ಪುಟ:ವತ್ಸರಾಜನ ಕಥೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಕರ್ಣಾಟಕ ಕಾವ್ಯಕಲಾನಿಧಿ, -- ವ್ಯವಾಗಿರುವಲ್ಲಿ ಅವಳ ಕತ್ತಿನಲ್ಲಿದ್ದ ರತ್ನ ಹಾರವಂ ತೆಗೆದುಕೊಳ್ಳುವುದಕೆ ಎನ್ನ ಕೈಗಳು ಮುಂದುವರಿದು ಬರಲಾರವು. ಇ೦ಧ ಅವಸ್ಥೆಯನ್ನು ಕೇಳಬೇಕಾದುದು ! ೨೨ ಎಂದು ಸುಸಂಗತೆಯ ಕತ್ತನ್ನು ತಬ್ಬಿಕೊಂಡು ರೋದನವಂ ಗೆಯ್ಯುತ್ತಿರಲು ; ಅವ ಳು ಕೈಗಳಂ ಮುಗಿದು- ಅಯ್ಯಾ ಪೂಜ್ಯನೇ, ಅವಳಿಗೆ ಅನುಗ್ರಹವಂ ಮಾಡು ವದಕ್ಕೋಸುಗವಾಗಿ ಈ ರತ್ನ ಮಾಲೆಯನ್ನು ತೆಗೆದುಕೊಳ್ಳುವನಾಗು ” ಎಂದು ಬಹಳವಾಗಿ ಒಡಂಬಡಿಸಲು ; ವಿದೂಷಕನು ಒಂದು ಗಳಿಗೆ ಯೋಚಿಸಿ- ಎಲೆ ಕಾಂತೆಯೇ, ಈ ಮಾಲಿಕೆಯು ನನಗೆ ಯೋಗ್ಯವಲ್ಲ. ಆದರೂ ನಾಗರಿಕೆಯ ಅಗ ಲಿಕೆಯಿಂದ ಹೇರಳವಾದ ಸಂತಾಪವನ್ನು ಪೊಂದುತ್ತಿರುವ ವತ್ವ ರಾಜನ ದುಃಖ ವಂ ಪರಿಹರಿಸುವುದಕೆ ಯೋಗ್ಯವಾದುದು ಎಂದು ಆ ರತ್ನ ಮಾಲೆಯಂ ತೆಗೆ ದುಕೊಂಡು ಚೆನ್ನಾಗಿ ನೋಡಿ: ಆತ್ಮರವಂ ಪೊ೦ದಿ~ ಎಲೆ ಕಾಂತೆಯೇ, ಸಮಸ್ತ ಭೂಮಂಡಲಕ್ಕೆ ಸತಿಯ ದ ವ ರಾಜನಿಗೂ ದೊರೆಯದೇ ಇರುವ ಈ ರತ್ನ ಮಾಲೆಯು ಈ ನಾಗರಿಕಗೆ ಹೇಗೆ ಬ೦ದುದು ? ಅವರು ? ೨” ಎಂದು ಕೇಳಲು; ಅಯಾ, ಪೂಜನೇ, ಕೇಳು. ಅವಳಲ್ಲಿ ನಾನೂ ಇದೇ ಸಂದೇಹವಂ ಪೊ೦ದಿ ಅವಳ ವಾರ್ತೆಯನ್ನು ತಿಳಿಯುವೆನೆ೦ಬ ಕುತೂಹಲದಿಂದ 2.೦ದು ದಿನ ಅವಳನ್ನು ಕೇಳಿದೆನು. ಅದಕ್ಕೆ ನಾಗರಿಕೆಯು ಅಧಿಕವಾದ ವ್ಯಸನವಂ ಪೊ೦ದಿ ಉದ್ದವಾಗಿ ಉಸಿರುಗಳ೦ ಬಿಟ್ಟು -ಎಲೆ ಈ ಇಂತಿ, ಮನಕೆ ಸಂಕಟವಂ ಪುಷ್ಟಿ ಸುವ ಕಥೆ ಯಂ ಕೇಳಿ ಫಲಲ್ಲವ, ಎಂದು ಒಲವಾಗಿ ರೋದನವಂ ಗೆಯುವದಕ್ಕೆ ಯತ್ನ ಪಟ್ಟು ದರಿಂದ ನಾನು ವಿ' ವಾಗಿ ಕೇಳಲಿಲ್ಲ: " ಎಂದು ನುಡಿಯಲು ; ವಿದೂಷ ಕನು.. « ಎಲೆ ನಾ..., ೬ ವಳು ತನ್ನ ವೃತ್ತಾಂತವನ್ನು ವೇಳಗೆ ಇದ್ದರೂ ಅವಳ ಸೌಂದರವೂ ವಿದ್ಯೆಯ ಗುಣ ವೂ ಈ ರತ್ನ ಮಾಲೆಯ ಸಹ ಸಾಗರಿಕೆಯು ಯಾ ವವಳೂ ಒಬ್ಬ ಗೋರೆಯ ಮಗಳ೦ಬುದನ್ನು ವ್ಯಕ್ತವಾಗಿ ಹೇಳುತ್ತಿರುವುದು ?” ಎನಲು ; ಅವಳು- ೧೬ಾ ವಸಂತಕನೇ, ನಮ್ಮ ರಾಯನು ಈಗ ಒಂದೆರಡು ಗಳಿಗೆಯಲ್ಲಿ ದೇವಿಯ ಸವಿಾಪಕ್ಕೆ ಬಂದಿದ್ದು ಈಗ ಅಲ್ಲಿಂದ ಪೊರಮಟ್ಟು ಸ್ಪಟಿಕ ಶಿಲೆಯಿಂದ ನಿರ್ಮಿಸಲ್ಪಟ್ಟ ಮಂಟಪದಲ್ಲಿ ಇರುವನಾಗಿ ತೋರುವದು. ಅಲ್ಲಿಗೆ ಪೋಗಿ ಅವನ ವಿರಹವ್ಯಥೆಯನ್ನು ಹೋಗಲಾಡಿಸುವನಾಗು, ನಾನು ದೇವಿಯ ಸವಿಾನನಂ ಸೇರಿ ನಾಗರಿಕೆಯ ವೃತ್ತಾಂತವು ಇನ್ನೇನು ನಡೆಯುವುದೋ ಅದನ್ನು ತಿಳಿದುಕೊಂಡು ಬರುವೆನು ಎಂದು ನುಡಿದು ಹೋಗಲು ; ವಸಂತಕನು, ರಾಯನ ಸವಿಾಪವಂ ಸೇರುವೆನೆಂದು ಬರುತ್ತಿರಲು ; ಇತ್ತಲು, ರಾಯನು ಸ್ಪಟಿಕ ಶಿಲಾಮಂಟಪದಲ್ಲಿ ಕುಳಿತು, ದೇವಿಯು, ನಿಮಿ ತ್ಯವಿಲ್ಲದೆ ಇರುವ ಅನೇಕ ಶಪಥಗಳಿಂದಲೂ ಸವಿಯಾಗಿ ಪ್ರೀತಿ ಕರವಾದ ವಾಕ್ಯಗ ೪೦ದಲೂ ಚಿತ್ರದ ಅನುವರ್ತನೆಯಿಂದಲೂ ಅನೇಕವಾದ ದೀನೋಕ್ತಿಯಿಂದಲೂ