ಪುಟ:ವತ್ಸರಾಜನ ಕಥೆ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܣܩܘ - ಕರ್ಣಾಟಕ ಕಾವ್ಯಕಲಾನಿಧಿ, - ಚೆನ್ನಾಗಿ ನೋಡಿ ಎಲೈ ವಿದೂಷಕನೇ, ಎನ್ನ ಪ್ರಾಣಕಾಂತೆಯಾದ ನಾಗರಿಕ ಯೇ ಇವಳು ?” ಎಂದು ಕತ್ತಿಗೆ ಒತ್ತಿಹಾಕುವ ಪಾಶವಂ ಕಿತ್ತು ಎಲೈ ಪ್ರಾಣ ಕಾಂತೆಯೇ, ಈಗ ನೀನು ಮಾಡಿದ ಸಾಹಸಕಾರದಿಂದ ಸಾಕುಸಾಕು, ಈ ಲತಾ ಪಾಶವಂ ತೆಗೆದು ಸ್ವಸ್ಥಾನವಂ ಬಿಟ್ಟು ಪೋಗುತ್ತಿರುವ ಪ್ರಾಣಗಳುಳ್ಳ ಎನ್ನ ಕ೦ಠ ದಲ್ಲಿ ಭುಜಗಳ ಪಾಶವನ್ನು ಸೇರಿಸುವಳಾಗು ' ಎಂದು ಸಾಗರಿಕೆಯ ಕಂಠಾಲಿಂ ಗನವಂ ಗೆಯ್ದು , ಅವಳ ಸೋಂಕಿನಿಂದುಂಟಾದ ಸೌಖ್ಯವಂ ಪೊಂದಿ, ಎಲೈ ವಿದೂ ಷಕನೇ, ಮೋಡವು ಮೂಡದೆ ಇದ್ದರೂ ಅಮೃತಧಾರೆಯಿಂದೊಡಗೂಡಿದ ಮಳೆ ಯಾದುದು ” ಎಂದು ನುಡಿಯಲು ; ವಿದೂಷಕನು-II ಎಲೈ ಸ್ವಾಮಿಯೇ, ವಾಸ ವದತ್ತಾ ದೇವಿಯೆಂಬ ಅಕಾಲವಾಯುವು ಈಗ ನಿನಗೆ ಉಂಟಾಗಿರುವ ಅಮೃತದ ಮ ಳೆಯನ್ನು ಇನ್ನೊಂದು ಕಡೆ ತೆಗೆದುಕೊಂಡು ಪೋಗದೆ ಇದ್ದಲ್ಲಿ ನೀನು ಹೇಳಿದ ವಾ ಕ್ಯವು ಯಥಾರ್ಥವಾಗುವುದು ” ಎಂದು ನುಡಿಯುತ್ತಿರಲು ; ಅಷ್ಟರಲ್ಲೇ ವಾಸವದತ್ತಾ ದೇವಿಯು ಚಿತ್ರ ಶಾಲೆಯ ವರೆಗೂ ಹೋಗಿ, ತನ್ನ ಮನದಲ್ಲಿ ಪಶ್ಚಾತ್ತಾಪವು ತೋರಿ, ಕಾಂಚನಮಾಲೆಯಂ ಕುರಿತು-( ಎಲೆ ಬಾಲೆಯೇ, ಸ್ತ್ರೀಯರಿಗೆ ಪತಿಯೇ ಪರದೈವವಾಗಿರುವುದರಿಂದ ಈಗ ನಮ್ಮ ರಾಯನು ನಮಸ್ಕಾ ರವಂ ಗೆಯ್ದರೂ ಅದನ್ನು ಉಲ್ಲಂಘಿಸಿ ಬಂದುದು ಅತಿನಿಷ್ಟುರವಾದ ಕಾರವಾ ದುದು , ಆದುದರಿಂದ ಈಗ ಮರಳಿ ಆ ರಾಜೇ೦ದ್ರನ ಸವಿಾಪವಂ ಸೇರಿ, ಅವನ ಮನಕೆ ಅಧಿಕವಾದ ಸಂತೋಷವನ್ನುಂಟುಮಾಡುವ, ನಡೆ ಎನಲು ; ಕಾಂಚನ ಮಾಲೆಯು ಎಲ್‌ ದೇವಿಯೇ, ಇಂಥ ಉಚಿತವಾದ ಕಾರವನ್ನು ೦ಟುಮಾಡು ವುದರಲ್ಲಿ ನಿನ್ನ ಹೊರತು ಇನ್ನಾರು ಯೋಗ್ಯರಾಗುವರು ? ಆದುದರಿಂದ ಅಗತ್ಯವಾಗಿ ರಾಯನ ಸನ್ನಿ ಧಿಯಂ ಹೊಂದುವಳಾಗು ” ಎಂದು ನುಡಿದು, ಮುಂದುಗಡೆಯಲ್ಲಿ ಮಾರ್ಗವಂ ತೋರಿಸುತ್ತ ಬರಲು ; ಇತಲು ಪ್ರತ್ಯುತ್ತರವಂ ನುಡಿಯದೆ ಆಲಿಂಗನಕೆ ಚೆನ್ನಾಗಿ ಮೆಯ್ಯಯದೆ, ತೊಡೆಯ ಮೇಲೆ ಮನದಿಂ ಕುಳಿತಿರುವ ಸಾಗರಿಕೆಯಂ ಕುರಿತು ಎಲೆ ಮುಗೈ ಯೇ, ನಿನ್ನಲ್ಲೇ ಪ್ರಾಣಗಳನ್ನಿ ರಿಸಿರುವ ಎನ್ನ೦ ಏತಕ್ಕೆ ವ್ಯರ್ಥವಾದ ಮನೋರಥವು ಳ್ಳವನನ್ನ ಮಾಡುತ್ತಿರುವೆ ? ೨” ಎಂದು ನುಡಿದ ರಾಯನ ವಾಕ್ಯವು ಕೇಳಿದ ಕಾಂಚ ನಮಾಲೆಯು 11 ಎಲೌ ದೇವಿಯೇ, ಇದೋ ! ಈ ಸ್ಥಳದಲ್ಲಿ ನಮ್ಮ ರಾಜೇಂದ್ರನು ಸಲ್ಲಾಪವಂ ಗೆಯ್ಯುವನಂತೆ ತೋರುವುದು, ನಿನ್ನ ಚಿತ್ತವೃತ್ತಿಯನ್ನು ಸಂತೋಷ ಪಡಿಸಲೋಸುಗ ಇದಿರುಗೊಂಡು ಬರುವನೆಂದು ಊಹಿಸುತ್ತಲಿರುವೆನು ?” ಎಂದು ನುಡಿಯಲು ; ದೇವಿಯು ಅಧಿಕಸಂತೋಷದಿಂದ ಯುಕ್ತಳಾಗಿ ಎಲೆ ಕಾಂಚ ನಮೂಲೆಯೇ, ಮಾತನಾಡದೆ ಮೌನದಿಂ ಹಿಂದುಗಡೆಯಲ್ಲೇ ಪೋಗಿ ನಮ್ಮ ರಾಯ ನ ಕಂಠಾಳಿಂಗನವಂ ಗೆಯ್ಯುವೆನು ?” ಎಂದು ನುಡಿಯುತ್ತ ಬರಲು ;