ಪುಟ:ವತ್ಸರಾಜನ ಕಥೆ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L8 - ಕರ್ನಾಟಕ ಕಾವ್ಯಕಲಾನಿಧಿ - ಇರಿಸಿಕೊಂಡು ವಿವಾಹಾದಿಗಳಂ ನಡೆಸತಕ್ಕುದೋ ನಿಮ್ಮ ಬುದ್ದಿಗಳಿಗೆ ಹೇಗೆ ತೋ ರುತ್ತಿರುವುದು, ಚೆನ್ನಾಗಿ ಆಲೋಚಿಸಿ ಉತ್ತರವಂ ಪೇಳ ಬಹುದು ? ” ಎಂದು ಅಪ್ಪಣೆ ಯ ಯಲು ; ವಿದೂಷಕನು-ಅಯ್ಯಾ ಮಂತ್ರಿಗಳೇ, ಎನ್ನ ಬುದ್ದಿಗೆ ತೋರುವ ವಾಕ್ಯ ವನ್ನು ಪೇಳುವೆನು, ಕೇಳಿ, ಈ ರತಾ ವಳಿಯನ್ನು ಇಲ್ಲಿಂದ ಸಿಂಹಳದೇಶಕೆ ಕಳು ಹಿಸಬೇಕಾದಲ್ಲಿ ನಮ್ಮ ರಾಜೇಂದ್ರನಿಗೆ ವಿವಾಹವಂ ವಿರಚಿಸಿ ಆ ಬಳಿಕ ಕಳುಹಿಸು ವುದು ಯುಕ್ತವಾಗಿರುವುದು, ಇಲ್ಲವಾದಲ್ಲಿ ಈ ರಾಜಪುತ್ರರುಗಳು ಆರಟ್ಟ ದೇಶಾ ಧಿಪತಿಯ ಪುತ್ರನಾದ ಕೀರ್ತಿವರ್ಮನಿಗೆ ಕೊಟ್ಟು ವಿವಾಹವಂ ಗೆಯ್ಯಬೇಕೆಂದು ಆಲೋಚಿಸಿ ಇದ್ದರೆಂಬ ಸಂಗತಿಯು ಮೊದಲೇ ವ್ಯಕ್ತವಾಗಿದೆಯಷ್ಟೆ. ಹೀಗಿರು ವಲ್ಲಿ ತಿಳಿದೂ ತಿಳಿದೂ ಕಳುಹಿಸತಕ್ಕುದು ಎಷ್ಟು ಮಾತ್ರಕ್ಕೂ ನೀತಿಗೆ ಹಿತವಾದ ಕಾರವಲ್ಲವ ” ಎಂದು ನುಡಿಯಲು ; ರಾಯನು- ವಿದೂಷಕನು ಯುಕ್ತವಾ ಗಿಯೇ ಹೇಳಿರುವನು ಎಂದು ನುಡಿಯುತ್ತಿರಲು ; ವಾಸವದತ್ತಾ ದೇವಿಯು(ಎಲೈ ಮಹಾರಾಜೇಂದ್ರನೇ, ಕೇಳು, ನಾನು ಆ ವಿಂದಾನುವಿಂದರುಗಳ ಅಭಿಪ್ರಾ ಯಮಂ ತಿಳಿದು ಆ ಬಳಿಕ ನಿಮಗೆ ಪ್ರತ್ಯುತ್ತರವಂ ವಿತ್ಥಾಪಿಸುವೆನು, ನೀವು ಸ್ಪಾ ನಭೋಜನಕೆ ಬಿಜಯಂ ಗೆಯ್ಯಬಹುದು ' ಎ೦ದು ಅರಿಕೆಯಂಗೆಯ್ಯಲು ;

  • ವಿದೂಷಕನು -« ಮೊದಲಾಗಿ ಭೋಜನವಾಗಿದ್ದಲ್ಲಿ ಅಬಳಿಕ ಇಂಥ ರತಾನ ಳಿಯಂಥ ನೂರು ಮಂದಿ ಸ್ತ್ರೀಯರನ್ನು ಸಂಪಾದಿಸಬಹುದು ” ಎಂದು ನುಡಿದು ಎಲ್ಲ ರಿಗೂ ಮಂದಹಾಸವನ್ನು ೦ಟುಮಾಡುತ್ತಿರಲು ;

ರಾಯನು ಅಲ್ಲಿಂದೆದ್ದು ಚಂದ್ರಕಾಂತಶಿಲೆಗಳಿಂದ ಸುಂದರವಾಗಿ ಶೀತಕೆ ವಾಸಭೂಮಿಯಾಗಿರುವ ಮಜ್ಜ ನಗೃಹಮಂ ಕುರಿತು ಬರುತ್ತಿರಲು ; ದೇವಿಯು“ ಅಯ್ಯಾ ಯೌಗಂಧರಾಯಣನೇ, ನೀನು ಪೋಗಿ ನಿಂದಾನುಪಿಂದರನು ಭೋಜನ ವಾದ ಬಳಿಕ ಎನ್ನ ಅಂತಃಪುರಕ್ಕೆ ಕರೆದುಕೊಂಡು ಬರುವುದು ” ಎಂದು ಅಪ್ಪಣೆ ಯ ಯಲು ; - ಇತ್ತಲು, ರಾಯನು ಕಳವಳವಂ ಪೊಂದಿ, ವಿದೂಷಕನಂ ಕರೆದು~ ಅಯಾ ಮಿತ್ರನೇ, ಅಂತಃಪುರದಲ್ಲಿ ವಾಸವದತ್ತಾ ಮುಂತಾದವರೆಲ್ಲಾ ಒಟ್ಟುಗೂಡುವರು. ಅಲ್ಲಿ ವಿಶೇಷವಾದ ವಾರ್ತೆಯು ಏನು ನಡೆಯುವುದೋ ಅದನ್ನು ತಿಳಿದುಕೊಂಡು ಬರುವನಾಗು ” ಎಂದು ನುಡಿಯಲವನು ರಹಸ್ಯವಾಗಿ ಬಂದು ಯಾರೂ ಕಾಣದ ಮುತ್ತಿನ ಹಜಾರದಲ್ಲಿ ಬಾಗಿಲ ಹಿಂಬಾಗವ ಸೇರಲು ; ಯೌಗಂಧರಾಯಣನು ವಿಂಹಾನುವಿಂದರುಗಳನ್ನು ಕರೆದುಕೊಂಡು ಬರುತ (ಅಯ್ಯಾ ರಾಜಪುತ್ರರೇ, ಇತ್ತಲು ಬಿತ್ತರವಾಗಿ ಕೆತ್ತಿದ ಮುಕ್ತಿನ ಗದ್ದುಗೆಯಲ್ಲಿ ರಾಜೋತ್ತಮನ ಪತ್ನಿಯಾದ ವಾಸವದತ್ತಾ ದೇವಿಯು ಮಂಡಿಸಿರುವಳು ?” ಎಂದು