ಪುಟ:ವತ್ಸರಾಜನ ಕಥೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܛ - ಕರ್ಣಾಟಕ ಕಾವ್ಯಕಲಾನಿಧಿ, - ವುದು. ಇದಕ್ಕೆ ನಿಮ್ಮ ಬುದ್ದಿಗೆ ಹೇಗೆ ತೋರುವುದು ? ?” ಎಂದು ಕೇಳಲು ; ಧನ ಗುಪ್ತನು-II ಅಯ್ಯಾ ಮಂತ್ರಿಗಳೇ, ಈ ಬಾಲಕಿಯನ್ನು ನೀವು ಹೇಳಿದಂತೆ ದೇವಿ ಯ ಅಂತಃಪುರಕ್ಕೆ ಒಪ್ಪಿಸುವುದೇ ಯುಕ್ತವಾಗಿ ತೋರುವುದು ?” ಎಂದು ನುಡಿ ಯಲು ; ಮಂತ್ರಿಯು ರತ್ನಾ ವಳಿಯನ್ನು ತನ್ನ ಪತ್ನಿಯಾದ ಕಾಂತಿಮತಿಯ ಸವಿಾ ಪದಲ್ಲಿ ಕರೆದುಕೊಂಡು ಪೋಗಿ-II ಎಲೆ ಕಾಂತೆಯೇ, ಈ ಬಾಲಕಿಯನ್ನು ನೋಡು ವಳಾಗು. ಬ್ರಹ್ಮಸೃಷ್ಟಿಯಲ್ಲಿ ಇಂಥ ಸ್ತ್ರೀಯು ಪುಟ್ಟುವುದು ದುರ್ಲಭವಾಗಿರು ವುದು. ಇವಳನ್ನು ದೇವಿಗೆ ವಿಜ್ಞಾಪನೆಯಂ ಗೈದು ಅಂತಃಪುರಕ್ಕೆ ಕರೆದುಕೊಂಡು ಪೋಗುವವರೆಗೂ ಇಲ್ಲೇ ಇರಿಸಿಕೊಂಡಿರುವಳಾಗು ” ಎಂದು ಹೇಳಿ ಏನೋ ಒಂದು ರಾಜಕಾರವನ್ನು ವಿಜ್ಞಾಪನೆಯಂ ಗೆಯ್ಯಲು ದೇವಿಯ ಸನ್ನಿಧಿಯಂ ಕುರಿತು ಪೋಗಲು ; ಇತ್ತ, ಕಾಂತಿಮತಿಯು ರತ್ನಾವಳಿಗೆ ದೃಷ್ಟಿ ತಾಗುವುದೆಂದು, ಬಿಟ್ಟ ಕಣ್ಣು ಮು ಘದೆ ಅರೆಬಾಯಿ ತೆರೆದು ನೋಡುವ ಊಳಿಗದ ಹೆಣ್ಣು ಗಳಂ ಕುರಿತು ಎಲ್‌ ಬಾಲೆಯರಿರಾ ! ನಿಮ್ಮಂತೆ ಅವಳೂ ವೆಲ್ಲವೆ. ದೊಂಬಿಗೈದು ಯಾಕೆ ನಿಂದಿರುವಿರಿ? 