ಪುಟ:ವತ್ಸರಾಜನ ಕಥೆ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧8ಂ - ಕರ್ಣಾಟಕ ತಾಕಲಾನಿಧಿ, - ವನ್ನು ಇನ್ನೊಂದು ಪ್ರಕಾರವಾಗಿ ಊಹಿಸಬೇಡ. ದೇವಿಯು ಸಾಗರಿಕೆಯನ್ನು ನಿಗಳ ಬಂಧನವಂ ಗೆಯ ಉಜ್ಜಯಿನೀ ಪಟ್ಟಣಕೆ ಕಳುಹಿಸಿದಳಾದುದರಿಂದ ಈ ಅಮಂಗಳವಾದ ವಾಕ್ಯವನ್ನು ಹೇಳಬಾರದೆಂದು ಸುಮ್ಮಸಿತ್ವನು ಎಂದು ನುಡಿ ಯಲ: ; ರಾಯನು ಕರ್ಣಕಠೋರವಾದ ವಿದೂಷಕನ ವಾಕ್ಯವ೦ ಕೇಳಿ, ತನ್ನ ಪ್ರಾಣಗಳಂ ಕುರಿತು ಎಲ್ಲೆ ಪ್ರಾಣಿಗಳೇ, ಅಸಮರ್ಧನಾದ ಎನ್ನನ್ನು ಬಿಟ್ಟು ಬಿಡಿ, ಎನ್ನ ವಾಕ್ಯವನ್ನು ಕೇಳಿ ಮದ್ದಾನೆಯಂತೆ ಮುದ್ದಾದ ನಡೆಯುಳ್ಳ ಕೋ ಮಲಾ೦ಗಿಯಾದ ಎನ್ನ ಪ್ರಾಣಕಾಂತೆಯು ಬಹುದೂರವಾಗಿ ಹೋಗಿರುವಳು. ನೀವು ತಡವಂ ಗೆಯ್ಯದೆ ಪೋಗಿ ಅವಳಂ ಸೇರಿ ಸುಖವಂ ಪೊಂದಿರಿ ” ಎಂದು, ವಿದೂಷಕನಂ ಕುರಿತು ಎಲ್ಲೆ ಮಿತ್ರನೇ, ದೇವಿಯು ಎನ್ನಲ್ಲಿ ಮಾಡಿದ ಕರುಣಾ ಶೂನ್ಯತ್ವವಂ ನೋಡಿದೆಯಾ ? ಊಜಯಿನೀ ಪಟ್ಟಣಕೆ ನಾಗರಿಕೆಯಂ ಕಳುಹಿಸಿದ ಳೆಂದು ಯಾರು ನಿನೊ ಡನೆ ಘಳಿದವರು ? " ಎಂದು ನುಡಿಯಲು: ಅವನು. (( ಸುಸಂಗತೆಯು ಪೇಳಿ, ಇನ್ನೆ (ನು ವಿಶೇಷ ವೈ ತಾಂತವು ನಡೆಯುವುದೋ ತಿಳಿದು ಬರುವೆನೆಂದು ನುಡಿದು ದೇವಿಯ ಸವಿಾಪಕ್ಕೆ ಪೋದಳು, ಮತ್ತು ಸುಸಂಗತೆಯು ನಾಗರಿಕೆಯು ನಿನ್ನ ಸವಿಾಪದಲ್ಲಿ ಇರಲಿ ಎಂದು ಏನು ನಿಮಿತ್ತವಾಗಿಯು ಈ ರತ್ನ ಮಾಲೆಯನ್ನು ಎನ್ನ ಹಸ್ತಕೆ ಕೊಟ್ಟು ಹೋದಳು ? ” ಎಂದು ಆ ರಕ್ತ ಮಾಲೆಯಂ ತೋ ರಿಸಲು ; ರಾಯನು- ಇನ್ನಾ ವ ಸಿಮಿತ್ತವೂ ತೋರುವುದಿಲ್ಲ. ವಿರಹವ್ಯಥೆಯಿಂದ ಕೊರಗುತ್ತಿರುವ ಎನ್ನ ಮನಕ್ಕೆ ಸಂತೋಷವಂ ಪುಟ್ಟಿಸುವುದಕ್ಕೂ, ತನ್ನ ಸ್ಮರಣೆಯ ಎನಗೆ ಸರ್ವದಾ ಉಂಟಾಗಿರಲಿ ಎಂದೂ ನಿನ್ನ ಪ್ರಾಣಕಾಂತೆಯು ಕತ್ತಿನಲ್ಲಿದ್ದು ದನ್ನು ತೆಗೆದುಕೊಟ್ಟಿರುವಳು. ಎನ್ನ ಪಾಣಗಳಿಗೆ ಈ ರತ್ನ ಮಾಲೆಯೇ ಆಧಾರವಾ ಬುದು. ' ಎಂದು ಆ ಮಾಲೆಯ೦ ತೆಗೆದುಕೊಂಡು, ಕಣ್ಣಿಗೆ ಒತ್ತಿಕೊಂಡು, ಎರೆ ಯಲ್ಲಿರಿಸಿ, ಅದನ್ನು ಕುರಿತು,-: ಎಲೈ ರತ್ನ ಮಾಲೆಯೇ, ಆ ಕೋಮಲಾಂಗಿಯ ಕ೦ರಾಲಿಂಗನವಂ ಪೊ೦ದಿ, ಭ್ರಷ್ಟನಾದ ಎನ್ನ ಸಮಾನವಾದ ಅವಸ್ಸಯಂ ಪೊ೦ದಿ ರುವ, ನೀನು ಪ್ರಿಯಕರಳಾದ ದೂತಿಯಂತೆ ಹೃದಯಕೆ ಆನಂದವಂ ಪುಟ್ಟ ಸುತ್ತಿ ರುವೆ ” ಎಂದು, (' ಎಲೈ ಮಿತ್ರನೇ, ಈ ರತ್ನ ಮಾಲೆಯನ್ನು ಮಾಸಿಪೋಗದಂತೆ ನಿನ್ನ ವಸ್ತ್ರದ ಅ೦ಚಿನಿಂದ ಸುತ್ತಿ ಹಿಡಿಯುವನಾಗು. ನಾನು ಸ್ವಲ್ಪ ಧೈರವಂ ಅವಲಂಬಿ ಸುತ್ತಿರುವೆನು " ಎನ: ವಿದೂಷಕನು- ಆಜ್ಞೆಯಾದಂತೆ ನಡೆಯುವೆನು ?' ಎಂದು, ಅದೇರೀತಿಯಿ೦ದ ಆ ಮಾಲೆಯನ್ನು ಹಿಡಿದು ನಿಂದಿರಲು ; ರಾಯನು ( ಎಲೈ ಮಿತ್ರನೇ, ಇನ್ನು .ಲೆ ಸನ್ನು ತಾಂಗಿಯಾದ ಆ ಸಾಗರಿಕೆಯ ದರುಶನವ ಎನಗೆ ದೊರಕುವದು ಒಹಳ ದುರ್ಲಭವಾದುದು  »ಂದು ನುಡಿಯಲು ; ಸಿದ ಷಕನು-- ಎಲೈ ರಾಜೇ೦ಗ್ರನೇ, ದೈವಗತಿಯು ಹೀಗೆಯೇ ಸರಿ ಎಂದು ನಿಶ್ಚಯಿ ಸುವುದಕ್ಕೆ ಯಾರಿಂದಲೂ ಆಗದು. ಮತ್ತು ಆ ಸಾಗರಿಕೆಯ ದರ್ಶನವು ಅಗತ್ಯ ವಾಗಿ ಆಗುವುದು, ಸಂದೇಹವಾಗಿ ತೋರುವುದಿಲ್ಲ. 'ಕೆಂದರೆ ? ಅಂಧ ರೂಪವತಿ