ಪುಟ:ವತ್ಸರಾಜನ ಕಥೆ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ೧8೬ ಥಗಣಗಳಿ೦ ಪರಿವೃತನಾಗಿ ತೋರುತ್ತಲಿರುವನು, ವಿಷ್ಣುವು ಗದಾ ಚಕ್ರಾದಿಗಳಿಂದ ಶುಭವಾಗಿ ಶೋಭಿಸುತ್ತಿರುವ ನಾಲ್ಕು ತೋಳುಗಳಿ೦ದ ರಮಣೀಯನಾಗಿ ಲಕ್ಷ್ಮೀಸ ಮೇತನಾಗಿ ಪ್ರಶ್ನೆಗಳಿಗೆಲ್ಲಾ ಸತಿಯಾದ ಗರುಡನ ಹೆಗಲನ್ನೇರಿ ರಾಜಿಸುತ್ತಿರುವನು. ದೇವಾಧಿಪತಿಯಾದ ಇಂದ್ರನು ಸಿದ್ದ ಸಾಧ್ಯ ಕಿನ್ನರ ಕಿಂಪುರುಷ ಮುಂತಾದ ದೇವರ ಣದಿಂದ ಪರಿವೃತನಾಗಿ ರಂಭೋಗ್ಯ ಶೀಮೇನಕಾ ತಿಲೋತ್ತಮೆ ಮೊದಲಾದ ಅಪ್ಪ ರಸ್ತ್ರೀಯರ ನಾಟ್ಯ ಮಂ ನೋಡುತ್ತ ನಲಿಯುತ್ತಿರುವನು ?” ಎಂದು ಅತ್ಯಾಕ್ಷರ ದಿಂದ ಯುಕ್ತನಾಗಿ ನೋಡುತ್ತಿರಲು ; - ರಾಯನು ಗಗನವಂ ನೋಡಿ, ಆರವಂ ಪೊಂದಿ, (' ಭಳಿರೇ ! ಐಂದ್ರಜಾಲಿ ಕನೇ ! ನಿನ್ನ ಸಮಾನರಾದ ವಿದ್ಯಾವಂತರನ್ನು ಈ ಲೋಕದಲ್ಲಿ ಕಾಣೆನು ೨” ಎಂದು ಶ್ಲಾಘನೆಯಂ ಗೆಯ್ಯುತ್ತಿರುವುದರಲ್ಲೇ ವಿದೂಷಕನು ತನ್ನಲ್ಲಿ ತಾನು ಆಲೋಚಿಸಿ(ಎಲೊ, ದಾಸೀಪುತ್ರನಾದ ಐಂದ್ರಜಾಲಿಕನೇ, ಈಗ ನೀನು ತೋರಿಸಿದ ಇಂದ್ರ ಚಂದ್ರ ಮುಂತಾದ ದೇವತೆಗಳಿ೦ದ ಏನು ಪ್ರಯೋಜನವ ? ಈ ರಾಯನಿಂದ ಬಹು ಮಾನವಂ ಪಡೆದು ಹೆಸರನ್ನು ಸಂಪಾದಿಸಬೇಕಾದಲ್ಲಿ ನಾಗರಿಕೆಯನ್ನು ತೋರಿಸುವ ನಾಗು, ಇಲ್ಲವಾದಲ್ಲಿ ಇಲ್ಲಿ ನಿನಗೆ ಒಂದು ತೃಣ ಪ್ರಯೋಜನವೂ ದೊರಕಲಾ ರದು ?” ಎಂದು ನುಡಿಯುತ್ತಿರಲು ; ಅಷ್ಟರಲ್ಲೇ ದ್ವಾರಪಾಲಕಿಯು ವೇಗದಿಂ ಬಂದು ರಾಯನಿಗೆ ನಮಸ್ಕಾ ರವಂ ಗೆಯ್ಯು, ಎಲೈ ರಾಜೇಂದ್ರನೇ, ಯೌಗಂಧರಾಯಣನು ವಿಜ್ಞಾಪನೆಯಂ ಗೆಯ್ಯುವಂತೆ ಹೇಳಿರುವುದೇನೆಂದರೆ-ಈಗ ಸಿ೦ಹಳ ದೇಶಕ್ಕೆ ಮಂತ್ರಿಯಾಗಿ ದೇವಿ ಯವರಿಗೆ ಮಾವನಾದ ವಸುಭೂತಿಯು ಬಾಭ್ರವ್ಯನೆಂಬ ಕಂಡುಕಿಯಿಂದೊಡಗೂಡಿ ನಿಮ್ಮ ಕಾಣಲೋಸುಗ ಬಂದಿರುವನಾದುದರಿಂದ ಸ್ವಾಮಿಯವರು ಶುಭಮುಹೂ ರ್ತದಲ್ಲಿ ಅವರನ್ನು ಕಾಣುವುದು ಯುಕ್ತವು, ನಾನು ರಾಜಕಾರ್ ಶೇಷನಂ ಸಮಾ ಯಂಗೆಯ್ಯು ಸನ್ನಿ ಧಿಯಂ ಕುರಿತು ಬರುವೆನೆಂದು ವಿಜ್ಞಾಪಿಸುವನು !” ಎನಲು ; ಆ ವಾಕ್ಯವಂ ಕೇಳಿದ ವಾಸವದತ್ತಾ ದೇವಿಯು- ಎಲೈ ಮಹಾರಾಜನೇ, ಈ ಇಂದ್ರಜಾಲವಿದ್ಯೆಯನ್ನು ಇನ್ನೊಂದು ವೇಳೆಯಲ್ಲಿ ನೋಡಬಹುದು. ಈಗ ಸಿಂಹಳದೇಶದಿಂದ ಬಂದ ಮಾವನಾದ ವಸುಭೂತಿಯನ್ನು ಕಾಣುವುದು ಯುಕ್ತವಾ ಗಿರುವುದು ?” ಎಂದು ನುಡಿಯಲು ; - ರಾಯನು- ದೇವಿಯೇ, ನಿನಗೆ ಯಾವುದು ಸಮ್ಮತವೋ ಆ ರೀತಿಯು ಎನಗೂ ಸಮ್ಮತವೇ ಸರಿ ?” ಎಂದು, ಎಲೈ ಐಂದ್ರಬಾಲಿಕನೇ, ನಿನ್ನ ವಿದ್ಯೆಯನ್ನು ಇನೊ೦ದುಬಾರಿ ನೋ ('ಡು ತೆವು, ಈಗ ನಿನ್ನ ಸಾಮಗ್ರಿಯಂ ತೆಗೆದುಕೊಂಡು ಪೋಗುವನಾಗು ” ಎಂದು ನುಡಿಯಲು ; ಅವನು-II ಎಲೈ ಸ್ವಾಮಿಯೇ, ನಿನ್ನ ಅಪ್ಪಣೆಯಾದಂತೆ ನಡೆದುಕೊಳ್ಳುವೆನು. ಆದರೂ ಇನ್ನೊಂದು ವಿದ್ಯೆಯು ಸ್ವಾಮಿ