ಪುಟ:ವತ್ಸರಾಜನ ಕಥೆ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸ ರಾಜನ ಕಥೆ, - ೧೩ ಅನೇಕಗಳಾದ ಪ್ರೀತಿಕರವಾದ ಸಖಿಯರುಗಳಿಂದ ಪೇಳಿದ ವಾಕ್ಯಗಳಿಂದಲೂ ಎಷ್ಟು ಒಡಂಬಡಿಕೆಯಂ ಹೇಳಿದರೂ ತನ್ನ ಮನದಲ್ಲಿ ಬೇರೂರಿರುವ ಕೋಪವಂ ಬಿಡದೆ ಪೋದಳು. ಸುಸಂಗತೆ ಸಾಗರಿಕೆ ವಸಂತಕ ಈ ಮೂರುಜನದ ವೃತ್ತಾಂತ ವೇನಾದುದೋ ತಿಳಿಯೆನು, ಈಗಲಾದರೋ ಸಾಗರಿಕೆಯ ವಿರಹವ್ಯಥೆಯು ಬಲ ವಾಗಿ ಎನ್ನನ್ನು ಬಾಧಿಸುತ್ತಿರುವುದು, ಮತ್ತು ಆ ನಾಗರಿಕೆಯು ಕೋಪವಂ ತಾಳಿದ ದೇವಿಂದ ಭಯವನ್ನು ಹೊಂದಿ, ರಕ್ಷಣೆಗೋಸುಗವಾಗಿ ಮದನಬಾಣದ ಪೆಟ್ಟಿ ನಿಂದ ಉಂಟಾದ ರಂಧ್ರಗಳಿ೦ದ ಎನ್ನ ಹೃದಯವಂ ಪೊಕ್ಕು ಒಲವಾದ ವ್ಯಥೆಯ ನ್ನು ಹೊಂದಿಸುತ್ತಿರುವಳು, ಈ ಸಂಗತಿಯನ್ನೆ ಪೇಳುವೆನೆ೦ದರೆ ಎನ್ನ ವಿಶ್ವಾಸಕೆ ಯೋಗ್ಯನಾದ ವಸಂತ ಕನೂ ದೇವಿ ಯ ಬಂಧನಕ್ಕೆ ಒಳಗಾದನು, ಈಗ ಯಾರಿ ಗಾಗಿ ರೋದನವಂ ಗೆಯ್ಯಲಿ? ಎಂದು ಅಧಿಕವಾಗಿ ಸಂತಾಪವಂ ಪೊಂದಿ ನಿಟ್ಟುಸಿರಂ ಬಿಡುತ್ತಿರಲು ; ವಿದೂಷಕನು ಒರು ರಾಯನಂ ಕಂಡು, ' ಇದೊ ನಮ್ಮ ರಾಯನು ಸಂಪೂರ್ಣ ವಾದ ವಿರಹವಣಿಂದ ಕೃಶವಾದಂಥದಾದರೂ ೬ ಧಿಕವಾದ ಲಾವ ಣ್ಯವನ್ನು ವಹಿಸಿಕೊಂಡಿರುವ ಶರೀರಮಂ ತಾಳ ಪನ ದೃದ ಚಂದ್ರನಂತೆ ಪುರೋಭಾ ಗದಲ್ಲಿ ಪರಿಶೋಭಿಸುತ್ತಿರುವನು. ಹೀಘ್ರದಿಂ ಪೋಗಿ ಕಾಣುವೆನು ?” ಎಂದು ರಾಯನ ಸಮ್ಮುಖವಂ ಪೊಂದಿ- ಎಲೈ ರಾಜೇಂದ್ರನೇ, ನಿನಗೆ ಮಂಗಳವುಂಟಾ ಗಲಿ, ದೇವಿಯ ಬಂಧನದಿಂದ ಬಿಡಿಸಿ ಕೊಂಡು ಒ೦ದ ನಾನು ದೈವಯೋಗದಿಂದ ನಿನ್ನ ಕಂಡೆನು, ಎನ್ನ ಕಣ್ಣುಗಳು ಪುಣವಳ್ಳವ ?” ಎಂದ.: ನುಡಿಯಲು; ರಾಯ ನು ಕತ್ತೆತ್ತಿ ನೋಡಿ ವಿದೂಷಕನನ್ನು ಸಂತೋಷದಿಂದೊಡಗೂಡಿ, ಎಲೈ ಪ್ರಾಣ ಮಿತ್ರನೇ, ಶೀಘ್ರದಿಂದ ಒಂದು ಎನ್ನ ನ್ನು ಆoiಸುವನಾಗು. ಈಗ ನಿನಗೆ ಪುಟ್ಟ ರುವ ಸಂತೋಷವೇ ನಿನ್ನಲ್ಲಿ ಅಧಿಕವಾದ ದೇವಿಯ ಸಂತೋಷವನ್ನು ಸೂಚಿಸು ವುದು, ಸಾಗರಿಕೆಯ ವೃತ್ತಾಂತವೇನಾದುದು ಪೇಳುವನಾಗು ? ೨” ಎನಲು ; ವಿದೂಷ ಕನು ಪ್ರತ್ಯುತ್ತರವಂ ನೇಳಗೆ, ಒಂದು ಕ್ಷಣ ಕಾಲವೂ ಅಧೋಮುಖನಾಗಿ ಕುಳಿತಿ ರಲು ; ರಾಯನು- ಎಲೈ ಮಿತ್ರನೇ, ಏಕೆ ಎನಗೆ ಪ್ರತ್ಯುತ್ತರವಂ ನೇಳಗೆ ತ ಯಂ ತಗ್ಗಿಸಿ ಕುಳಿತಿರುವೆ ? ?” ಎಂದು ನುಡಿಯಲು ; ಅವನು -. ಎಲೈ ರಾಬೇಂ ದ್ರನೇ, ಅಮಂಗಳ ವಾದ ವಾಕ್ಯವನ್ನು ಹೇಗೆ ವಿಞ್ಞಾಪಿಸತಕ್ಕುರಂದು ಪ್ರತ್ಯುತ್ತ ರವಂ ಪೇಳದೆ ಸುಮ್ಮನಿರುವೆನು.” ಎನಲ; ರಾಯನು ಮಾತಾರವಂಗೆಯು - ಎಲೈ ಮಿತ್ರನೇ, ಆಮಂಗಳವೆಂದರೇನು ? ನಿನ್ನ ಕಾಂತೆ ೬ ನವೆಂ ಪಟ್ಟ ಛೇ ? " ಎಂದು ವರ್ಣಿಂ ಪೊಂಜ, ಒ.ದನಂ ಕರಿದ ವರನಂತೆ ಸೀರದಿಂ ಬೀಳಲು ; ವಿದೂಷಕನು ದಿಗಿಲಂ ಪೊಂದಿ, ತೀನಂತರಗಳಿಂದ ಉಪಚರಿಸಿ, ಪ್ರಜ್ಞೆ ಬರುವಂತೆ ಗೆಯ್ತು.- ಎಲೈ ರಾಮೋತ್ತಮನೇ, ನಾನು ಹೇಳಿದ ವಾಕ್ಯ