ಪುಟ:ವತ್ಸರಾಜನ ಕಥೆ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ܘMܘ ರುವ ಪತದ ಗುಂಡುಗಲ್ಲಿಗೆ ತಗಲಿ ಕುಳಿತಿದ್ದ ಹಡಗು ಮುರಿದು ಸಮುದ್ರದಲ್ಲಿ ಮುಳುಗಿ ಹೋದಳು. ” ಎಂದು ನುಡಿದು, ಮುಖಕ್ಕೆ ವಸ್ತ್ರವನ್ನು ಮುಚ್ಚಿಕೊಂಡು ಅಳುತ್ತಿರಲು ; - ವಾಸವದತ್ತಾದೇವಿಯು ಹೆಣ್ಣಾಗಿ ಕೂಗುತ್ತಾ : ಎಲೆ ತಂಗಿಯಾದ ರತ್ನಾವಳಿ ಯೇ, ಎನ್ನ ೦ ಬಿಟ್ಟು ಎಲ್ಲಿ ಹೋಗಿರುವೆ ? ಎನಗೆ ಪ್ರತಿವಚನಂಗಳಂ ಕೊಡುವಳಾ ಗು ಎಂದು ರೋದನವಂ ಗೆಯ್ಯುತ್ತಿರಲು ; ರಾಯನು--( ಎಲೆ ದೇವಿಯೇ, ದುಃಖವನ್ನು ಬಿಡುವಳಾಗು. ರೈ ವಿ. ಗವು ಹೀಗೆಂದು ನಿಶ್ಚಯಿಸುವುದಕ್ಕಾಗದು, ಇದಕೆ ಅವಳೊಡನೆ ಸಮುದ್ರದಲ್ಲಿ ಮುಳುಗಿದ್ದು ಎದ್ದು ಬಂದಿರುವ ಈ ಬಾಭ್ರವ್ಯ ವಸುಭೂತಿಗಳೇ ನಿದರ್ಶನವಾ ಗಿರುವುದು ಎಂದು ನುಡಿಯಲು; ದೇವಿಯು- ಎಲೈ ಸ್ವಾಮಿಯೇ, ನೀನು ಅಪ್ಪಣೆಯನ್ನಿತಂತೆ ಇವರೋಪಾದಿಯಲ್ಲಿ ಎನ್ನ ತಂಗಿಯಾದ ರತ್ನಾ ವಳಿಯು ಸಮುದ್ರದಿಂದೆದ್ದು ಎನ್ನ ಸಮೀವಕೆ ಬಂದಲ್ಲಿ ನಾನು ಭಾಗ್ಯವಂತಳೆಂದು ತಿಳಿ ಯುವೆನು. ಅ೦ಥ ಪುಣ್ಯವು ನನಗೆ ದೊರಕುವುದೋ ! ” ಎಂದು ಬಿಕ್ಕಿ ಬಿಕ್ಕಿ ಆಳುತ್ತಿರಲು ; ರಾಯನು ವಸುಭೂತಿಯನ್ನು ಹೊರದಷ್ಟಿ' ಎಲೈ ಬಾ ಭ್ರವ್ಯನೇ, ಇದರ ವೈ ತಾಂತವೇನಿರುವುದು? ಇದರ ಅಭಿಪ್ರಾಯವೇ ತಿಳಿಯಲಿಲ್ಲವು ' ಎಂದು ನುಡಿಯಲು; - ಅವನು- ಎಲೈ ರಾಜೇಂದ್ರನೇ, ಈ ವೃತ್ತಾಂತವನ್ನು ವಿಸ್ತಾರವಾಗಿ ವಿಜ್ಞಾಪನೆಯಂ ಗೆಯ್ಯುವೆನು ಎಂದು ನುಡಿಯುವಷ್ಟರಲ್ಲಿ ಅ೦ತಃಪುರದ ದ್ವಾರ ಪಾಲಕನು ಓಡಿಬಂದು,-ಮಹಾರಾಜೇಂದ್ರನೇ, ತನ್ನ ಕಾ೦ತಿಗಳಿ೦ದ ಉಪ್ಪರಿಗೆ ಗಳ ಚಿನ್ನದ ಕಲಶಗಳ ಕಾಂತಿಯನ್ನು ಮುಚ್ಚುತ, ಪಾರ್ಶ್ವದಲ್ಲಿರುವ ವೃಕ್ಷಲತೆಗ ಳನ್ನು ಕರಿಯಾಗಿ ಮಾಡುತ್ತ, ಬಲವಾಗಿ ಹೊರಡುವ ಹೊಗೆಗಳಿಂದ ಕ್ರೀಡಾಪರ ತದಲ್ಲಿ ಮೋಡದ ಸಿರಿಯನ್ನುಂಟುಮಾಡುತ್ತ, ಒಳಗಿರುವ ಸ್ತ್ರೀಯರುಗಳಿಗೆ ಹಾಹಾ ಕಾರವನ್ನುಂಟುಮಾಡಿಸುತ್ತ, ಅಂತಃಪುರನೆಲ್ಲವಂ ಮುಚ್ಚಿ, ಅಗ್ನಿಯು ಪ್ರಜ್ವಲಿ ಸುತ್ತಲಿರುವುದು ” ಎಂದು ಜಿನ್ನೆಸಲು ; ರಾಯನು ಪೀಠದಿಂದೆದ್ದು, ದಿಗಿಲಿನಿಂದ ವಾಸವದತ್ತೆಯು ಅಂತಃಪುರದಲ್ಲೇ ಇರುವಳೆಂದು ತಿಳಿದು, ಹೋ ಹೋ ! ಬಲವಾದ ಕಷ್ಟವು ಪ್ರಾಪ್ತವಾದುದು. ವಾಸವದತ್ತೆಯು ಉರಿಯಲ್ಲಿ ಸಿಕ್ಕೆ ದಗ್ಗಳಾದಳು. ಮೊದಲು ದೇವಿಯು ದಗ್ಧಳಾ ದಳೆಂಬ ಲೋಕಾಪವಾದವನ್ನು ಯಥಾರ್ಥವಂ ಗೆಯ್ಯಲೋಸುಗ ಈಗ ಅಂತಃಪರ ದಲ್ಲಿ ಅಗ್ನಿಯು ಪುಷ್ಟಿ ದಂತೆ ತೋರುವುದು, ಮುಂದೆ ಗತಿಯೇನು ? ಎಲೆ ಪ್ರಾಣಕಾಂ ತಳಾದ ವಾಸವದತ್ತೆಯೇ ! !” ಎಂದು ದೀನಸ್ವರದಿಂ ' ನಿನ್ನ೦ ರಕ್ಷಿಸುವರಾರು ? > ಎಂದು ನುಡಿಯುತ್ತಿರಲು ;