ಪುಟ:ವತ್ಸರಾಜನ ಕಥೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ck - ಕರ್ನಾಟಕ ಕಾವ್ಯಕಲಾನಿಧಿ, - ಮಾಡಿಕೊಡಬೇಕೆ೦ದೊ೦ದು ಪತ್ರಿಕೆಯನ್ನು ಬರೆದುಕೊಂಡಿರುವನು, ಅವನಿಗೆ. ಕೊಡುವುದು ಯುಕ್ತವೆಂದು ರಾಜೇಂದ್ರನ ಚಿತ್ರಕ್ಕೂ ದೇವಿಯರ ಚಿತ್ರಕ್ಕೂ ತೋರಿರುವುದು ಲೋಕದಲ್ಲಿ ಪುತ್ರರಾದವರುಗಳು ತಾಯಿತಂದೆಗಳ ಮಾತುಗಳಂ ಕೇಳಿ ಅವರುಗಳಿಗೆ ಸಂತೋಷವನ್ನುಂಟುಮಾಡುವುದೇ ಯುಕ್ತಧಮ್ಮವ, ಮತ್ತು ರಾಮಚಂದ್ರ, ಪರಶುರಾಮ, ಈರುಚಕ್ರವರ್ತಿ-ಇವರುಗಳ ಕಥೆಗಳನ್ನು ಕೇಳಿ ರುವಿರಿ, ಪ್ರಜ್ಞಾಶಾಲಿಗಳಾದ ನಿಮಗೆ ವಿಶೇಷ ವಾಕ್ಯಗಳನ್ನು ವಿಜ್ಞಾಪಿಸುವುದಕ್ಕೆ ಶಕ್ತ ರಾಗಲಾರೆವು ” ಎಂದು ಬಿನ್ನೈಸಲಾವಿಂದಾನುವಿಂದರುಗಳು ಮಂತ್ರಿ, ಪುರೋಹಿತರು ಗಳ ವಾಕ್ಯಗಳಂ ಕೇಳಿ ಕೋಪದಿಂ ಕಣ್ಣುಗಳ೦ ಕೆಂಪುಗೂಡಿಸಿ- ಎಲೈ, ಮಂ ತ್ರಿಯೇ ! ಕೇಳು, ಪೂಜ್ಯರಾದ ತಾಯಿತಂದೆಗಳು ಒಪ್ಪಿದ ಬಳಿಕ ಬಾಲಕರಾದ ನಮ್ಮನ್ನು ಕೇಳತಕ್ಕೆ ಪ್ರಕೃತವೇ ಇಲ್ಲ. ಐಶ್ವರ್ಯವ ಬಲವಾಗಿರುವುದೆಂದು ಆ ವತ್ಸ ರಾಜನಿಗೆ ಎಷ್ಟು ಜನ ಪುತ್ರಿಯರನ್ನು ಕೊಟ್ಟರೂ ಕೊಡಬಹುದು. ” ಎಂದು ಹೇಳಿ ಅಲ್ಲಿ ನಿಲ್ಲದೆ ತಮ್ಮ ಅರಮನೆಯಂ ಕ ರಿತು ಪೋಗಲು ; ಮಂತ್ರಿ, ಪುರೋಹಿತರಿಬ್ಬರೂ ಬೆನ್ನ ಹೃದಯರಾಗಿ ಬರುತ್ತ, ಮಂತ್ರಿಯು ಪುರೋಹಿತನಂ ಕುರಿತು- ಎಲೈ ಪುರೋಹಿತರೇ, ಈ ವಿಂದಾನುವಿಂದರುಗಳು ಮಾಡಿರುವ ದುರಾಲೋಚನೆಯನ್ನು ಮೊದಲೇ ನಾನು ಹೇಳಿದೆನಷ್ಟೆ, ಅದಕ್ಕೆ ಸರಿಯಾದ ಉತ್ತರವನ್ನು ಹೇಳಿ ಹೋದರು, ಈಗ ಈ ವಾರ್ತೆಯನ್ನು ಕೇಳಿದ ನಮ್ಮ ರಾಯನು ಮಕ್ಕಳಲ್ಲಿ ವಾತ್ಸಲ್ಯವಂ ಬಿಟ್ಟು ಅವರಿಗೆ ತಕ್ಕ ಶಿಕ್ಷೆಯನ್ನುಂಟುಮಾಡದೆ ಬಿಡನು, ಮತ್ತು ರಾಜಾಜ್ಞೆಯಂ ಮಾರಿದವನು ತಂದೆಯಾದರೂ ಮಗನಾದರೂ ತಮ್ಮನಾದರೂ ಸರಿ, ಅವರುಗಳಿಗೆ ದಾಕ್ಷಿಣ್ಯವಿಲ್ಲದೆ ಬಲವಾದ ದಂಡನೆಯನ್ನು ೦ಟು ಮಾಡುವುದು ರಾಜ ನೀತಿಗೆ ಮುಖ್ಯಧರ್ಮವಾಗಿರುವದು, ಈಗ ವಿಂದಾನುನಿಂದ ರುಗಳು ಸಮ್ಮತರಾಗದೆ ಉತ್ತರವನ್ನು ಚೆನ್ನಾಗಿ ಕೊಡದೆ ಕೋಪವನ್ನು ತಾಳಿ ಪೋದರೆಂದು ರಾಯನೊಡನೆ ಹೇಳಿದಲ್ಲಿ, ಏನು ಅನರ್ಥವಾದ ಕಾರ್ಯ ವ ಕೈಸೇ ರುವುದೋ ತಿಳಿಯಲಾಗದು, 1” ಎಂದು ನುಡಿಯಲಾಪುರೋಹಿತನು-II ಅಯ್ಯಾ ಮಂತಿ ಗಳೇ, ನಡೆದ ಕಾರ್ಯವನ್ನು ವಂಚಿಸದೆ ರಾಯನಿಗೆ ವಿಜ್ಞಾಪಿಸುವುದು ನಮಗೆ ಮುಖ್ಯಧರ್ಮವು ” ಎಂದು ನುಡಿಯುತ್ತ, ರಾಯನ ಸನ್ನಿ ಧಾನವಂ ಸೇರಿ ತಲೆಯಂ ತಗ್ಗಿಸಿ ನಿಲ್ಲಲು; ಆರಾಯನು ಏನೋ ಒಂದು ಸರಿಯಾಗಿ ಪ್ರತ್ಯುತ್ತರವನ್ನು ಹೇಳದೆ ಭಯ ಯವನ್ನು ಹೊಂದಿರುವ ಮಂತ್ರಿ, ಪುರೋಹಿತರುಗಳ ಮುಖವಂ ನೋಡಿ- ಎಲೈ, ಮಂತ್ರಿ ಪುರೋಹಿತರೇ ! ಪುತ್ರರಾದ ವಿಂದಾನುವಿಂದರುಗಳು ಎನ್ನ ಅಭಿಮತ ವನ್ನು ಅಂಗೀಕರಿಸದೆ ಪೋದರೆಂಬ ಅಭಿಪ್ರಾಯವು ನಿಮ್ಮ ಮುಖಗಳನ್ನು ನೋಡಿ ದಮಾತ್ರದಿಂದಲೇ ತಿಳಿಯಲಾದುದುಎಂದು ಅಪ್ಪಣೆಯನ್ಶಿಯಲು; ಅವರಿಬ್ಬರೂ