ಪುಟ:ವತ್ಸರಾಜನ ಕಥೆ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫o - ಕರ್ನಾಟಕ ಕಾವ್ಯಕಲಾನಿಧಿ, - ವಿಯು ನಮಸ್ಕಾರವಂ ಗೆಯುವಳು ?” ಎಂದು ನುಡಿಯುತ್ತಿರುವಷ್ಟರಲ್ಲೇ ವಾಸವದ ತಾದೇವಿಯು ಬಂದು ವಂದನೆಯಂ ಗೆಯ್ಯಲು ; ವಸುಭೂತಿಯು- ಎ ಪೂಜ್ಯ ಳಾದ ದೇವಿಯೇ, ದೀರ್ಘಾಯುಷ್ಯಮಂ ಪೊಂದಿ ನಿನ್ನ ಸದ್ದು ಣಕೆ ಸಮನಾದ ಪುತ್ರನಂ ಪಡೆಯುವಳಾಗು ” ಎಂದು ಆಶೀದ್ವಾದವಂ ಗೆಯ್ಯಲು ; - ರಾಯನು-- ಎಲೈ ಮಂತ್ರಿಯೇ, ಸಿಂಹಳದೇಶಾಧಿಪತಿಯಾದ ವಿಕ್ರಮಬಾ ಹುರಾಯನು ಕ್ಷೇಮದಲ್ಲಿರುವನೇ ಹೇಳು ?” ಎನಲು ? ; ಆ ವಸುಭೂತಿಯು ಆಕಾಶ ವಂ ನೋಡಿ ಉದ್ದವಾಗಿ ಉಸಿರುಗಳ೦ ಬಿಟ್ಟು “ ಎಲೈ ರಾಜೇಂದ್ರನೇ, ನೀನು ಅಪ್ಪಣೆಯನ್ನಿತ್ಯ ವಾಕ್ಯಕೆ ಉತ್ತರವಂ ಪೇಳುವುದಕೆ ಶಕ್ತನಾಗಲಾರೆನು ” ಎಂದು ನುಡಿಯಲು ; ವಾಸವದತ್ತೆಯು ವಿಷಾದದಿಂದೊಡಗೂಡಿ ಈ ವಸುಭೂತಿಯು ಆಡಿದ ನುಡಿ ಯಿಂದ ಸಿಂಹಳದೇಶದ ರಾಯನಿಗೆ ಏನೋ ಒಂದು ಆಮಂಗಳವು ಸೂಚಿಸಲ್ಪಡುವು ದಾದುದೆಂದು ತನ್ನ ಮನದಲ್ಲಿ ಯೋಚಿಸುತ್ತಿರಲು ; ರಾಯನು ವಾಸವದತ್ತಾ ದೇವಿಯಂ ನೋಡಿ_ ಎಲೆ ಕಾಂತೆಯೇ, ಈ ವಾಕ್ಯ ವಂ ಕೇಳಿದಮಾತ್ರಕೆ ಏತಕೆ ವ್ಯಾಕುಲವಂ ಪೊಂದುತ್ತಿರುವೆ ? ಎಂದು ನುಡಿಯಲು; ಈ ಬಾಘ್ರವ್ಯನು- ಎಲೈ ಮಂತ್ರಿಯೇ, ಬಲುಹೊತ್ತು ಹೇಳತಕ್ಕ ಸಮಸ್ತ ವ್ಯ ತಾಂತವನ್ನು ಪೇಳುವನಾಗು” ಎಂದು ನುಡಿಯಲು ; ವಸುಭೂತಿಯು ಕಣ್ಣೀರುಗಳಂ ಬಿಡುತ್ತ, “ ಎಲೈ ರಾಜೇಂದ್ರನೇ, ನಂದ ಭಾಗ್ಯನಾದ ನಾನು ಪೇಳುವೆನು ಕೇಳು. ಆಯುಷ್ಕತಿಯಾದ ವಾಸವದತ್ತಾ ದೇ ವಿಯು ಉರಿಯ ಮನೆಯಲ್ಲಿ ಸಿಕ್ಕಿ ದಗ್ನಳಾದಳೆ೦ಬ ವಾರ್ತೆಯನ್ನು ಕೇಳಿದ ವಿಕ್ರಮ ಬಾಹುರಾಯನು ಬಹುದುಃಖವನ್ನು ಹೊಂದಿ ನಿಮಗೆ ಅಭಿಮತವಾಗಿ ಸರ್ವಾ೦ಗ ಸುಂದರಿಯಾದ ತನ್ನ ಮಗಳಾದ ರತ್ನಾ ವಳಿಯನ್ನು ಕಳುಹಿಸಿಕೊಟ್ಟನು ?” ಎಂದು ನುಡಿಯಲು ; - ರಾಯನು ದೇವಿಯಂ ಕುರಿತು, ( ಎಲೆ ಕಾಂತೆಯೇ, ಈ ವಸುಭೂತಿಯು ಪೇಳುವ ವಾಕ್ಯವು ಆಶ್ಚಯ್ಯಕರವಾಗಿರುವದು ” ಎಂದು ನುಡಿಯಲು; ದೇವಿಯು ನಸುನಗುತ್ತ- ಎಲೈ ಸ್ವಾಮಿಯೇ, ಈ ಮಂತ್ರಿಯು ವೇಳುವ ವಾಕ್ಯಕೆ ತಾತ್ರ ಗ್ಯವೇ ಆಗಲಿಲ್ಲ. ಆದರೆ ನಿನ್ನ ಸನ್ನಿಧಿಯಲ್ಲಿ ಇವನು ಸುಳ್ಳು ಮಾತುಗಳನ್ನು ಪೇಳ ಲಾರನು ” ಎಂದು ಏಕಾಂತವಾಗಿ ಹೇಳಲು; ವಿದೂಷಕನು ವಸುಭೂತಿಯಂ ಕುರಿತು- ಅಯ್ಯಾ ಮಂತ್ರಿಗಳೇ ನಿಮ್ಮ ದೊರೆಯ ಮಗಳಾದ ರತ್ನಾವಳಿಯು ಏನಾದಳು ? ” ಎಂದು ಬೆಸಗೊಳಲು ; ವಸುಭೂತಿಯು- ಅಯ್ಯಾ ರಾಜೇಂದ್ರನೇ, ನಿಮ್ಮ ಸನ್ನಿಧಿಗೆ ನಾವೆಲ್ಲರೂ ಕರೆದುಕೊಂಡು ಬರುತ್ತಿರಲು, ದೈವಯೋಗದಿಂದ ಸುಳಿಗಾಳಿಗೆ ಸಿಕ್ಕಿ ಮಧ್ಯದಲ್ಲಿ