಆ ವಾಸವದತ್ತೆಯೆಂಬ ಮೃತ್ಯುವಿನ ಬಾಯಿಗೆ ಎನ್ನ ನ್ನು ತುತ್ತು ಮಾಡಬಹುದೇ ! ಎಲೆ ತಾಯೇ, ನನ್ನ ಮರಣದ ವಾರ್ತೆಯನ್ನು ಕೇಳಿ ಹೇಗೆ ಪ್ರಾಣಗಳನ್ನು ಧರಿಸುವುದಕ್ಕೆ ಸಮರ್ಥಳಾಗುವೆ ! ಎಲೆ ಕಲವಾಣಿ ಮೊದಲಾದ ಕಾಂತೆಯರುಗಳಿರಾ, ಎನ್ನ ವಿವಾಹ ಪ್ರಶಸ್ಯದಲ್ಲಿ ಬಹುವಾಗಿ ಬಹು ಮಾನವನ್ನು ಹೊಂದಬೇಕೆಂದು ಬಾಲ್ಯದಿಂದಲೂ ಬಲವಾಗಿ ಎನ್ನ ಸೇವೆಯ ಗೆಯ್ಯು ತಿದ್ದ ನಿಮ್ಮ ಮನೋರಥಗಳೆಲ್ಲ ವ್ಯರ್ಥವಾದುವೇ ! !” ಎಂದು ಸ್ವರವೆತ್ತಿ ರೋದ ನವಂ ಗೆಯ್ಯಲು ; ವಿದೂಷಕನು ಅವಳ ದೀನಸ್ವರವನ್ನು ಚೆನ್ನಾಗಿ ಕೇಳಿ, ಮುಂದಕೆ ಓಡಿಪೋಗಿ ವಾಸವದತ್ತೆಯ ವೇಷವಂ ಧರಿಸಿರುವ ನಾಗರಿಕೆಯಂ ಕಂಡು, ಅವಳ ಸವಿಾಪಕ್ಕೆ ಪೋಗುವುದಕ್ಕೆ ಭಯಮಂ ಪೊಂದಿ, ಹಿಂದಿರುಗಿ ಬಂದು, “ ಅಯ್ಯಾ ರಾಯನೇ, ವಾಸವದತ್ತೆಯು ಕತ್ತಿಗೆ ಪಾಶವಂ ಹಾಕಿಕೊಂಡು ಪ್ರಾಣಗಳಂ ಬಿಡುತ್ತಲಿರುವಳು. ಶೀಘ್ರದಿಂದ ಬಂದು ಸಂರಕ್ಷಿಸುವನಾಗು ” ಎಂದು ನುಡಿಯಲು ; ರಾಯನು ಬಹಳವಾಗಿ ದಿಗಲಂ ಪೊಂದಿ ಓಡಿಪೋಗಿ ( ಎಲ್ಲಿ ಎಲ್ಲಿ ” ಎಂದು ಕೇಳಲು ; ಅವನು, CC ಅಶೋಕವೃಕ್ಷದ ಸವಿಾಪದಲ್ಲಿ ” ಎಂದು ನಾಗರಿಕೆಯಂ ತೋರಿಸಲು ; ರಾಯನು ಸಾಗರಿಕೆಯಂ ಕೇಳಿ, ನೋಡಿ, ವಾಸವದತ್ತೆಯಂT. ತಿಳಿದು, ಪ್ರದಿಂದ ಸವಿಸವಂ ಸೇರಿ, ಕತ್ತಿಗೆ ಹಾಕಿದ್ದ ಲತಾ ಪಾಶವನ್ನು ತನ್ನ ಹಸ್ತದಿಂದ ಕಿತ್ತು, ( ಎಲೌ ದೇವಿಯೇ, ತಿಳಿಯದೆ ಇರುವ ಮೂಢಜನರು ಮಾಡು ವಂಥ ಕಾರವನ್ನು ನೀನು ಮಾಡುವುದು ನ್ಯಾಯವೇ ! ನಿನ್ನ ಕಂಠದಲ್ಲಿರುವ ಲತಾ ಪಾಶವ ನೋಡಿ ಎನ್ನ ಪ್ರಾಣಗಳು ಎನ್ನ ಕಂಠದಲ್ಲಿ ಬಂದುಸೇರಿದುವು. ಯಾವು ದೊ೦ದು ನಿಮಿತ್ತವೂ ಇಲ್ಲದೆ ಈ ರೀತಿಯಾದ ನಾಹಸವಂ ಮಾಡುವುದು ಎಷ್ಟು ಮಾತ್ರಕ್ಕೂ ನ್ಯಾಯವಲ್ಲ ” ಎಂದು ನುಡಿಯಲು ; ಸಾಗರಿಕೆಯು ರಾಯನಂ ಕಂಡು ಸಂತೋಷದಿಂದೊಡಗೂಡಿ, ( ಎನ್ನ ವಿಪತ್ತನ್ನು ಪರಿಹರಿಸುವುದಕ್ಕೆ ರಾಜೇಂದ್ರ ನಾದ ವತ್ಸ ರಾಜನೇ ಬಂದಿರುವನು. ಆದುದರಿಂದ ನಾನು ಕೃತಾಗ್ಧಳಾದೆನು. ಇನ್ನು ಮೇಲೆ ಎನ್ನ ಪ್ರಾಣಗಳನ್ನು ಬಿಡಲಾರೆನು ?” ಎಂದು ಯೋಚಿಸಿ, ರಾಯನಂ ಕುರಿ ತು- ಎಲೈ ಮಹಾರಾಜೇಂದ್ರನೇ, ಪರಾಧೀನಳಾಗಿ ಯಾವುದೊಂದು ಕಾರೈಕೆ ಯೋಗ್ಯಳಲ್ಲವಾದುರಿಂದ ಇಂಥ ಅವಸ್ಥೆಯು ಪ್ರಾಪ್ತವಾದುದು. ಇನ್ನು ಮೇಲೆ ಎನ್ನ ಹಂಬಲದಿಂದ ಪ್ರಯೋಜನವಿಲ್ಲ ?” ಎಂದು ರೋದನವಂ ಗೆಯ್ಯುತ್ಯ, ಮರಳಿ ತಾಜಾಶವನ್ನು ಕತ್ತಿಗೆ ಹಾಕಿಕೊಳುವ ಪ್ರಯತ್ನ ವಂ ಗೆಯ್ಯಲು ; ರಾಂದುನ್ನ