ಪುಟ:ವತ್ಸರಾಜನ ಕಥೆ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ - ೧೬೭ ವಾಸವದತ್ತೆಯು-'ಎಲೈ ಯೌಗಂಧರಾಯಣನೇ, ಶುಭಕಾಠ್ಯಕೆ ತಡಗೆಯ್ಯಬಾರ ದಾದುದರಿಂದ ಸಮಸ್ತ ವಸ್ತುಗಳನ್ನೂ ಸೇನೆಯನ್ನೂ ಸಹ ಸಜ್ಜು ಗೊಳಿಸುವನಾಗು' ಎಂದು ಪೇಳಲು ; ಯೌಗಂಧರಾಯಣನು- ಅಯ್ಯಾ ಪೂಜ್ಯ ನಾದ ವಸುಭೂ ತಿಯೇ, ವಿಕ್ರಮಬಾಹುರಾಯನು ಬರೆದು ಕಳುಹಿಸಿದ ರೀತಿಯಿಂದಲೇ ನಾವೆಲ್ಲರೂ ಬರುತ್ತಿರುವೆವು, ಈ ವಾರ್ತೆಯನ್ನು, ಮೊದಲಾಗಿ ಪೋಗಿ, ನಿಮ್ಮ ರಾಯಂಗೆ ವಿಜ್ಞಾ ಪಿಸುವನಾಗು ” ಎಂದು ಹೇಳಲಾವಸುಭೂತಿಯು ರಾಯನಿಂದಲೂ ದೇವಿಂ ದಲೂ ಅಪ್ಪಣೆಯಂ ತೆಗೆದು ಕೊಂಡು ತನ್ನ ದೇಶಕ್ಕೆ ತೆರಳಿ, ಈ ವಾರ್ತೆಯೆಲ್ಲವನ್ನು ವಿಸ್ತಾರವಾಗಿ ವಿಕ್ರಮಬಾಹುರಾಯನಿಗೂ ಕಮಲಾವಳಿಗೂ ಸಹ ಬಿನ್ಲೈಸಲು ; ಇತ್ತಲು, ವತ್ಸ ರಾಜನು ಎಣಿಸುವುದಕ್ಕೆ ಅಳವಲ್ಲದ ಸೇನೆಯಿಂದಲೂ ವಾಸನ ದತ್ತಾದೇವಿಯಿಂದಲೂ ಒಡಗೆ.೧೦ಡು, ಮಂತ್ರಿಯಾದ ಸೌಗಂಧರಾಯಣನಲ್ಲಿ ಸಮಸ್ತವಾದ ರಾಜ್ಯವನ್ನ ಇರಿಸಿ, ಸಿಂಹಳ ಪೇಶಾಭಿಮುಖನಾಗಿ ತಿರಒರುತ್ಯ, ಸಮುದ್ರತೀರದಲ್ಲಿ ತನ್ನ ಸೇನಾಸಮುದ್ರವನ್ನು ನಿಲ್ಲಿಸಿ, ನೆನಾದ ಹಡಗುಗಳನ್ನು ತರಿಸುವಂತೆ ಧನಗುಪ್ಪ ನೆ೦ಬ ವರ್ತಕನಿಗೆ ಆಟೈಯನ್ನಿ ೦ಯಲು ; ದೂಷಕನು ಬೆಟ್ಟ ಬೆಟ್ಟಗಳಂತೆ ಪುಷ್ಟಿ ಬರುವ ತಿರೆಗಳಿ೦ದಲೂ, ಮೈ ನಾಕ ಪರೈತಗಳೇ ತೇಲಿಬರು ವಂತೆ ತೋರುವ 5ನು ಮು೦ತಾದ ಜಲಚರಗಳಿ೦ದು , ಅನೇಕವಾದ ಕೈಲಾಸ ಪಕ್ವತಗಳಂತೆ ತೋರುವ ದೊರೆಗಳ ತ೦ಡಗಳಿ೦ದಲೂ ಮಂಡಿಸಿ -ನಗಳಿಗೆ ಗೋಚರವಲ್ಲದ ಮಹಿಮೆಯಿಂದ ಯುಕ್ತವಾದ ಸಮುದ್ರವಂ ಕ೦ಡು, ಅಯ್ಯಾ ರಾಜೇಂದ್ರನೇ, ರತ್ನಾ ವಳಿಯು ನಿನಗೆ ಪತ್ನಿ ಯಾಗುವಳು. ಆ ಮದುವೆಯ ಕಾಲ ದಲ್ಲಿ ಅನೇಕ ಗ್ರಕ್ಷಿಣೆಗಳನ್ನೂ ಬಹುಮಾನವನ್ನು ಪಡೆಯಬೇಕೆಂದು ಎನಗೆ ಪಟ್ಟಿದ್ದ ಆಸೆಯು ಈ ಸಮುದ್ರವನ್ನು ನೋಡಲಾಗಿ ಇ೦ಗಿ ಪೋದುದು, ಎನಗೆ ಅಪ್ಪಣೆ ಯನ್ನ ಕೊಟ್ಟೆ ಯಾದರೆ ಸ್ವಸ್ಥವಾಗಿ ಕೌಶಂಬಿ ಪುರವಂ ಸೇರಿ ಸುಖದಲ್ಲಿರುವೆನು. ಎಷ್ಟು ದೂರವಾಗಿ ನೋಡಿದರೂ ನೀರಿನ ಸಾರವನ್ನೆ ಕಾಣುವದಕ್ಕಾಗದೆ ಇರುವ ಈ ಸಮುದ್ರವನ್ನು ದಾಟಿ ಬರುವ್ರದು ಬಹು ಕಷ್ಟವಾಗಿರುವದು ” ಎಂದು ನುಡಿ ಯಲಾ ವಾಕ್ಯಕ್ಕೆ ವತ್ಸ ರಾಜನು ನಸುನಗೆಯಿಂದೊಡಗೂಡಿ ಇರುತಿರ್ದನು. ಎಂಬಲ್ಲಿಗೆ ಕಿ ಕೃಷ್ಣರಾಜಕಂತೀರವರಿಂ ಲೋಕೋಪಕಾರಾರವಾಗಿ ನವರಸಭರಿತವಾಗಿ ಕರ್ಣಾಟಕ ಭಾಷೆ.ಂದ ವಿರಚಿಸಲ್ಪಟ್ಟ ಶ್ರೀಕೃಷ್ಮರಾಜ ಸವು ಕ್ಯಾವಳಿಯೆಂಬ ಗ್ರಂಥದೋಳ! ವತ್ಸರಾಜನ ಕಥೆಯಲ್ಲಿ ಹತ್ತೊಂಬತ್ತನೆದು ಗುಚ್ಛಂ ಸಂಪೂರ್ಣ ೦. (3