12 ಎಂದು ಗರ್ಜಿಸಿ ನುಡಿದು, ರತ್ನಾ ವಳಿಗೆ ತನ್ನ ಕೈಯಿಂದಲೇ ಆರೆಬಿರಿದು ಪರಿಮಳವಂ ಸೂಸುತ್ತಿರುವ ದುಂಡುಮಲ್ಲಿಗೆಯ ಮಾಲೆಯಿಂದ ಅವಳ ಮುಡಿಯನ್ನು ಅಲಂಕರಿಸಿ ಗಂಧತಾಂಬೂಲನಂ ಕೊಟ್ಟು ಒತ್ತಿನಲ್ಲಿ ಕುಳ್ಳಿರಿಸಿ ತನ್ನ ಹಸ್ತದಿಂದ ಪ್ರಶಸ್ತವಾದ ಅವಳ ಮಸ್ತಕವನ್ನು ಸವರುತ್ತ ಧಸಗುಪ್ತನನ್ನು ಕರೆಯಿಸಿ, ಅವಳ ವೃತ್ತಾಂತವನ್ನು ಕೇಳಿ ತಿಳಿದು ಸಂತುಷ್ಟಳಾಗಿ ಎಲೆ ಬಾಲೆಯೇ, ನೀನು ರಾಜಪತ್ನಿ ಯಾದ ಬಳಿಕ ನಮ್ಮನ್ನು ಮರೆಯದಿರು ” ಎಂದು ನುಡಿಯಲು ; ರತ್ನಾ ವಳಿಯು ಲಜ್ಞೆಯಿಂದ ತಲೆ ಯಂ ತಗ್ಗಿಸಿ- ಸುಮಂಗಲೆಯಾಗಿ ವೃದ್ದೆಯಾದ ನಿನ್ನ ವಾಕ್ಯವು ಸತ್ಯವಾಗಲಿ ! ೨) ಎಂದು ತನ್ನ ಮನದಲ್ಲೇ ನುಡಿದುಕೊಳ್ಳುತ್ತಿರಲು ; ಇತ್ತಲು ಮಂತ್ರಿಯು ವಾಸವದತ್ತೆಯ ಸಾಸನಂ ಪೊಂದಿ, ನಮಸ್ಕರಿಸಿ, ರಾ ಜಕಾರವನ್ನು ವಿಜ್ಞಾಪಿಸಿ, ಹಿಂದಿರುಗಿ ಪೋಗದೆ ನಿಂದಿರಲು; ದೇವಿಯು-II ಅಯ್ಯಾ ಮಂತ್ರಿಯೇ ! ಇನ್ನೇನೋ ಒಂದು ಕಾಠ್ಯವನ್ನು ಅರಿಕೆಯಂ ಗೆಯ್ಯುತ್ತಿರುವಂತೆ ತೋರುತ್ತಿರುವುದು' ಎಂದು ಅಪ್ಪಣೆಯನ್ಶಿಯಲು; ಮಂತ್ರಿಯು- ಎಲೌ ದೇವಿಯೆ, ನಿಮ್ಮ ಚಿತ್ರಕ್ಕೆ ಸಮ್ಮತವಾದಲ್ಲಿ ಒಂದು ಕಾರವನ್ನು ವಿಜ್ಞಾಪಿಸಬೇಕೆಂದು ನಿಂತಿರು ವೆನು ” ಎನಲು, ದೇವಿಯು- ಅಯ್ಯಾ ಮಂತ್ರಿಗಳೇ, ಯಾವುದೊಂದು ಸಂದೇ ಹವನ್ನೂ ಹೊಂದದೆ ಪೇಳುವರಾಗಿ ?” ಎಂದು ನುಡಿಯಲು ; ಮಂತ್ರಿಯು ರತ್ನಾ ವ ಳಿಯು ಸಮುದ್ರಮಧ್ಯದಲ್ಲಿ ದೊರಕಿದುದು ಮೊದಲಾಗಿ ತನ್ನ ಮನೆಯಲ್ಲಿ ಇರುವವ ರೆಗೂ ವಿಜ್ಞಾಪಿಸಲು ; – ದೇವಿಯು ಅಯ್ಯಾ ಮಂತ್ರಿ ಗಳೇ, ನೀವು ಹೇಳಿದ ಬಾಲೆಯು ರೂಪಿನಲ್ಲಿಯೂ ಗುಣದಲ್ಲಿಯೂ ಎಂತಿರುವಳು ? ?” ಎನಲು ; ಮಂತ್ರಿಯು