ಪುಟ:ವತ್ಸರಾಜನ ಕಥೆ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ೧ಳಿ ದಲೂ, ಇಲ್ಲಿಗೆ ನೀನೇ ಬಂದಲ್ಲಿ ಇಲ್ಲಿ ಕುಳಿತು ನಾವಿರ್ವರೂ ಇವನ ವಿದ್ಯಾಪರೀಕ್ಷೆ ಯನ್ನು ತೆಗೆದುಕೊಳ್ಳಬಹುದೆಂದು ವಾಸವದತ್ತೆಗೆ ಹೇಳಿ ಅವಳನ್ನು ಕರೆದುಕೊಂಡು ಬರುವುದು' ಎಂದು ಅಪ್ಪಣೆಯನ್ಶಿಯಲು ; ಅವಳು--ಆಜ್ಞೆಯಾದಂತೆ ನಡೆದು ಕೊಳ್ಳುವೆನೆಂದು ವಾಸವದತ್ತಾ ದೇವಿಯ ಸವಿಾಪವಂ ಸಾರ್ದಳು ಎಂಬಲ್ಲಿಗೆ ಶಿ ಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾರ್ಥವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ವಿರಚಿಸಲ್ಪಟ್ಟ ಕೃತ್ಯರಾಜ ಸಮುಕ್ತಾವಳಿಯೆಂಬ ಗ್ರಂಥದೊಳೆ ವತ್ಸರಾಜನ ಕಥೆಯಲ್ಲಿ ಹದಿನಾರನೆಯ ಗುಚ್ಛಂ ಸಂಪೂರ್ಣವಿ.

            • ಹದಿನೇಳನೆಯ ಗುಚ್ಚಲ

ಅನಂತರದಲ್ಲಿ ಕಾಂಚನಮಾಲೆಯು ರಾಯನ ಆಜ್ಞೆಯಂ ಪಡೆದು, ವಾಸವದ ತ್ಯಾದೇವಿಯ ಸವಿಾಪವಂ ಸೇರಿ, ( ಎಲೌ ಪೂಜ್ಯಳಾದ ವಾಸವದತ್ತಾದೇವಿಯೇ, ಐಂದ್ರಜಾಲಿಕನ ವೃತ್ತಾಂತವನ್ನು ವಿಜ್ಞಾಪಿಸುವಲ್ಲಿ ರಾಯನು ಸುಮುಖನಾಗಿ ಕೋಪವಂ ತಾಳದೆ ನಸುನಗುತ್ತ ಪೂಜ್ಯಳಾದ ನಿನ್ನ ನೈ ಅಲ್ಲಿಗೆ ಕರೆದುಕೊಂಡು ಬರುವಂತೆ ಅಪ್ಪಣೆಯನ್ನಿ ತಿರುವನು. ಈ ಸಮಯದಲ್ಲಿ ತಡವಂ ಮಾಡದೆ ನಡೆ ಯುವಳಾಗಿ ಪೋಗಿ ಆ ಮಹಾರಾಜೇಂದ್ರನಿಗೆ ಸಂತೋಷವನ್ನು ೦ಟುಮಾಡುವ ಳಾಗು. ಒಂದುವೇಳೆಯಲ್ಲಿ ನಾಗರಿಕೆಯ ವೃತ್ತಾಂತವನ್ನು ಕೇಳಿದಾಗ್ಯೂ ವಿರೋ ಧವಿಲ್ಲದ ವಾಕ್ಯವನ್ನು ಪೇಳುವಳಾಗು ” ಎನಲಾದೇವಿಯು ಎಲೆ ಬಾಲೆಯೇ, ಕೇಳು, ಯಾವ ರಾಜೇಂದ್ರನಂ ನಮಸ್ಕಾರಾದಿಗಳಂ ಮಾಡಿದಾಗ್ಯೂ ಲಕ್ಷಿಸದೆ ತಿರ ಸ್ಕಾರವಂ ಗೆಯ್ದ ರ್ಪೆನೋ ಈ ಆ ರಾಜೇಂದ್ರನಿಗೆ ಮುಖವಂ ತೋರಿಸುವುದಕೆ ಲಜ್ಞೆಯಂ ಪೊಂದುತ್ತಿರುವೆನು. ಆದರೂ ನಮ್ಮ ತೌರೂರಿನಿಂದ ಬಂದಿರುವ ಈ ಐಂದ್ರ ಚಾಲಿಕನಿಗೆ ಬಹುಮಾನವನ್ನು ಮಾಡಿಸುವುದಕ್ಕೋಸುಗವಾಗಿ ಹೋಗಬೇಕಾಗಿರು ವುದು ” ಎಂದು ನುಡಿದು, ಅಲ್ಲಿಂದ ಪೊರಮಟ್ಟು, ಕಾಂಚನಮಾಲೆಯಿಂದೊಡ ಗೂಡಿ ಬರುತ್ತ, “ ಎಲೆ ಬಾಲೆಯೇ, ಐಂದ್ರಜಾಲಿಕನು ನಮ್ಮ ಉಜ್ಜಯಿನೀಪಟ್ಟಿ ಟಿ 19