ಪುಟ:ವತ್ಸರಾಜನ ಕಥೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ಅಷ್ಟರಲ್ಲೆ ಕಲಾವತಿಯೆಂಬ ದ್ವಾರಪಾಲಕಳಾದ ಕಾಂತೆಯು ಶೀಘ್ರದಿಂ ಜೋಗಿ,~l ಎಲ್‌, ದೇವಿಯೇ ! ಪೂಜ್ಯನಾದ ಮಹಾರಾಜನು ಬರುವನು ” ಎಂದು ವಿಜ್ಞಾಪಿಸಲಾ ಕಮಲಾವಳಿಯು ಇದಿರೆದ್ದು ಬರುತಿರಲು ; ಅಷ್ಟರಲ್ಲೆ ರಾಯನು ಕಂದಿದ ಮುಲಕಮಲವುಳ್ಳವನಾಗಿ, ಒಂದು ಪೀಠದಲ್ಲಿ ಕುಳಿತು, ನಮಸ್ಕಾರವಂ ಗೈದ ಕಮಲಾವಳೀದೇವಿಯಂ ನೋಡದೆ, ಕಲಾವತಿಯಂ ಕುರಿತು-- ಎಲ್‌, ಕಾಂತೆಯೇ, ಪುರೋಹಿತರನ್ನು ಇಲ್ಲಿಗೆ ಕರೆದುಕೊಂಡು ಬರು ವಳಾಗೆಂದು ನುಡಿಯಲು ; ಅವಳು-ಆಚ್ಛೆಯಾದಂತೆ ನಡೆದುಕೊಳ್ಳುವೆನೆಂದು ಆ ಪುರೋಹಿತನಂ ಕರೆದುಕೊಂಡುಬಂದು, ರಾಯನ ಸಮೀಪವಂ ಪೊಂದಿ, ಎಲೈ, ರಾಜೋತ್ತಮನೇ ? ಮಂತಿ )ಾದ ವಸುಭೂತಿಯು ಅಣ್ಣಿಯಾದಲ್ಲಿ ವಿಚಾರಣೆಗೊ ಸುಗವಾಗಿ ಬಂದಿದ್ದ ಪ್ರಜೆಗಳನ್ನೂ, ಸಾಮಾಜಿಕರುಗಳನ್ನೂ, ಸಾಮಂತರಾದ ಆರ ಸುಗಳನ್ನೂ ಸಹ ಅವರವರ ಬಿಡದಿಗೆ ಪೋಗುವಂತೆ ಆಜ್ಞಾಪಿಸುತ್ತೇನೆಂದು ವಿಜ್ಞಾ ಪಿಸುವುದಕ್ಕೆ ಬಂದಿರುವನು ” ಎಂದು ಬಿನ್ನವಿಸಲು; ರಾಯನು ಎಲೌ, ಅದೇರೀ ತಿಯಿಂದ ಕೇಳುವಂತೆ ನುಡಿದು, ಆ ಮಂತ್ರಿಯನ್ನು ಇಲ್ಲಿಗೆ ಕರೆದುಕೊಂಡು ಬರು ವಳಾಗು ?” ಎಂದು ಅಪ್ಪಣೆಯನ್ನಿ ಯಲು ; ಅವಳು ಪೋಗಿ ಅದೇರೀತಿಯಿಂದ ನುಡಿದು ಮಂತ್ರಿಯಂ ಕರೆದುಕೊಂಡು ಬರಲು; ರಾಯನು ಮಂತ್ರಿ ಪುರೋಹಿತರು ಗಳನ್ನು ಒತ್ತಿನಲ್ಲಿ ಕುಳ್ಳಿರುವಂತೆ ಅಪ್ಪಣೆಯನ್ನಿತ್ತು, ಕಮಲಾವಳಿಯ ಕರವನ್ನು ತನ್ನ ಕರದಿಂದ ಹಿಡಿದು ತನ್ನ ಸವಿಾಪದಲ್ಲಿ ಕುಳ್ಳಿರಿಸಿಕೊಂಡು, ಕೌಶಾಂಬೀನಗರಿಯಿಂದ ಬಂದ ಮಂತ್ರಿಯ ಪತ್ರಿಕೆಯನ್ನು ತನ್ನ ಮಂತ್ರಿಯ ಹಸ್ತಕೆ ಕೊಟ್ಟು, ( ಎಲೈ ಮಂತ್ರಿಯೇ, ಇಲ್ಲಿ ಇರುವ ನಾವು ಮಾತ್ರ ಕೇಳುವಂತೆ ಪತ್ರಿಕೆಯಂ ಓದುವನಾ ಗು” ಎಂದು ನುಡಿಯಲಾಮಂತ್ರಿಯ ಓದಲಾವತ್ರಿಕೆಯ ಅಭಿಪ್ರಾಯವಂ ಕೇಳಿ ಕಮಲಾವಳಿಯು ರಾಯನಂ ಕುರಿತು, - ಎಲೈ ಸ್ವಾಮಿಯೇ, ವಾಸವದತ್ತಾ ದೇ। ವಿಯ ವಿಚಾರದಲ್ಲಿ ದೈವಕಟಾಕ್ಷವು ತಪ್ಪಿದುದರಿಂದ-ಎಂದು ಬರೆದಿರುವ ವಾಕ್ಯ ದಿಂದ ಎನ್ನ ಮನದಲ್ಲಿ ಬಲವಾದ ಸಂಶಯವು ತಲೆದೋರಿರುವುದು ” ಎಂದು ಬಿನ್ನೈ ಸಲು ; ರಾಯನು ಪುರೋಹಿತನಂ ಕುರಿತು- ಅಯ್ಯಾ, ಪುರೋಹಿತರೆ ! ಈ ಪತ್ರಿಕೆಯ ಅಭಿಪ್ರಾಯವನ್ನು ತಿಳಿದ ನಿಮ್ಮ ಚಿತ್ರಕ್ಕೆ ಹೇಗೆ ತೋರುತ್ತಿರುವುದು ? ನಮ್ಮ ವಾಸವದತ್ತಾ ದೇವಿಯು ಜೀವದಿಂದ ಇರುವಳೊ ? ಇಲ್ಲವಾದಲ್ಲಿ ಪರಲೋ ಕದ ಸಿರಿಯಂ ಬಯಸಿರುವಳೊ ? ಮತ್ತು ವತ್ಸ ರಾಜನಿಗೆ ನಮ್ಮ ರತ್ನಾ ವಳಿಯ೦ ಕೊಟ್ಟು ಮದುವೆಯಂಗೆಯ್ಯುವದು ನಿಮ್ಮ ಚಿತ್ರಕ್ಕೆ ಸಮವಾಗಿ ಇರುವುದೋ ಇಲ್ಲವೋ ? ಚೆನ್ನಾಗಿ ಆಲೋಚಿಸಿ ಹೇಳುವವರಾಗಿ' ಎಂದು ನುಡಿಯಲಾ ಪೌರೋಹಿ ತನು-IC ಎಲೈ ಸ್ವಾಮಿಯೇ, ಕೇಳು, ನಾನು ತೀರ್ಥಯಾತ್ರೆಯಂ ಗೈದು ಬರುವ ಕಾಲದಲ್ಲಿ ಆ ವತ್ಸ ರಾಜನ ದೇಶಕ್ಕಾಗಿ ಬರುತ್ತಾ ಅವನ ವೃತ್ತಾಂತವೆಲ್ಲವನ್ನೂ