ಪುಟ:ವತ್ಸರಾಜನ ಕಥೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, -- ೧೬೧ ದಲ್ಲಿ ರಾಯನು ಕರೆಯಿಸಿ ಒಂದು ಸ್ಥಳದಲ್ಲಿ ನಿನಗಿಂತಲೂ ಹೆಚ್ಚಾದ ಸಂಪತ್ತಿನಲ್ಲಿ ಇರಿ ಸುವುದರಲ್ಲಿ ಸಂದೇಹವೇ ತೋರುವುದಿಲ್ಲ. ಆದುದರಿಂದ ಒಂದು ಉಪಾಯವು ತೋರುವುದು ಏನೆಂದರೆ-ಸಾಗರಿಕೆಯ ಪಾದಗಳಿಗೆ ಬಲವಾಗಿ ಸಂಕಲೆಗಳನ್ನು ತೊಡಿಸಿ ಎಂದೆಂದಿಗೂ ಬಿಡದಂತೆ ನಿಮ್ಮ ತಂದೆಯಾದ ಪ್ರದ್ಯೋತ ರಾಯನಿಗೆ ವಿಜ್ಞಾ ಪನಾಪತ್ರಿಕೆಯ ಬರೆದು ಇವಳನ್ನು ನಿನಗೆ ನೌ' ರುಮನೆಯಾಗೆ ಉಜ್ಜಯಿನೀಪಟ್ಟಿ ಣಕೆ ಕಳುಹಿಸಿಕೊಟ್ಟಲ್ಲಿ ನಿನಗೆ ಸಂತೋಷವೂ ದೊರಕುವುದಲ್ಲದೆ ಮುಂದೆ ಎಂದಿಗೂ ಇಂಥ ಸವತಿಯ ಮತ್ವರವೂ ದೊರಕಲಾರದು. ಈಗಲಾದರೂ ಎನ ವಾಕ್ಯವನ್ನು ಹಿತವನ್ನಾಗಿ ತಿಳಿದು ಈ ಕಾರವಂ ಜಾಗ್ರತೆಯಾಗಿ ನಡೆಸುವುದು ) ಎಂದು ವಿಜ್ಞಾಪಿಸಲು ; ಒತ್ತಿನಲ್ಲಿ ಕೇಳುತಿದ್ದ ಊಳಿಗದ ಸೆಣ್ಣು ಗಳೆಲ್ಲರೂ, ( ಈ ಕಾಂಚನಮಾಲೆಯಂಥ ಕೇಡಿಗೆಯಾದ ಸ್ತ್ರೀಯು ಭೂಮಿಯಲ್ಲಿ ಪುಟ್ಟ ಲಾರಳು. ರತ್ನಮಯವಾದ ಕಾಲುಸರ ಪಾಡಗಕ್ಕೆ ಯೋಗ್ಯವಾದ ಆ ಸಾಗರಿಕೆಯ ಕಾಲುಗ ಳಿಗೆ ಸಂಕಲೆಯಂ ತೊಡಿಸುವಂತೆ ದುರ್ಬೋಧನೆಯಂ ಬೋಧಿಸುವುದಕ್ಕೆ ಇವಳಿಗೆ ಹೇಗೆ ಮನಸ್ಸು ಒಡಂಬಟ್ಟಿ ತೋ ! ” ಎಂದು ಮನದಲ್ಲಿ ಮರಗುತ್ತಿರಲು; ವಾಸವದ ತಾದೇವಿಯು ಕಾಂಚನಮಾಲೆಯು ವಾಕ್ಯವನ್ನು ಹಿತವಾಗಿ ತಿಳಿದು-11 ಎಲೆ ಕಾಂ ಚನಮಾಲೆಯೇ, ನೀನು ಹೇಳುವ ವಾಕ್ಯವು ಯುಕ್ತವೇ ಸರಿ. ಶೀಘ್ರದಿಂದ ಸಂಕ ಲೆಯಂ ತರಿಸಿ ಸಾಗರಿಕೆಯನ್ನು ಕರೆಸು ' ಎಂದು ನುಡಿಯಲಾಕ್ಷರಳಾದ ಕಾಂಡ ನಮಾಲೆಯು ದೇವಿಯ ಅಪ್ಪಣೆಯಾಗುವುದಕ್ಕಿಂತಲೂ ಮುಂಚಿತವಾಗಿ ತರಿಸಿದ್ದ ಸಂಕಲೆಯನ್ನೂ ಸಾಗರಿಕೆಯನ್ನೂ ಸಹ ದೇವಿಯ ಮುಂದಕ್ಕೆ ತಂದು ತೋರಿಸಲು ; ದೇವಿಯು ದಯಾಶಾಲಿನಿಯಾದುದರಿಂದ ಅವಳ ಮಾತುಗಳನ್ನು ವಿಾರಲಾರದೆ ಇರುವುದರಿಂದಲೂ ನಾಗರಿಕೆಗೆ ತಾನು ಎದುರಾಗಿ ಕುಳಿತು ಸ೦ಕತೆಯ೦ ಹಾಕಿಸು ವುದಕ್ಕೆ ಮನಸ್ಸು ಬಾರದೆ, ಎಳೆ ಕಾಂತನವಾಲೆಯೇ, ನಿನ್ನ ಮನ ಬಂದಂತೆ ಶಿಕ್ಷೆಯಂ ನಡೆಸುವಳಾಗು ” ಎಂದು ಒತ್ತಿನಲ್ಲಿದ್ದ ನಿರಾಚಿಯ ತೆರೆಯ ಮರೆಯ೦ ಸೇರಿ ಕುಳಿತು, ( ಈ ಸಾಗರಿಕೆಯಲ್ಲಿ ಎನಗೆ ಏನೋ ಒ೦ದು ವಿಶ್ವಾಸವೇ ತೋರು ವದಲ್ಲದೆ ಇವಳು ಎಷ್ಟು ಅಪರಾಧವಂ ಗೆಯ್ದ ರೂ ಕೋಪವು ತೋರುವುದಿಲ್ಲ. ಇವಳನ್ನು ಅಂತಃಪುರದಿಂದ ಉಜ್ಜಯಿನೀ ಪಟ್ಟಣಕೆ ಕಳುಹಿಸುವುದು ನ್ಯಾಯವಲ್ಲ ?? ಎಂದು ತಿಳಿದು, ಮದನಿಕೆಯಂ ಕರೆದು-- ಆ ಬಾಲೆಯೇ, ಒಲವಾಗಿ ಬಂಧಿಸಿ ರುವ ಸಾಗರಿಕೆಯ ತೋಳುಗಳಂ ಬಿಕ್ಕಿ ಬಿಡುವುದು ?” ಎಂದು ಹೇಳಲು ; ಅಷ್ಟ ರಲ್ಲೇ ಕಾಂಚನಮಾಲೆಯು ದೇವಿಯ ಆಜ್ಞೆಯಂ ಪೇಳಿದ ಮದನಿಕೆಯ ವಾಕ್ಯವಂ ಧಿಕ್ಕರಿಸಿ ಸಾಗರಿಕೆಯ ಕಾಲುಗಳನ್ನು ಎಳೆದು ಎಳೆ ಬಾಲೆಯೇ, ತನಗೆ ಯೋಗ್ಯವಾದ ಭೋಜನ ಪದಾರ್ಥಗಳನ್ನೂ ಗಂಧ ಪುಷ್ಪ ತಾಂಬೂಲಾದಿಗಳನ್ನೂ ಸಹ ದೇವಿಯು ಕಳುಹಿಸುತ್ತಿರಲು ಅದನ್ನು ನಿತ್ಯದಲ್ಲೂ ಅನುಭವಿಸಿಕೊಂಡು ಸುಮ್ಮ